ಯವ್ವಿ ಯವ್ವಿ…ಡಿಂಪಲ್ ಬೆಡಗಿ ‘ದೀಪಿಕಾ’ಳ ಬಾಲಿವುಡ್ ಸಂಭಾವನೆ ಎಷ್ಟು ಗೊತ್ತಾ?

ಚಿತ್ರಗಳು ಕೋಟಿ ಕಲೆಕ್ಷನ್ ಮಾಡಿದ್ಮೇಲೆ ಹೀರೊಗಳು ಎರಡಂಕಿಯ ಕೋಟಿ ಜೇಬಿಗಿಳಿಸುವುದು ಬಿಟೌನಲ್ಲಿ ಮಾಮೂಲಿ.ಆದರೆ ಸೂಪರ್ ಹಿಟ್ ಚಿತ್ರಗಳ ನಾಯಕಿ ಕೂಡ ಎರಡಂಕಿ ಕೋಟಿಗಳನ್ನು ಸಂಭಾವನೆ ಪಡೆಯಬಹುದು ಎಂಬುದನ್ನು ಕನ್ನಡತಿ ದೀಪಿಕಾ ನಿರೂಪಿಸಿದ್ದಾಳೆ.

ಸದ್ಯದ ಮಟ್ಟಿಗೆ “ಅದೃಷ್ಟ ಲಕ್ಷ್ಮಿ” ನಟಿ ಡಿಂಪಲ್ ಕ್ವೀನ್ ‘ದೀಪಿಕಾ ಪಡುಕೋಣೆ’ಯೊಂದಿಗೆ ಜೋತು ಬಿದ್ದಿದೆ.

ಇದಕ್ಕೆ ಮುಖ್ಯ ಕಾರಣ ಡಿಪ್ಸ್ ಬಣ್ಣ ಹಚ್ಚಿದ ಇತ್ತೀಚಿನ ಚಿತ್ರಗಳಾದ ರಾಮ್ ಲೀಲಾ, ಹೆ ಜವಾನಿ ಹೆ ದೀವಾನಿ, ಬಾಜಿರಾವ್ ಮಸ್ತಾನಿ, ಪೀಕು ನಂತಹ ಚಿತ್ರಗಳು ಸೂಪರ್ ಹಿಟ್ ಆಗಿದ್ದಲ್ಲದೇ ಎಲ್ಲಾ ಸಿನೆಮಾಗಳು 100ಕೋಟಿ ಕಲೆಕ್ಷನ್ ಮಾಡಿದ ಚಿತ್ರಗಳ ಕ್ಲಬ್’ಗೆ ಸೇರಿರುವುದು.

ಬಾಲಿವುಡ್’ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಡಿಪ್ಸ್ ಪಡೆಯುತ್ತಿರುವ ಸಂಭಾವನೆ ಸುದ್ದಿ ಬಿಟೌನ್ ಕಡಲತೀರದಲ್ಲಿ ಹೊಸ ಅಲೆಯೆಬ್ಬಿಸಿದೆ.

ಕನ್ನಡದ ಐಶ್ವರ್ಯ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಡಿಪ್ಸ್ ಸದ್ಯ ಬಾಲಿವುಡ್’ನ ಟಾಪ್ ೧೦ ನಾಯಕಿಯರಲ್ಲಿ ಮುಂಚೂಣಿಯಲ್ಲಿದ್ದಾರೆ.

ಇದೀಗ ದೇವದಾಸ್, ರಾಮ್ ಲೀಲಾ ಚಿತ್ರಗಳ ಖ್ಯಾತಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರಕ್ಕೆ ನಾಯಕಿಯಾಗುವ ಅವಕಾಶ ಪಡೆದಿದ್ದು , ಈ ಚಿತ್ರಕ್ಕಾಗಿ ಗುಳಿಕೆನ್ನೆ ಬೆಡಗಿ ದೀಪಿಕಾ ಪಡೆಯುತ್ತಿರುವ ಸಂಭಾವನೆ ಕೇಳಿ – “ಬಾಲಿವುಡ್’ಗೆ ಒಬ್ಬಳೇ ಪದ್ಮಾಪತಿ….”, ಅಂತಿದ್ದಾರೆ ಬಿಟೌನ್ ಮಂದಿ.
ಈ ಐತಿಹಾಸಿಕ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಬರೋಬ್ಬರಿ 12.65ಕೋಟಿ ಅಂತೆ.
ಚಿತ್ರದಲ್ಲಿ ದೀಪಿಕಾ ರಾಣಿ ಪದ್ಮಾವತಿ ಪಾತ್ರದಲ್ಲಿ ದರ್ಬಾರ್ ಮಾಡಲಿದ್ದಾರೆ.

ಇಲ್ಲಿ ‘ಪದ್ಮಾವತಿ’ಗೆ ನಾಯಕರಾಗಿ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ನಟಿಸಲಿದ್ದಾರೆ.

ಸದ್ಯ ಬಾಲಿವುಡ್’ನಲ್ಲಿ ೧೦ಕೋಟಿಯ ಆಜುಬಾಜುನಲ್ಲಿ ಸಂಭಾವನೆ ಪಡೆಯುತ್ತಿರುವ ಕರೀನಾ ಕಪೂರ್ ಮತ್ತು ಕಂಗನಾ ರಣಾವತ್’ರನ್ನು ಹಿಂದಿಕ್ಕಿ ಕನ್ನಡದ ಕುವರಿ ದೀಪಿಕಾ ಬಾಲಿವುಡ್’ನ ನಂ.೧ ನಟಿ ಎನಿಸಿಕೊಂಡಿದ್ದಾರೆ.

ಸದ್ಯ ಪದ್ಮಾವತಿ ಚಿತ್ರದ ಪಾತ್ರದ ತಯಾರಿಯಲ್ಲಿರುವ ದೀಪಿಕಾ, ಸಲ್ಮಾನ್ ಖಾನ್’ರ “ಟ್ಯೂಬ್ ಲೈಟ್” ಚಿತ್ರದ ಹೀರೊಯಿನ್ ಆಗಲಿದ್ದಾರೆ ಎಂಬ ಸುದ್ದಿ ಬಿಟೌನಲ್ಲಿ ಬೀಟ್ ಹೊಡಿತಿದೆ.

* ಕಪ್ಪು ಮೂಗುತಿ

-Ad-

Leave Your Comments