ರಜಪೂತ ಬೆದರಿಕೆಗೆ ಹೆದರಿದಳಾ ದೀಪಿಕಾ..?

ಕನ್ನಡದ ಐಶ್ವರ್ಯ ಚಿತ್ರದ ಮೂಲಕ ಚಿತ್ರರಂಗದಲ್ಲಿ ಯಶಸ್ಸು ಸಾಧಿಸಿ, ಬಾಲಿವುಡ್ ನಲ್ಲಿ ಮೋಸ್ಟ್ ಸಕ್ಸಸ್ಫುಲ್  ನಟಿಯಾಗಿ ಮಿಂಚುತ್ತಿರುವ ಗುಳಿಕೆನ್ನೆ ಚೆಲುವೆ ನಟಿ ದೀಪಿಕಾ ಪಡುಕೋಣೆಗೆ ಬೆದರಿಕೆ ಹೆಚ್ಚಾಗಿದೆ. ರಜಪೂತ ರಾಜಸಂಸ್ಥಾನದ ಚಿತ್ರಕತೆ ಆಧರಿಸಿ ಪದ್ಮಾವತಿ ಅನ್ನೋ ಚಿತ್ರದ ವಿವಾದ ಬಳಿಕ ಪದ್ಮಾವತಿ ಬೆದರಿದ್ದು, ಹಲವು ಕೆಲಸಗಳನ್ನು ರದ್ದು ಮಾಡಿದ್ದಾರೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದೀಪಿ ಗೈರು!
ಗೋವಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟಿ ದೀಪಿಕಾ ಪಡುಕೋಣೆ ಭಾಗಿಯಾಗಬೇಕಿತ್ತು. ಆದ್ರೆ ಹರಿಯಾಣದ ಬಿಜೆಪಿ ಮುಖಂಡ ದೀಪಿಕಾ ತಲೆ ಕತ್ತರಿಸಿದವರಿಗೆ 10 ಕೋಟಿ ಇನಾಮು ಕೊಡುವುದಾಗಿ ಘೋಷಣೆ ಮಾಡಿದ್ದಾನೆ. ಜೊತೆಗೆ ಹಲವು ರಜಪೂತ ಸಂಘಟನೆಗಳು ಪದ್ಮಾವತಿ ಚಿತ್ರವನ್ನು ವಿರೋಧಿಸುವ ಜೊತೆಗೆ ವೈಯಕ್ತಿಕವಾಗಿ ಪದ್ಮಾವತಿ ಪಾತ್ರಧಾರಿ ದೀಪಿಕಾಳನ್ನು ಕಂಡರೆ ತಿನ್ನುವಷ್ಟು ಕೆಂಡ ಕಾರುತ್ತಿವೆ. ಅದರ ಜೊತೆಗೆ ಬಿಜೆಪಿ ಪಕ್ಷವೇ ಪದ್ಮಾವತಿ ಚಿತ್ರದ ವಿರುದ್ಧ ಇರುವಂತೆ ಕಾಣಿಸುತ್ತಿದೆ. ಮೊದಲು ಉತ್ತರ ಪ್ರದೇಶ, ರಾಜಸ್ಥಾನ ವಿರೋಧ ಎದುರಾಯ್ತು. ಆ ನಂತರ ಮಧ್ಯಪ್ರದೇಶದಲ್ಲಿ ಸಿನಿಮಾ ನಿಷೇಧವನ್ನೇ ಮಾಡಲಾಯ್ತು.
ಗೋವಾದಲ್ಲಿ ಅವಮಾನಕ್ಕೆ ಸಜ್ಜಾಗಿತ್ತಾ ತಂಡ?
ಗೋವಾದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದ್ದು, ಗೋವಾದಲ್ಲೂ ಬಿಜೆಪಿ ಸರ್ಕಾರ ಇದೆ. ಕಮಲ ಪಾಳಯದಲ್ಲಿ ಒಂದು ಕಡೆಯಿಂದ ಪದ್ಮಾವತಿ ಚಿತ್ರವನ್ನು  ವಿರೋಧಿಸಲಾಗ್ತಿದೆ. ಗೋವಾದಲ್ಲಿ ಬಿಜೆಪಿ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶನ ಅಥವಾ ವಿರೋಧಿ ಘೋಷಣೆ ಕೂಗುವ ಮೂಲಕ ಮುಜುಗರ ಉಂಟು ಮಾಡುವ ಭೀತಿಯಿಂದ ಹಿಂದೆ ಸರಿದಿರುವ ಸಾಧ್ಯತೆ ಹೆಚ್ಚಾಗಿದೆ. ಇನ್ನೊಂದು ವಿಚಾರ ಅಂದ್ರೆ, ಈ ವರ್ಷ ಪದ್ಮಾವತಿ ಬಿಡುಗಡೆ ಆಗೋದು ಕಷ್ಟ ಎನ್ನಲಾಗ್ತಿದೆ. ಯಾಕಂದ್ರೆ ಸೆನ್ಸಾರ್ ಮಂಡಳಿ ರಾಣಿ ಪದ್ಮಾವತಿ ಇತಿಹಾಸದ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿದ ಬಳಿಕವಷ್ಟೇ ಪ್ರಮಾಣ ಪತ್ರ ನೀಡುವ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments