ಮಗನೊಂದಿಗೆ ಪ್ರಶಸ್ತಿಯ ಸವಿಕ್ಷಣದಲ್ಲಿ ದರ್ಶನ್ !

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬ್ರಿಟನ್‌ನ ‘ಗ್ಲೋಬಲ್ ಡೈವರ್ಸಿಟಿ’ ಪ್ರಶಸ್ತಿ ಪ್ರಾಪ್ತವಾಗಿದೆ.. ಬ್ರಿಟೀಷ್ ಪಾರ್ಲಿಮೆಂಟ್ ಆಹ್ವಾನದ ಮೇರೆಗೆ ಲಂಡನ್‌ಗೆ ತೆರೆಳಿದ್ದ ನಟ ದರ್ಶನ್ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಆ ಶುಭ ಗಳಿಗೆಯ ಸಮಾರಂಭದ ಫೋಟೋಗಳನ್ನ ಸ್ವತಃ ದರ್ಶನ್ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ..

ಕನ್ನಡ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ   ದರ್ಶನ್‌ಗೆ ಈ ಪ್ರಶಸ್ತಿಯನ್ನ ನೀಡಿದ್ದಾರೆ.. ಇದು ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ಸಂತೋಷ ತಂದಿದೆ.. ಅದ್ರಲೂ ದರ್ಶನ್ ಡೈಹಾರ್ಡ್ ಫ್ಯಾನ್ಸ್‌ಗಳಿಗೆ ಭಾರಿ ಸಂತಸ ತಂದಿದೆ. ದೀಪಾವಳಿ ಹಬ್ಬವನ್ನ ಇನಷ್ಟು ಜೋರಾಗಿ ಆಚರಿಸಲು ಜೋಶ್ ಬಂದತ್ತಾಗಿದೆ.. ಪ್ರಶಸ್ತಿ ಸಮಾರಂಭದಲ್ಲಿ ದರ್ಶನ್‌ರ ಮಗ ವಿನೇಶ್ ಹಾಗೂ ಅವರ ಆತ್ಮೀಯ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ಸ್ವೀಕಾರ ಸಮಾರಂಭದಲ್ಲಿ ದರ್ಶನ್ ಹಾಗೂ ಅವರ ಪುತ್ರ ಒಂದೇ ರೀತಿಯ ಸೂಟ್ ನಲ್ಲಿ ಮಿಂಚಿದ್ದು ವಿಶೇಷವಾಗಿತ್ತು.

ಲಂಡನ್‌ನಿಂದ ವಾಪಸ್ ಬಂದ ತಕ್ಷಣವೇ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಳಲಿದ್ದಾರೆ..

-Ad-

Leave Your Comments