ಕನ್ನಡಕ್ಕೆ ಆಲಿಯಾ ಭಟ್ ಈ ಹುಡುಗಿ!

ಬಾಲಿವುಡ್ಡಿಗೆ ಎಂಟ್ರಿ ಕೊಟ್ಟ ಭಟ್ ಕುಟುಂಬದ ಚಿನಕುರುಳಿಯಂತ ಹುಡುಗಿ ಆಲಿಯಾ ಭಟ್. ಹಿಂದಿ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸುತ್ತ ಬೆಳೆಯುತ್ತಿರುವ ಪ್ರತಿಭಾವಂತ ನಟಿ. ತನ್ನ ಮುಗ್ದನಗುವಿಂದ ಮರುಳು ಮಾಡುತ್ತಾ ಎಷ್ಟೋ ಕಾಲೇಜು ಹುಡುಗರಲ್ಲಿ “ಇದ್ರೆ ಇಂಥಾ  ಗರ್ಲ್ ಫ್ರೆಂಡ್ ಇರ್ಬೇಕು” ಅನ್ನೋ ಆಸೆ  ಮೂಡಿಸಿದ್ದಾಳೆ.ನಮ್ಮ  ಕನ್ನಡಕ್ಕೂ ಆಲಿಯಾ ಭಟ್ ಥರ ಚಿನಕುರುಳಿಯಂತ ಹುಡುಗಿ ಒಬ್ಬಳು ಸಿಕ್ಕಿದ್ದಾಳೆ. ಅದೇ ಮುಗ್ದ ನಗು,ಅದೇ ಲುಕ್ಕು…
ಇಬ್ಬರನ್ನೂ ಅಕ್ಕ ಪಕ್ಕ ನಿಲ್ಸಿದ್ರೆ ಒಮ್ಮೆ ಕನ್ಫ್ಯೂಸ್ ಆಗೋದು ಖಚಿತ ಅನ್ನುವಂತ ಹೋಲಿಕೆ ಇದೆ.

 ಆಗತಾನೆ ಅರಳಿದ ನಿಂತ ಹೂವಿನಂಥಾ ಚೆಲುವು !

ಹುಲಿರಾಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ಡಿನ ಒಳಗೆ ಪುಟ್ಟ ಪುಟ್ಟ ಹೆಜ್ಜೆ ಇಡ್ತಿರೋ ಇವಳ ಹೆಸರು ದಿವ್ಯ ಉರುದುಗ. ಯುಟ್ಯೂಬ್ ನಲ್ಲಿ ಬಿಡುಗಡೆ ಆದ ಹುಲಿರಾಯನ ಹಾಡೊಂದರಿಂದಲೇ  ಹಲವಾರು ಹುಡುಗರ ಹಾರ್ಟಲ್ಲಿ  ರಗಳೆ ಕೊಡೋಕೆ ಶುರು ಮಾಡಿದ್ದಾಳಂತೆ ಪಕ್ಕದ್ಮನೆ ಪುಟ್ಟಿಯಂತಿರೋ  ದಿವ್ಯ !
ಥೇಟು ಆಲಿಯಾ ಭಟ್ ಳನ್ನೇ  ಹೋಲುವ ದಿವ್ಯ ಉರುದುಗ ಮತ್ತು ಆಲಿಯಾ ಭಟ್ ಇಬ್ಬರ ಫೋಟೋ ಕೋಲಾಜ್ ಇಲ್ಲಿದೆ ನೋಡಿ. ಯಾರ ಫೋಟೋ ಯಾರದ್ದು ಅಂತ ನೀವೇ ಡಿಸೈಡ್ ಮಾಡಿ.ಕನ್ಫ್ಯೂಸ್ ಆಗ್ಬೇಡಿ.

ಯಾವೂರ ಚೆಲುವೆ ಇವಳು ?

ಮೂಲತಃ ಮಲ್ನಾಡ್ ಹುಡ್ಗಿ. ತೀರ್ಥಹಳ್ಳಿ ಇವಳ ಊರು. ಓದಿದ್ದು ಮಂಗಳೂರು ವೆಬ್ ಡೆವ್ಲಪರ್ ಆಗ್ಬೇಕು ಅಂತ ಹೊರಟ ಈ ಹುಡುಗಿ ಫೇಸ್ಬುಕ್ನಲ್ಲಿ ಸೀರಿಯಲ್ ನವರ ಕಣ್ಣಿಗೆ ಬಿದ್ದು ಬಣ್ಣದ ಲೋಕದ ಕಡೆ ಬರುವಂತೆ ಆಗಿದ್ದು, ಅಲ್ಲಿಂದ ಮತ್ತೆ ತಿರುಗಿ ನೋಡಲಿಲ್ಲ. ಬಣ್ಣ ಇವಳನ್ನ ಬಿಡಲಿಲ್ಲ. ಚಾನ್ಸ್ ಮೇಲೆ ಚಾನ್ಸ್ ಸಿಗ್ತಾನೆ ಹೋಯಿತು. ಖುಷಿ, ಓಂ ಶಕ್ತಿ, ಓಂ ಶಾಂತಿ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದ ಈಕೆಯ ಪ್ರತಿಭೆ ಕಂಡು ಹುಲಿರಾಯನ ನಿರ್ದೇಶಕ ಅರವಿಂದ್ ಕೌಶಿಕ್ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು.
ಹುಲಿರಾಯ ಕನ್ನಡಕ್ಕೆ ಒಂದು ವಿಭಿನ್ನ ಸಿನೆಮಾ, ನನ್ನ ಪಾತ್ರ ಕೂಡ ವಿಭಿನ್ನವಾಗಿದೆ, ಈ ಪಾತ್ರದ ಬಗ್ಗೆ  ಕೇಳಿದಾಗ ನಾನಿದನ್ನ ಮಾಡಲೇಬೇಕು ಅನ್ನಿಸಿಬಿಡ್ತು ಅಂತಾರೆ ದಿವ್ಯ.

ನೀವು ನೋಡೋಕೆ ಆಲಿಯಾ ಭಟ್ ಥರ ಕಾಣ್ತಿರ ಅಂದ್ರೆ ತುಂಬಾ ಖುಷಿ ವ್ಯಕ್ತಪಡಿಸುವ  ಈಕೆ ಸದ್ಯ ಅಶೋಕ್ ಕಶ್ಯಪ್  ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.
ಜನ ನನ್ನನ್ನು ನಾಯಕಿ ನಟಿಯಾಗಿ ಗುರುತಿಸುವುದಕ್ಕಿಂತ ಒಬ್ಬ ಉತ್ತಮ ನಟಿಯಾಗಿ ಗುರುತಿಸುವಂತಾಗಬೇಕು, ಅಂಥಾ  ಪಾತ್ರಗಳು ನಂಗೆ ಸಿಕ್ರೆ ತುಂಬಾ ಸಂತೋಷ ಅನ್ನುವ ಈಕೆ ಕನ್ನಡಕ್ಕೆ ಆಲಿಯಾ ಭಟ್ ಥರಹದ ಪಕ್ಕದ್ಮನೆ ಪುಟ್ಟ ಚೆಲುವೆ  ಲುಕ್ಕಿನ ಪ್ರತಿಭಾವಂತ ನಟಿಯಾಗಿ ನಿಲ್ಲುವ ಭರವಸೆ ಮೂಡಿಸುತ್ತಿದ್ದಾಳೆ.

-ವಿನಯ್

-Ad-

Leave Your Comments