ಸ್ಲೊವೇನಿಯಾದಲ್ಲಿ ಧ್ರುವ ಸರ್ಜಾ, ಹರಿಪ್ರಿಯಾ ಮಧುರ ಕ್ಷಣ!

ಭರ್ಜರಿ ಸಿನಿಮಾ ಆರಂಭವಾದಾಗ ಭಯಂಕರ ಸುದ್ದಿ ಮಾಡಿತ್ತು. ಅದಕ್ಕೆ ಹತ್ತಾರು ಕಾರಣಗಳಿದ್ದವು. ಒಂದು ಮಹತ್ವದ ಕಾರಣ ಧ್ರುವ ಸರ್ಜಾ. ಇನ್ನೊಂದು ಕಾರಣ ಬಹದ್ದೂರ್ ಸಿನಿಮಾ ನಿರ್ದೇಶಿಸಿದ್ದ ಚೇತನ್‌ಕುಮಾರ್. ಅದರ ಜೊತೆಗೆ ರಚಿತಾ ರಾಮ್ ಮತ್ತು ಹರಿಪ್ರಿಯಾ ನಾಯಕಿಯರು ಅನ್ನೋದು. ಇವೆಲ್ಲದರಿಂದಾಗಿ ಭಾರಿ ಸುದ್ದಿ ಮಾಡಿದ್ದ ಭರ್ಜರಿ ಆಮೇಲೆ ನಾನಾ ಕಾರಣಗಳಿಂದಾಗಿ ತಣ್ಣಗಾಗಿ ಸದ್ದೇ ಇಲ್ಲ ಅನ್ನುವಂತಾಗಿತ್ತು. ಆದರೆ ಯಾವಾಗ ತಂಡ ಸ್ಲೊವೇನಿಯಾಗೆ ಹೊರಟಿತೋ ಆ ಕ್ಷಣದಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೋ ಸುದ್ದಿ.

ಇವತ್ತಿಡೀ ಹರಿಪ್ರಿಯಾ ಮತ್ತು ಧ್ರುವ ಸರ್ಜಾ ಒಟ್ಟಿಗಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಸ್ಲೊವೇನಿಯಾ ಥಂಡಿ ಹವೆಯಲ್ಲಿ ಅವರಿಬ್ಬರು ಡಾನ್ಸ್ ಮಾಡುವ ದೃಶ್ಯವನ್ನು ನೋಡಿ ಅಭಿಮಾನಿಗಳೆಲ್ಲಾ ಫುಲ್ ಖುಷ್. ಯಾಕೆಂದರೆ ಎಂಥಾ  ಥಂಡಿ ಹವೆ ಇದ್ದರೂ ಮಾತಿಂದಲೇ ವಾತಾವರಣವನ್ನು ಬಿಸಿ ಮಾಡುವ ಶಕ್ತಿ ಧ್ರುವ ಸರ್ಜಾರಿಗೆ ಇದೆ. ಅದರ ಜೊತೆ ಹಾಟ್ ಕ್ವೀನ್ ಹರಿಪ್ರಿಯಾ ಜೊತೆ ಸೇರಿದ್ದರಿಂದ ಅಭಿಮಾನಿಗಳ ಸಂಭ್ರಮಕ್ಕೆ ಎಣೆಯೇ ಇಲ್ಲ ಅನ್ನುವಂತಾಗಿದೆ.
ದೃಶ್ಯದಲ್ಲಿ  ಧ್ರುವ ಬಂಡೆ ಮೇಲೆ ಕೂತಿದ್ದರೆ ವಿದೇಶಿ ನರ್ತಕಿಯರು ಅವರ ಹಿಂದೆ ನಿಂತು ಸೊಂಟ ಕುಣಿಸುತ್ತಾರೆ. ಆ ದೃಶ್ಯದಲ್ಲಿ ನೀವು ಧ್ರುವ ಅಭಿನಯವನ್ನು ನೋಡಬೇಕು. ಧ್ರುವರನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ.

#bharjari Movie shot uploaded by #dhruvasarja 😀

A post shared by CiniAdda Movie News (@ciniadda) on

-Ad-

Leave Your Comments