ಬೆಳಕಿನ ಹಬ್ಬದ ಬಂಪರ್ .. ಬಣ್ಣದ ಲೋಕ ಸೂಪರ್ !!

ಒಂದು ಕಡೆ ಕಚಗುಳಿಯಿಡುವ ಲವ್ ಲವಿಕೆಯ ಸಕ್ಕತ್ “ಸಂತು”, ಮತ್ತೊಂದು ಕಡೆ ಬುದ್ದಿವಂತ “ಮುಕುಂದ ಮುರಾರಿ” ಇನ್ನೊಂದು ಕಡೆ ಮನಸ್ಸಿನಾಳಕ್ಕಿಳಿವ “ರಾಮಾ ರಾಮಾ ರೇ” .. ಕಲರ್ ಕಲರ್ ಹಣತೆಗಳ ಕಾಮನಬಿಲ್ಲು .

img-20161029-wa0068-1ಆಕ್ಟಿಂಗು ,ಫೈಟಿಂಗು, ಹಾಡು, ಲವ್ ಸೀನು ,ಪಕಪಕನೆ ನಗಿಸುವ ಪಂಚಿಂಗ್ ಡೈಲಾಗುಗಳು , ಲುಕ್ಕು , ಸ್ಟೈಲು, ಸ್ಮೈಲು, ‘ನಮ್ ಗುರು ಬಿಟ್ಟಾ ಅಂದ್ರೆ ಭೂಲೋಕಾನು ಎಗರಿ ಹೋಗುತ್ತೆ ಗೊತ್ತಾ’ ಅಂತ ತಮ್ಮ ಹೀರೋಗಾಗಿ ಹಾರಿ ಹಾರಿ ಬೀಳುವವರು, ಅಯ್ಯೋ.. ಒಳ್ಳೆ ರಾಜ್ಕುಮಾರ್ ಭಾರತಿ ಜೋಡಿ ಇದ್ದಂಗವ್ರೆ ನಮ್ ಯಶ್-ರಾಧಿಕಾ ಅಂತ ದೂರದಿಂದಲೇ ಮುದ್ದಾಡಿ ನೆಟಿಕೆ ತೆಗೆಯೋವ್ರು ನೆಟ್ಟಗೆ ಹೊರಡಿ ನಿಮಗೋಸ್ಕರ ಕಾಯ್ತಿದ್ದಾನೆ “ಸಂತು straight ಫಾರ್ವರ್ಡ್”

a0d1d65793a26e024707b45579cc0750-1471406657ಡೋಂಗಿ ಬಾಬಾ, ಪುಂಗಿದಾಸರ ಕಾಲಿಗೆ ಬಿದ್ದು, ಕೈಯಲ್ಲಿರೋ ಕಾಸ್ ಕಳ್ಕೊಂಡು, ಬುದ್ಧಿನಾ ಬೀದಿಗೆ ಬಿಸಾಡಿ ಕೈ ಕೈ ಇಸುಕ್ ಕೊಂಡು, ತಮ್ ಸಂಕಟಾನೆಲ್ಲ ದೇವ್ರ್ ತಲೆಗೆ ಕಟ್ಟಿ ಸೋಮಾರಿಗಳಾಗದೆ, ಬದುಕ್ಬೇಕು ಬುದ್ದಿವಂತರಾಗ್ಬೇಕು ಅಂತ ಆಸೆ ಪಡೋವ್ರು, ಸಿನಿಮಾ ಅಂದ್ರೆ ನಮ್ ರಿಯಲ್ ಸ್ಟಾರ್. ರಿಯಲ್ ವಿಷಯಗಳನ್ನ ಮುಖ ಮೂತಿ ನೋಡದೆ ಚಾಟಿ ಬೀಸೋ ಸಿಡಿಗುಂಡು “ಉಪ್ಪಿ”ಗಿಂತ ರುಚಿ ಬೇಕೇ!? ಅನ್ನೋವ್ರು, ಆಹಾ ಮಾಣಿಕ್ಯ ಕಣ್ರೀ ನಮ್ ಬಿಗ್ ಬಾಸು, ರನ್ನ, ಕನ್ನಡದ ಅಪ್ಪಟ ಚಿನ್ನ, ಕಿಚ್ಚು ಹಚ್ಚಿದ ಕೆಂಪೇಗೌಡ ಈಗ ಮುರಾರಿ ಆಗಿ ಬಂದಿರುವಾಗ ನೋಡದಿರಲಿ ಹೇಗೆ ನಿನ್ನ ಅನ್ನೋವ್ರು ಹಿಂದು-ಮುಂದು ನೋಡದೆ ಬೇಗ ಬೇಗ ನೋಡಿ ಕಾಯುತ್ತಿರುವರು “ಮುಕುಂದ ಮುರಾರಿ”

rama-rama-re-kannada_movie-music-review-iruveಇದು ಮನಸಿನ ಮಾತಪ್ಪ ಕನ್ನಡದ ಹೊಸ ಕನಸುಗಾರರ ಕೂಸಪ್ಪ ನಾವು ಕೈ ಹಿಡಿಯದೇ, ಅಪ್ಪಿಕೊಳ್ಳದೆ, ಮುದ್ದಿಸದೆ, ಬೆಳೆಸುವವರು ಯಾರಪ್ಪ ? ತಣ್ಣಗೆ ಕೂತು ಅಬ್ಬರವಿಲ್ಲದ ಸವಿಸವಿ, ಸಕತ್ ಹಾಡುಗಳ ಕೇಳಿ, ಮನುಷ್ಯ ಸಂಬಂಧಗಳು ಸಮಯ, ಸನ್ನಿವೇಶಕ್ಕೆ ಹೇಗೆಲ್ಲಾ ಬದಲಾಗುತ್ತವೆ, ಗಟ್ಟಿಯಾಗುತ್ತವೆ ಅನ್ನುವುದನ್ನು ನೋಡಬೇಕು ಅನ್ನುವಂತವರು, ಕನ್ನಡದಲ್ಲಿ ಒಳ್ಳೆ ಸಿನಿಮಾಗಳೇ ಇಲ್ಲ ಕಣ್ರೀ ಅಂತ ಗೊಣಗಾಡ್ತಿದ್ದವರು, ಕಂಟೆಂಟ್ .. ಕಂಟೆಂಟ್ .. ಚೆನ್ನಾಗಿರಬೇಕು ಕಣ್ರೀ, ಕಥೆ ಇಲ್ಲದಿದ್ರೆ ಮುಖಗಳನ್ನ ನೋಡೋಕೆ ಯಾಕ್ ಹೋಗ್ಬೇಕು ಹೇಳಿ ? ಅನ್ನೋವಂತವರು ಕಾಸಿಲ್ಲದಿದ್ದರೂ ಶ್ರಮ, ಪ್ರತಿಭೆ ಬಸಿದು ಕೊಟ್ಟು ನೋಡಿದವರೆಲ್ಲ ಜೈ ಜೈ ಅಂದಿರೋ ಸಿನಿಮಾ ಕಾಯುತ್ತಿದೆ ಹೋಗಿ ಹೋಗಿ ಬಿಡದೆ ನೋಡಿ “ರಾಮಾ ರಾಮಾ ರೇ..”

ಮನಸಿನ ಹಬ್ಬಕ್ಕೆ ಇಷ್ಟು ಸಾಕಲ್ಲವಾ ಸದ್ಯಕ್ಕೆ .

ವಿಭಾ

-Ad-

Leave Your Comments