ಮಹೂರ್ತ ಮುಗಿಸಿದ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’

ಪ್ರಸ್ತುತ ಚಂದನವನದಲ್ಲಿ ಗೆಲ್ಲುತ್ತಿರುವ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಹೊಸ ರೀತಿಯ ಚಿತ್ರಗಳು ಸೆಟ್ಟೇರುತ್ತಾ ಇವೆ… ಹೊಸ ಪ್ರತಿಭೆಗಳ ಪರಿಚಯವಾಗುತ್ತಲೇ ಇದೆ… ಕನ್ನಡ ಚಿತ್ರರಂಗ ನಿಂತ ನೀರಲ್ಲ, ಹರಿಯುತ್ತಿರುವ ನದಿ ಎಂಬುದನ್ನು ಚಿತ್ರಗಳ ಮಹೂರ್ತಗಳು ಸಾಬೀತು ಮಾಡುತ್ತಲೇ ಇವೆ… ಇದಕ್ಕೆ ಇತ್ತೀಚಿನ ಉದಾಹರಣೆ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ‘ಗೈ ಕ್ರೈ’ ಚಿತ್ರದ ಅದ್ದೂರಿ ಮಹೂರ್ತ ಸಮಾರಂಭ…
ಬೆಂಗಳೂರಿನ ಜೆ ಪಿ ನಗರದ 6ನೆ ಹಂತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸೋಮವಾರ ಮುಂಜಾವಿನಿಂದಲೇ ಕಲಾವಿದರ ಕಲರವ. ಕಾರಣ ಬೆಳಿಗ್ಗೆ ಹತ್ತು ಗಂಟೆಗೆ ಫಿಕ್ಸ್ ಆಗಿದ್ದ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಚಿತ್ರದ ಮಹೂರ್ತ. ಇದೇನಿದು, ಇದು ಸಾಕ್ಷ್ಯಚಿತ್ರನಾ? ಅಥವಾ ಸಮಾಜ ಸುಧಾರಣೆ ಚಿತ್ರನಾ ಅಂತ ಗೊಂದಲಕ್ಕೀಡಾದವರಿಗೆ ಮಹೂರ್ತದಲ್ಲಿ ಅಚ್ಚರಿ ಕಾದಿತ್ತು. ಹೊಸಬರೇ ಸೇರಿಕೊಂಡು ನಿರ್ಮಿಸುತ್ತಿರುವ ಚಿತ್ರ ಅಘೋರಿಗಳ ಮತ್ತು ನಗರ ಪ್ರದೇಶದ ಮಾದಕವಸ್ತು ವ್ಯಸನಿಗಳ ಮೇಲೆ ಅವಲಂಬಿತವಾಗಿರುವ ಗಾಂಜಾ ಮಾಫಿಯಾದ ಕಥೆ ಹೊಂದಿದೆ ಅಂತ ನಿರ್ದೇಶಕ ‘ರಾಂಗ್ ಕಾಲ್’ ಚಂದ್ರು ವಿವರಣೆ ಕೊಟ್ಟರು. ಚಿತ್ರದ ಹೀರೋ ರಾಕೇಶ್‍ರ ತಂದೆ ಎಂ ಆರ್ ಲೋಕೇಶ್‍ರವರೇ ನಿರ್ಮಾಪಕರಾಗಿರೋದ್ರಿಂದ ಚಿತ್ರೀಕರಣ ಯಾವೂದೇ ಅಡೆತಡೆಯಿಲ್ಲದೇ ಸಾಗುವ ಮುನ್ಸೂಚನೆ ನೀಡಿದೆ…
ನಿರ್ದೇಶಕ ರಾಂಗ್ ಕಾಲ್ ಚಂದ್ರು ಚಿತ್ರದ ಬಗ್ಗೆ ಅತ್ಯಂತ ಉತ್ಸಾಹಿತರಾಗಿದ್ದಾರೆ. ನಿರ್ಮಾಪಕರು ಹೊಸ ಪ್ರತಿಭೆಗಳಿಗೆ ಅದ್ಯತೆ ನೀಡಿರೋದ್ರಿಂದ ಯಾವೂದೇ ರೀತಿಯ ಬ್ಯಾಗೇಜ್ ಅಥವಾ ಇಮೇಜ್ ಸಮಸ್ಯೆಯಿಲ್ಲದೆ ಚಿತ್ರದ ವಸ್ತುವಿಗೆ ನ್ಯಾಯ ಒದಗಿಸುವ ಅವಕಾಶ ಅವರಿಗೆ ಒದಗಿ ಬಂದಿದೆ.
ಈ ಚಿತ್ರದ ಇನ್ನೊಂದು ವಿಶೇಷವೆಂದರೆ ‘ಚೆಲುವಿನ ಚಿತ್ತಾರ’ ಚಿತ್ರದ ‘ಪೆಪುಸಿ ಬುಲ್ಲಿ’ ಖ್ಯಾತಿಯ ಬಾಲನಟ ರಾಕಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಹ್ಯಾಂಡ್‍ಸಮ್ ಯುವಕನಾಗಿರುವ ರಾಕಿ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

-Ad-

Leave Your Comments