ಈ ಪ್ರೇಮ್ ಯಾರ್ಯಾರನ್ನ ಕರಕೊಂಡು ಬಂದು ಇನ್ನೂ ಏನೇನ್ ಮಾಡ್ತಾರೋ?! 

ಜೋಗಿ ಪ್ರೇಮ್ ಏನೇ ಮಾಡುವುದಕ್ಕೆ ಹೊರಟರೂ ಜನ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತಾರೆ. ಅದಕ್ಕೆ ಸಾಕ್ಷಿ ದಿ ವಿಲನ್ ಸಿನಿಮಾ. ಈ ಸಿನಿಮಾದ ಖಳನಾಯಕ ಪಾತ್ರಕ್ಕೆ ಪ್ರೇಮ್ ಮಿಥುನ್ ಚಕ್ರವರ್ತಿಯವರನ್ನು ಕರೆದುಕೊಂಡು ಬಂದೇ ಬಿಟ್ಟಿದ್ದಾರೆ. ಹಾಗೆ ನೋಡಿದರೆ ಮಿಥುನ್ ಚಕ್ರವರ್ತಿ ಕತೆ ಒಪ್ಪಿಗೆಯಾಗದೆ ಸಿನಿಮಾ ಒಪ್ಪಿಕೊಳ್ಳುವವರಲ್ಲ. ಅವರು ಒಪ್ಪಿಕೊಂಡು ದಿ ವಿಲನ್ ಸೆಟ್ ಸೇರಿದ್ದಾರೆ.

ಬೆಳಗಾವಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇವತ್ತು ಬೇರೆ ಕಿಚ್ಚ ಸುದೀಪ್ ಕೂಡ ಚಿತ್ರೀಕರಣ ತಂಡವನ್ನು ಸೇರಿಕೊಂಡಿದ್ದಾರೆ.

ಇಂಟರೆಸ್ಟಿಂಗ್ ಅಂದ್ರೆ ಮಿಥುನ್ ಚಕ್ರವರ್ತಿ ಚಿತ್ರಿಕರಣದಲ್ಲಿ ಪಾಲ್ಗೊಂಡಿರುವ ರೀತಿ.
ಬಾಲಿವುಡ್ ನ ಸೂಪರ್ ಸ್ಟಾರ್ ಈ ಮಿಥುನ್. ಇವತ್ತಿಗೂ ಚಾರ್ಮ್ ಉಳಿಸಿಕೊಂಡಿರುವ ಅಪರೂಪ ಪ್ರತಿಭೆ. ಈಗೀಗ ಸಣ್ಣ ಪುಟ್ಟ ಕಲಾವಿದರು ಕೂಡ ಕ್ಯಾರವಾನ್ ಬೇಕು ಅಂತ ಕೇಳುತ್ತಾರೆ. ಏನಿದ್ದರೂ ಅದರೊಳಗೇ ಇರುತ್ತಾರೆ. ಶಾಟ್ ರೆಡಿಯಾದಾಗ ಕರೆಯಬೇಕು. ಅದಕ್ಕಿಂತ ಮುಂಚೆ ಅವರು ಬರುವುದೇ ಇಲ್ಲ. ಆದರೆ ಮಿಥುನ್ ಮಾತ್ರ ಡಿಫರೆಂಟು.


ಇಲ್ಲಿರುವ ಫೋಟೋಗಳನ್ನು ನೋಡಿ. ರಣ ಬಿಸಿಲಿದ್ದರೂ ನೆರಳೇ ಇಲ್ಲದ ಜಾಗದಲ್ಲಿ ಕಾರಿನ ಪಕ್ಕ ಕುಳಿತು ಟೀ ಕುಡಿಯುತ್ತಿದ್ದಾರೆ ಮಿಥುನ್ ಚಕ್ರವರ್ತಿ. ಅಂಥಾ ಮಹಾನ್ ನಟ ಕ್ಯಾರವಾನ್ ಇಲ್ಲದೆ ಯಾವುದೋ ರಸ್ತೆ ಪಕ್ಕ ಕಾರಿನ ಬದಿಯಲ್ಲಿ ಕುಳಿತಿರುವುದು ನೋಡಿದರೆ ಅಚ್ಚರಿಯಾಗುತ್ತದೆ. ಜೊತೆಗೆ ಪ್ರೇಮ್ ಎಂಬ ವ್ಯಕ್ತಿ ಬಗ್ಗೆ ಮೆಚ್ಚುಗೆಯಾಗುತ್ತದೆ. ನಿಜಕ್ಕೂ ಈ ಪ್ರೇಮ್ ಏನು ಬೇಕಾದರೂ ಮಾಡಬಲ್ಲರು.

-Ad-

Leave Your Comments