ದರ್ಶನ್ ಭಕ್ತಿ ಪರವಶರಾದ ಬಗೆ ನೋಡಿ

ಅಯ್ಯಪ್ಪ ಮಾಲೆ ಧರಿಸಿದ ಚಾಲೆಂಜಿಂಗ್ ಸ್ಟಾರ್
ಚಕ್ರವರ್ತಿ ಸಿನಿಮಾದ ಟ್ರೇಲರ್ ದಾಖಲೆ ಬರೆಯುತ್ತಿದೆ. ಈಗಾಗಲೇ ಹದಿಮೂರೂವರೆ ಲಕ್ಷ ಮಂದಿ ಟ್ರೇಲರ್ ನೋಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಆ ಸಂಖ್ಯೆ ಹದಿನಾಲ್ಕು ಲಕ್ಷಕ್ಕೇರುವುದರಲ್ಲಿ ಅಚ್ಚರಿಯಿಲ್ಲ. ಈ ಮಧ್ಯೆ ದರ್ಶನ್ ಅಯ್ಯಪ್ಪ ಮಾಲಾಧಾರಿಯಾಗಿದ್ದಾರೆ.
ಮೊದಲಿಂದಲೂ ದರ್ಶನ್ ಅವರು ಅಯ್ಯಪ್ಪ ಭಕ್ತರು. ಪ್ರತೀವರ್ಷ ಮಾಲೆ ಧರಿಸಿ ಶಬರಿಮಲೆಗೆ ಹೋಗಿ ಬರುತ್ತಾರೆ. ಪ್ರತೀಸಲದಂತೆ ಈ ಸಲವೂ ಶ್ರೀರಾಮಪುರದಲ್ಲಿರುವ ಅಯ್ಯಪ್ಪ ದೇಗುಲದಲ್ಲಿ ಮಾಲೆ ಧರಿಸಿದ್ದಾರೆ. ಒಂದು ವಾರ ಮಾಲಾಧಾರಿಯಾಗಿರುತ್ತಾರೆ. ಏಪ್ರಿಲ್ ಆರರಂದು ಶಬರಿಮಲೆಗೆ ಯಾತ್ರೆ ಹೊರಡಲಿದ್ದಾರೆ. ಅವರ ಜೊತೆ ಅವರ ಸಹೋದರ ದಿನಕರ್, ನಿರ್ದೇಶಕ ಎಚ್ ವಾಸು, ನಿರ್ದೇಶಕ ಶಿವಮಣಿ, ನಿರ್ದೇಶಕ ಶ್ರೀಧರ್ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿ ಅಯ್ಯಪ್ಪ ದರ್ಶನ ಮಾಡಿ ಬರಲಿದ್ದಾರೆ.
ಇಲ್ಲಿರೋ ವೀಡಿಯೋ ನೋಡಿ.
ದರ್ಶನ್ ಭಕ್ತಿ ಪರವಶರಾದ ಬಗೆಯನ್ನು ನೋಡಿ.

-Ad-

Leave Your Comments