ಶಾರುಖ್ ಕೈ ಬಿಟ್ಟ ದೀಪಿಕಾ ಪಡುಕೋಣೆ ?

ಬಾಲಿವುಡ್ ಅಂದ್ರೆ ಅದೊಂದು ಸಾಗರವಿದ್ದಂತೆ .  ಒಮ್ಮೆ  ದೊಡ್ಡ ಅಲೆ  ಎಬ್ಬಿಸಿಬಿಟ್ರೆ ಸಾಕು ಜನ ಮುಗಿಬೀಳ್ತಾರೆ. ಈ ಸಾಲಿಗೆ ದೀಪಿಕಾ ಪಡುಕೋಣೆಯೂ ಹೊರತಲ್ಲ.

ಮಾಡಿದ ಮೊದಲ ಸಿನಿಮಾ ಕನ್ನಡವಾದ್ರು ಹೇಳಿಕೊಂಡಿದ್ದು ಹಿಂದಿ ಓಂ ಶಾಂತಿ ಓಂ ಅಂತ. ಶಾರುಖ್ ಚಿತ್ರದಲ್ಲಿ ಮೋಸ್ಟ್ ವಾಂಟೆಂಡ್ ಹಿರೋಯಿನ್ ಅನಿಸಿಕೊಂಡ ಡಿಪ್ಪಿ ಇಂದೇಕೊ ಶಾರುಖ್ ಜೊತೆ ನಟಿಸಲ್ಲ ಅಂತಿದ್ದಾರೆ.

ಆನಂದ್ ಕನಸಿಗೆ ಭಗ್ನ ?

ತನು ವೆಡ್ಸ್ ಮನು ಚಿತ್ರದ ಡೈರೆಕ್ಟರ್ ಆನಂದ್ ಎಲ್ ರಾಯ್ ತಮ್ಮ ಮುಂದಿನ ಹೊಸ ಚಿತ್ರದಲ್ಲಿ  ಶಾರುಖ್ ಹಾಗು ದೀಪಿಕಾನ ಒಂದೇ ಸ್ಕ್ರೀನ್ ಮೇಲೆ ನೋಡಬೇಕು ಅನ್ನೊ ಆಸೆಗೆ ಇಬ್ಬರ ಬಳಿಯೂ  ಸ್ಕ್ರಿಪ್ಟ್ ಹಂಚಿಕೊಂಡಿದ್ದಾರೆ.  ಶಾರುಖ್ ಎರಡನೇ ಮಾತಿಲ್ಲದೆ   ಓಕೆ ಅಂತ ಗ್ರೀನ್ ಸಿಗ್ನಲ್  ಕೊಟ್ರು.

ಇದೇ ರೀತಿ ದೀಪಿಕಾ ಒಪ್ಪಿಕೊಂಡಿದ್ರೆ ಆನಂದ್ ಅವರ ಕನಸು ನನಸಾಗ್ತಿತ್ತೇನೊ. ಆದ್ರೆ ಬಂದ ಆಫರ್ ನ ಸಾರಾಸಗಟಾಗಿ ರಿಜೆಕ್ಟ್ ಮಾಡಿ ಆನಂದ್ ಅವರ ಕನಸನ್ನು ಭಗ್ನಗೊಳಿಸಿದ್ದಾರೆ.

ಬಾಯ್ ಫ್ರೆಂಡ್ ರಣವೀರ್ ಗಾಗಿ ಶಾರುಖ್ ಸಿನಿಮಾ ಬಿಟ್ರಾ ?

ಹೀಗಂತಿರೋದು ನಾವಲ್ಲ .ಬಾಲಿವುಡ್ ನಲ್ಲಿ ಈ ರೀತಿ ಗಾಸಿಪ್ ಹರಿದಾಡ್ತಿದೆ. ಯಾಕೆಂದ್ರೆ ರಣವೀರ್ ನಟಿಸ್ತಿರೋ ಸಿನಿಮಾದಲ್ಲಿ ದೀಪಿಕಾ ಇದ್ದು ಎರಡಕ್ಕೂ ಡೇಟ್ ಕ್ಲ್ಯಾಶ್ ಆಗಿದೆ ಅನ್ನೋ ಮಾತೂ ಕೂಡ ಹರಿದಾಡ್ತಿದೆ.

ಮತ್ತೊಂದು ಕಡೆ ಡೇಟ್ ನೀಡಲು ಸಾಧ್ಯವೇ ಇಲ್ಲ ಅಂದ ದೀಪಿಕಾ ಮೇಲೆ ಶಾರುಖ್ ಕೂಡ ಮುನಿಸಿಕೊಂಡಿದ್ದಾರೆ. ಕತ್ರಿನಾ ದೀಪಿಕಾ ನಟಿಸಬೇಕಾದ ಸಿನಿಮಾದಲ್ಲಿ ಈಗ ದೀಪಿಕಾ ಸ್ಥಾನಕ್ಕೆ ಮತ್ತೊಂದು ಹಿರೋಯಿನ್ ಹುಡುಕಾಟ  ಶುರುವಾಗಿದೆ. ಇದೆಲ್ಲದರ ನಡುವೆ ದೀಪಿಕಾ ಶಾರುಖ್ ನ ಸಿನಿಮಾ ರಿಜೆಕ್ಟ್ ಮಾಡಿದ್ದು ರಣ್ವೀರ್ ಗಾಗಿ ಅಲ್ಲ ಅನ್ನೋ ಸುದ್ದಿ ಕೂಡ ಹರಿದಾಡ್ತಿದೆ.

ಹಾಗಾದ್ರೆ ಏನು? ಯಾಕೆ ? ಅನ್ನೋ ಪ್ರಶ್ನೆ ಸಹಜ!

ಇತ್ತೀಚಿನ ಶಾರುಖ್ ಅವರ ಯಾವುದೇ ಚಿತ್ರ ಹಿಟ್ ಆಗದ ಕಾರಣ ದೀಪಿಕಾ ಸಾರಸಗಟಾಗಿ ರಿಜೆಕ್ಟ್ ಮಾಡಿದ್ದಾರೆ ಅನ್ನುತ್ತೆ ಬಾಲಿವುಡ್ ನ ಇನ್ನಷ್ಟು ಬಣ. ಏನೇ ಇರ್ಲಿ ಹಿಟ್ ಸಿನಿಮಾ ಕೊಟ್ಟ ನಾಯಕನನ್ನ ಮರೆತು ಪ್ರತಿಷ್ಠೆ ಅನ್ನೊ ಗುಂಗುಲ್ಲಿರಿವ ದೀಪಿಕಾ ಬಗ್ಗೆ ಬಾಲಿವುಡ್ ನ ಕೆಲ ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ

_ಪಲ್ಲವಿ

-Ad-

Leave Your Comments