ಜಸ್ಟ್ ಮಾತುಕತೆ – ಧನಂಜಯ್ ಜೊತೆ

ಜಯನಗರ ನಾಲ್ಕನೇ ಬ್ಲಾಕ್ ಎಂಬ ಕಿರುಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ಧನಂಜಯ ಡೈರೆಕ್ಟರ್ ಸ್ಪೆಷಲ್ ಮೂಲಕ ಭರವಸೆ ಮೂಡಿಸಿದರು. ಇವರ ಖಡಕ್ ಲುಕ್‌ಗೆ ಬೆರಗಾದ ಗಾಂಧಿನಗರದ ಮಂದಿ ಸಾಲು ಸಾಲು ಸಿನಿಮಾಗಳನ್ನು ಮಾಡುವಂತೆ ಆಫರ್ ನೀಡಿದರು. ‘ಅಲ್ಲಮ’, ‘ಬದ್ಮಾಶ್’, ‘ವಿಜಯಾದಿತ್ಯ’, ‘ಎರಡನೇ ಸಲ’ ಸಿನಿಮಾಗಳಲ್ಲಿ ನಾಯಕರಾಗಿದ್ದರೆ  ಸೂರಿಯವರ ಬಹು ನಿರೀಕ್ಷಿತ ಚಿತ್ರ ‘ಟಗರು’ ಸಿನಿಮಾದಲ್ಲಿ ಖಳ ಪಾತ್ರದಲ್ಲೂ ಮಿಂಚಲು ತಯಾರಿ ನಡೆಸಿದ್ದಾರೆ.

ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಧನಂಜಯ ತನ್ನ ಪ್ರತಿಭೆಯಿಂದಲೇ ಈ ಮಟ್ಟಕ್ಕೇರಿದ್ದಾರೆ. ಇವರು  ಸದ್ಯ ಕನ್ನಡದ ಹಾಟ್ ಸ್ಟಾರ್‌ಗಳಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು.

ತಮ್ಮ ಬರ್ತ್‌ಡೇ ಪ್ರಯುಕ್ತ ciniadda.com  ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
1) ನಿಮ್ಮನ್ನು ಇಂಪ್ರೆಸ್ ಮಾಡಿದ ಹಳೆ ಸಿನಿಮಾ ಯಾವುದು?
– ಡಾ. ರಾಜ್‌ಕುಮಾರ್ ಅಭಿನಯದ ‘ಮಯೂರ’.
2) ಒಬ್ಬರೇ ಇದ್ದಾಗ ನೀವು ಕೇಳುವ ಹಾಡು ಯಾವುದು?
– ‘ರಾಟೆ’ ಸಿನಿಮಾದಲ್ಲಿ ಸುದೀಪ್ ಹಾಡಿರುವ ಹಾಡು
3) ನಿಮ್ಮ ಫೇವರಿಟ್ ನಾಯಕ ನಟಿ ಯಾರು?
– ನನ್ನ ಜೊತೆ ಅಭಿನಯಿಸಿರುವ ಎಲ್ಲರೂ ನನಗೆ ಫೇವರಿಟ್.
4) ನಿಮಗೆ ಕಂಫರ್ಟ್‌ಬಲ್ ಕಾಸ್ಟ್ಯೂಮ್ ಯಾವುದು?
– ಟ್ರ್ಯಾಕ್ ಸೂಟ್ ಮತ್ತು ಟೀ ಶರ್ಟ್.
5) ಒಬ್ಬರೇ ಇದ್ದಾಗ ಏನು ಅಡುಗೆ ಮಾಡಿಕೊಂಡು ತಿನ್ನುತ್ತೀರಾ?
– ನನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ, ಹಾಗಾಗಿ ಹಣ್ಣುಗಳನ್ನು ತಿನ್ನುತ್ತೇನೆ.

dhananjay2

6) ನಿಮಗೆ ಏನಾದರೂ ಕದಿಯಲು ಅವಕಾಶ ಸಿಕ್ಕರೆ ಏನನ್ನು ಕಳ್ಳತನ ಮಾಡುತ್ತೀರಾ?
– ನಾವು ಹೃದಯ ಕಳ್ಳರು, ಅಭಿಮಾನಿಗಳ ಹೃದಯ ಕದಿಯುತ್ತೇನೆ.
7) ಹಳೇ ಸಿನಿಮಾಗಳಲ್ಲಿ ನಿಮಗೆ ಇಷ್ಟವಾಗುವ ಸೀನ್ ಯಾವುದು?
– ಭಕ್ತಪ್ರಹ್ಲಾದ ಸಿನಿಮಾದಲ್ಲಿ ಅಣ್ಣಾವ್ರದ್ದು ಒಂದು ಸ್ವಗತ ಇದೆ ಅದು ನನಗೆ ಫೇವರಿಟ್.
8) ನೀವು ಅಭಿನಯಿಸಿದ ಸಿನಿಮಾಗಳಲ್ಲಿ ನಿಮ್ಮ ಫೇವರಿಟ್?
– ಜಯನಗರ 4ನೇ ಬ್ಲಾಕ್.
9) ಚಿಕ್ಕವಯಸ್ಸಿನಲ್ಲಿ ಆಟವಾಡುವಾಗ ಯಾವಾಗಾದರೂ ಗಾಯವಾಗಿದೆಯಾ?
– ಸಣ್ಣ ವಯಸ್ಸಿನಲ್ಲಿ ಒಮ್ಮೆ ಸೈಕಲ್‌ನಿಂದ ಬಿದ್ದು ತಲೆಗೆ ಗಾಯವಾಗಿತ್ತು.
10) ಫೇಸ್‌ಬುಕ್, ಟ್ವಿಟರ್ ಇದರಲ್ಲಿ ಯಾವುದಕ್ಕೆ ನಿಮ್ಮ ಮೊದಲ ಪ್ರಾಶಸ್ತ್ಯ?
– ಟ್ವಿಟರ್.
11) ನೀವು ಯಾವುದಕ್ಕೆ ಹೆದರುತ್ತೀರಾ?
– ಸೊಳ್ಳೆ ಮತ್ತು ಡಾಕ್ಟರ್ ಕೊಡುವ ಇಂಜೆಕ್ಷನ್.
12) ಯಾವಾಗ ತುಂಬಾ ಭಾವುಕರಾಗುತ್ತೀರಾ?
– ಯಾರಾದರೂ ತುಂಬಾ ಪ್ರೀತಿ ತೋರಿಸಿದಾಗ.
13) ಯಾವುದು ನಿಮ್ಮನ್ನು ತುಂಬಾ ಇರಿಟೇಟ್ ಮಾಡುತ್ತದೆ?
– ನಾಲ್ಕು ಗೋಡೆಯ ಮಧ್ಯೆ ಇರುವುದು.

ಜನ್ಮ ದಿನದ ಶುಭಾಶಯಗಳು – ಧನಂಜಯ್ 

-Ad-

Leave Your Comments