ಅಂಬಿಗೆ ವಿಶ್ ಮಾಡಿದ ದಚ್ಚು-ಕಿಚ್ಚು

ಇವತ್ತು ಕನ್ನಡ ಚಿತ್ರರಂಗದ ರೆಬೆಲ್ ಗೆ 65 ನೇ ವರ್ಷದ ಸಂಭ್ರಮ ಸಡಗರ. ಚಿತ್ರರಂಗದ ಹಲವು  ಖ್ಯಾತ ಕಲಾವಿದರು, ಹಿರಿಯ ಕಲಾವಿದರು, ಹೊಸಬರು ಸೇರಿದಂತೆ ಸಾಕಷ್ಟು ಗಣ್ಯರು ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಅದರಲ್ಲೂ ಸ್ಯಾಂಡಲ್ ವುಡ್ ನಲ್ಲಿ ಚಿಗರಿ ದೋಸ್ತಿಗಳು ಅಂತ ಹೆಸರು ಮಾಡಿದ್ದ ಆ ಇಬ್ಬರು ನಟರು ವಿಶ್ ಮಾಡಿರೋದು ವಿಶೇಷ..

ನನಗೆ ಇಬ್ಬರೂ  ಮಕ್ಕಳಿದ್ದಂತೆ ಅಂದಿದ್ರು ಅಂಬಿ

ಕನ್ನಡ ಚಿತ್ರರಂಗದಲ್ಲಿ ಸುದೀಪ್ ಹಾಗೂ ದರ್ಶನ್ ಇಬ್ಬರು ನಮಗೆ ಮಕ್ಕಳಿದ್ದ ಹಾಗೆ. ಅವರಿಬ್ಬರು ಇನ್ನೂ ಎತ್ತರಕ್ಕೆ ಬೆಳೆಯಲಿ ಅಂತಾ ಅಂಬರೀಶ್ ಆಶೀರ್ವದಿಸಿದ್ರು. ಆದ್ರೆ ಅದ್ಯಾವ ಕೆಟ್ಟ ಕಣ್ಣು ಅವರಿಬ್ಬರ ಮೇಲೆ ಬಿತ್ತೋ ಏನೋ ಗೊತ್ತಿಲ್ಲ. ಇಬ್ಬರೂ  ದೂರವಾಗಿದ್ದಾರೆ. ಆದ್ರೆ ಆ ಸಹೋದರರಿಬ್ಬರೂ ಅಂಬರೀಶ್ ಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ವಿರೋಧ ಪಕ್ಷದವರಿಂದಲೂ  ಶುಭ ಹಾರೈಕೆ

ನಟ ಜಗ್ಗೇಶ್ ಭಾರತೀಯ ಜನತಾ ಪಕ್ಷದಲ್ಲಿದ್ದಾರೆ. ಆದರೆ ಚಿತ್ರರಂಗದಲ್ಲಿ ಸುಮಾರು ವರ್ಷಗಳ ಕಾಲ ಅಂಬರೀಶ್ ಜೊತೆ ಕೆಲಸ ಮಾಡಿರುವ ಜಗ್ಗಣ್ಣ ಕೂಡ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.

ಕುಚುಕುಗಳ ನಡುವೆ ಮಧ್ಯಸ್ಥಿಕೆ ಮಾಡ್ತಾರಾ  ಅಂಬಿ ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ ನಡುವೆ ಉಂಟಾಗಿರುವ ಬಿರುಕು ಶಮನ ಮಾಡಲು ಅಂಬಿ ಮಧ್ಯಸ್ಥಿಕೆ ಮಾಡ್ತಾರಾ ಅನ್ನೋ ಕುತೂಹಲ ಇಬ್ಬರ ಅಭಿಮಾನಿ ವಲಯದಲ್ಲಿ ಸೃಷ್ಟಿಯಾಗಿದೆ. ಇವರಿಬ್ಬರು ಕುಚುಕು ಗೆಳೆಯರ ಮನಸ್ತಾಪಕ್ಕೆ ಅದೇನೇ ಕಾರಣ ಇರಲಿ, ಅದ್ಯಾರೇ ತಪ್ಪು ಮಾಡಿರಲಿ ಅಂಬರೀಶ್ ಮಧ್ಯಸ್ಥಿಕೆ ವಹಿಸಿದ ಮೇಲೆ ಸಮಸ್ಯೆ ಫಿನೀಷ್ !  ಭಾರತೀಯ ಪುರಾಣದಲ್ಲಿ ಕರ್ಣ ಕೊಟ್ಟ ಮಾತು ತಪ್ಪಲ್ಲ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಕರ್ಣನ ಮಾತನ್ನೂ ಯಾರೂ ಸುಲಭಕ್ಕೆ ಮೀರಲ್ಲ. ಇಬ್ಬರ ನಡುವೆ ಮನಸ್ತಾಪ ದೂರ ಮಾಡಲು ಅಂಬರೀಶ್ ಬಿಟ್ಟರೆ ಬೇರೆ ಯಾವ  ಆಯ್ಕೆಗಳಿಲ್ಲ. ಅಂಬರೀಶಣ್ಣ ಈ ಬಗ್ಗೆ ಯೋಚನೆ ಮಾಡಲಿ ಕನ್ನಡ ಚಿತ್ರರಂಗದ ಕಣ್ಮಣಿಗಳಾದ ದಚ್ಚು-ಕಿಚ್ಚು ಒಂದಾಗಲಿ.

ಸರ್ವಸಮರ್ಥ, ನಾಗಮಂಗಲ

-Ad-

Leave Your Comments