ಧೂಂ ಮಚಾಲೇಗೆ ಕಿಂಗ್ ಖಾನ್ ಪುತ್ರ ಆರ್ಯನ್

ಬಾಲಿವುಡ್ ಬಾದ್ ಷಾ ಶಾರೂಕ್ ಖಾನ್ ಹಿರಿಯ ಪುತ್ರ ಆರ್ಯನ್ ಖಾನ್ ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುತ್ತಲೇ ಇದ್ದಾರೆ. ಈ ಹಿಂದೆ ಕಿಸ್ಸಿಂಗ್ ವಿಷಯಗಳಿಗೆ ಸಖತ್ತಾಗೆ ಸುದ್ದಿಯಾಗಿದ್ದ ಆರ್ಯನ್ ಆದಷ್ಟು ಬೇಗ ತಂದೆಯ ಹಾದಿ ತುಳಿಯುವ ತವಕದಲ್ಲಿದ್ದಾರೆ.

೨೦೧೪ರ ಆಸ್ಕರ್ ಅವಾರ್ಡ್ ವಿನ್ನರ್ ಹಾಲಿವುಡ್ ಚಿತ್ರ ‘ಬಾಯ್ಹುಡ್’ ಚಿತ್ರದ ರಿಮೇಕ್’ನಲ್ಲಿ ಕಿಂಗ್ ಪುತ್ರ ನಟಿಸಲಿದ್ದಾರೆ. ಈ ಚಿತ್ರವನ್ನು ಶಾರೂಕ್’ರ ರೆಡ್ ಚಿಲ್ಲೀಸ್ ಸಂಸ್ಥೆ ನಿರ್ಮಿಸಲಿದೆ ಎಂಬ ಸುದ್ದಿ ಬಿಟೌನ್’ನ ಬೀದಿಯುದ್ದಕ್ಕೂ ಕೇಳಿ ಬಂದಿತ್ತು. ಆಮೇಲೆ ಅದೇನಾಯ್ತೊ ಗೊತ್ತಿಲ್ಲ. ಇತ್ತಕಡೆ ಬಾಲಿವುಡ್ ಬಾದ್ ಷಾನ ಚಿತ್ರಗಳು ಮಕಾಡೆ ಮಲಗುತ್ತಿದ್ದಂತೆ ಸುದ್ದಿ ಕೂಡ ಸೈಲೆಂಟಾಗಿ ಸೈಡಿಗೆ ಹೋಗಿತ್ತು.

ಇತ್ತೀಚೆಗಷ್ಟೇ ಸುಪುತ್ರನ ಸಿನಿರಂಗದ ಎಂಟ್ರಿಯ ಬಗ್ಗೆ ತುಟಿ ಬಿಚ್ಚಿದ್ದ ‘ದಿಲ್ವಾಲೆ’ ನಟ, ಆರ್ಯನ್’ಗೆ ಶೋಲೆ, ದೇವದಾಸ್ ಸೇರಿದಂತೆ ಅನೇಕ ಹಿಂದಿ ಕ್ಲಾಸಿಕ್ ಸಿನೆಮಾಗಳನ್ನು ತೋರಿಸುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೇ ಜೂನಿಯರ್ ಖಾನ್ ಶೀಘ್ರದಲ್ಲೇ ಫಿಲ್ಮ್ ಸ್ಕೂಲ್’ಗೆ ಸೇರಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದರು.

B2PFGQdCIAIKCg0

ಇದೀಗ ಆರ್ಯನ್ ಸಿನಿ ಕೋರ್ಸ್ ಮುಗಿಯುತ್ತಿದ್ದಂತೆ ಸೂಪರ್ ಬೈಕ್ ಏರಲಿದ್ದಾರೆಂಬ ಸುದ್ದಿಯೊಂದು ಬಿಟೌನಲ್ಲಿ ಹರಿದಾಡುತ್ತಿದೆ. ಹೌದು ಕಿಂಗ್ ಖಾನ್ ನಟಿಸಲಿದ್ದಾರೆ ಎನ್ನುತ್ತಿದ್ದ ಧೂಂ ಸಿರೀಸ್’ನ ಹೊಸ ಭಾಗದಲ್ಲಿ ಪುತ್ರ ಆರ್ಯನ್ ಖಳ’ನಾಯಕ’ನ ಅವತಾರದಲ್ಲಿ ಮಿಂಚಲಿದ್ದಾರೆಂದು ಕೆಲ ಮೂಲಗಳು ಹೇಳಿಕೊಂಡಿದೆ.

 

ಧೂಂ ಚಿತ್ರದ 5ನೇ ಭಾಗವು ಆರ್ಯನ್ ಖಾನ್ ಪಾಲಾಗಲಿದ್ದು, ಈ ಚಿತ್ರವು ಕ್ರೀಡೆ, ಆ್ಯಕ್ಷನ್ ಮತ್ತು ಚೇಸಿಂಗ್’ನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಆದರೆ ಶಾರೂಕ್ ಖಾನ್ ಆಗಲಿ ಧೂಂ ಚಿತ್ರಗಳ ನಿರ್ಮಾಪಕರಾದ ಯಶ್ ರಾಜ್ ಫಿಲಂಸ್ ಆಗಲಿ ಈ ಸುದ್ದಿಯನ್ನು ಇನ್ನೂ ಧೃಡೀಪಡಿಸಿಲ್ಲ. ಅಂತೂ ಇಂತೂ ಆರ್ಯನ್ ಖಾನ್’ರ ಎಂಟ್ರಿಯ ಚಿತ್ರದ ವಂದತಿಯು ಭರ್ಜರಿಯಾಗಿ ಸೌಂಡ್ ಮಾಡಿದ್ದು, ಇಲ್ಲಿ ಜೂನಿಯರ್ ಖಾನ್ ಧೂಂ ಮಚಾಯಿಸಲಿದ್ದಾರೆ ಎಂದು ಕಿಂಗ್ ಖಾನ್ ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ.

‘ಧೂಂ೪ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ರಣವೀರ್ ಸಿಂಗ್ ಕಳ್ಳ ಪೋಲಿಸಾಟ ಆಡಲಿದ್ದಾರೆಂಬ ಸುದ್ದಿ ಕೂಡ ಇನ್ನೂ ಫೈನಲ್ ಆಗದ ಕಾರಣ ಧೂಂ5ನಲ್ಲಿ ಆರ್ಯನ್ ಖಾನ್ ಇರುತ್ತಾರೊ ಇಲ್ಲವೊ ಎಂಬುದು ಸಿನಿಮಾತೆಯೇ ಬಲ್ಲ.’

ಕಪ್ಪು ಮೂಗುತ್ತಿ

-Ad-

Leave Your Comments