ದರ್ಶನ್ ಮುಂದಿನ ಚಿತ್ರಕ್ಕೆ ದಿನಕರ್ ಆಗಲಿದ್ದಾರಾ ಸಾರಥಿ?

ದರ್ಶನ್ -ದಿನಕರ್ ಅಪರೂಪದ ಅಣ್ಣತಮ್ಮಂದಿರು. ನಟನೆಯಲ್ಲಿ ದರ್ಶನ್ ಸೈ ಎನ್ನಿಸಿಕೊಂಡರೆ ದಿನಕರ್ ನಿರ್ಮಾಣ, ಹಂಚಿಕೆಯಲ್ಲಿ ಪಳಗಿದವರು. ಸಾರಥಿಯಂಥ ಸೂಪರ್ ಹಿಟ್ ಸಿನಿಮಾ  ನಿರ್ದೇಶನದ ನಂತರ ಮತ್ತೊಂದು  ಸ್ಕ್ರಿಪ್ಟ್ ಹಿಡಿದು ಹೊರಟಿದ್ದಾರೆ.ಮೊನ್ನೆ ಮೊನ್ನೆ ತಾನೇ ದರ್ಶನ್ ಶಿರಡಿ ಸಾಯಿಬಾಬಾ ನ ದರ್ಶನ ಮಾಡಿ ಬಂದಿದ್ದರು. ಈಗ ಹೊಸ ಚಿತ್ರದ ಸ್ಕ್ರಿಪ್ಟ್ ಹಿಡಿದು ಸಾಯಿ ಬಾಬಾ ಆಶೀರ್ವಾದ ಬೇಡಿದ್ದಾರೆ ದಿನಕರ್ .

ಇಂದು ಬೆಳಿಗ್ಗೆ ಮಲ್ಲೇಶ್ವರಂನ ಸಾಯಿಬಾಬಾ ಮಂದಿರಕ್ಕೆ ಬಂದಿದ್ದ ದಿನಕರ್  ಹೊಸ ಸಿನಿಮಾ ಸ್ಕ್ರಿಪ್ಟ್ ನ ಬಾಬಾ ಎದುರಿಗಿಟ್ಟು ಪೂಜೆ ಮಾಡಿಸಿದ್ದಾರೆ. ಮೊದಲೇ ಇದ್ದ ಪ್ಲಾನ್ ಪ್ರಕಾರ ದರ್ಶನ್  ರ ೫೦ನೇ ಸಿನಿಮಾ ದಿನಕರ್ ನಿರ್ದೇಶಿಸಬೇಕಿತ್ತು. ಕುರುಕ್ಷೇತ್ರದಂಥ ಅದ್ದೂರಿ ಹಾಗು ಅಪರೂಪದ ಪಾತ್ರದಲ್ಲಿ  ದರ್ಶನ್ ಮಿಂಚಲಿ ಎನ್ನುವ ಕಾರಣಕ್ಕೆ ಹಿಂದಿನ ಯೋಜನೆಯನ್ನು ಕೈಬಿಡಬೇಕಾಯಿತು.

ದಿನಕರ್ ಸ್ನೇಹಿತರಾದ ಕೋಲಾರ ಮೂಲದ ಉದ್ಯಮಿ ಮಂಜುನಾಥ್ ಇನ್ನೂ ಹೆಸರಿಡದ ಹೊಸ ಚಿತ್ರದ ನಿರ್ಮಾಪಕರು. ಚಕ್ರವರ್ತಿ ಸಿನಿಮಾದ ನಂತರ ನಟನೆಗೆ ಅವಕಾಶಗಳು ಬಂದರೂ ಅತ್ತ ಕಡೆ ಆಸಕ್ತಿ ತೋರದ ದಿನಕರ್ ತಮ್ಮ ಹೊಸ ಸಿನಿಮಾ ನಿರ್ದೇಶನ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪ್ರಧಾನ ಪಾತ್ರದಲ್ಲಿ ದರ್ಶನ್ ಬರಲಿದ್ದಾರಾ ? ಅಥವಾ ಕಥಾನಾಯಕ ಯಾರಾಗಲಿದ್ದಾರೆ ಎನ್ನುವ ಮಾಹಿತಿಯನ್ನು ಮಾತ್ರ ದಿನಕರ್ ಬಿಟ್ಟುಕೊಟ್ಟಿಲ್ಲ. ಏನೇ ಇರಲಿ ಒಂದೊಳ್ಳೆ ಕನ್ನಡ ಸಿನಿಮಾ ಮೂಡಿ ಬರಲಿ ಅನ್ನೋದಷ್ಟೇ ಸಿನಿರಸಿಕರ ಹಾರೈಕೆ .

-Ad-

Leave Your Comments