ಗೂಗಲ್ ಹೇಳುತೈತೆ ನೀನೆ ರಾಜಕುಮಾರ !!

ಗೂಗಲ್ ! ಇದು ಎಲ್ಲರಿಗೂ ಗೊತ್ತಿರುವ ಹಾಗೆ ಮಾಹಿತಿಗಳ ಮಹಾ ಕಣಜ. ಜಗತ್ತಿನ ಎಲ್ಲ ಕಡೆಯಿಂದಲೂ ಮಾಹಿತಿಗಾಗಿ ಬಂದು ಬಾಗಿಲು ತಟ್ಟುವ ತಾಣ ಗೂಗಲ್. ಪುಟ್ಟ ಮಕ್ಕಳಾದಿಯಾಗಿ ಎಲ್ಲರ ಬೆರಳ ತುದಿಯ ಮಿತ್ರ ಗೂಗಲ್ ನೋಡಿದವರಿಗೆಲ್ಲ ಇಂದು ಕನ್ನಡದ ಕಣ್ಮಣಿ ನಟಸಾರ್ವಭೌಮನ ದರ್ಶನ!! ಕಾರಣ ಇಂದು ಅಭಿಮಾನಿಗಳ  ಆರಾಧ್ಯ ದೈವ ಡಾ. ರಾಜ್ ಕುಮಾರ್  ಹುಟ್ಟುಹಬ್ಬ . ಇಡೀ ವಿಶ್ವದಲ್ಲಿರುವ ಅಭಿಮಾನಿಗಳು ಇಂದು ಅಣ್ಣಾವ್ರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

 

ಜನರ ಅಭಿಪ್ರಾಯ, ಮನೋಭಾವವನ್ನು  ಗ್ರಹಿಸುವ ಗೂಗಲ್  ಅಂಬೇಡ್ಕರ್ ಜಯಂತಿ,ಸ್ವಾತಂತ್ರ್ಯ ದಿನಾಚರಣೆ,  ಹೀಗೆ  ದೇಶದ ಜನರ ಮಹಾನ್ ವ್ಯಕ್ತಿಗಳು, ಅತಿ ಹೆಚ್ಚು ಜನ ಆಚರಿಸುವ ಹಬ್ಬಗಳನ್ನ ತನ್ನ ಡೂಡಲ್ ನಲ್ಲಿ ತೋರಿಸುತ್ತದೆ. ಆದರೀಗ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವ , ಮತ್ತೆ ಮತ್ತೆ ನೆನೆಯುವ ಅಭಿಮಾನಿಗಳ ಅಣ್ಣಾವ್ರು ಡಾ. ರಾಜ್ ಕುಮಾರ್ ಅವರ ಭಾವಚಿತ್ರವನ್ನು ಹಾಕಿ ಅದನ್ನು ಜನರೆಲ್ಲಾ  ನೋಡುತ್ತಿರುವ ಹಾಗೆ ಚಿತ್ರಿಸಿದೆ.

ಅಷ್ಟೇ ಅಲ್ಲ ಗೂಗಲ್  ಡೂಡಲ್ ಮೇಲೆ ಕ್ಲಿಕ್ ಮಾಡಿದರೆ ರಾಜ್ ಕುಮಾರ್ ಕುಠಿತಾದ ಮಾಹಿತಿಗಳ ಭಂಡಾರವೇ  ತೆರೆದುಕೊಳ್ಳುತ್ತವೆ.

ಜಗತ್ತಿನ ಯಾವ ಮೂಲೆಯಿಂದ ಕನ್ನಡಿಗರು ಗೂಗಲ್ ನೋಡಿದರೂ ಅಲ್ಲಿ ಮೊದಲ ದರ್ಶನವಾಗುವುದು ಮುತ್ತುರಾಜನದ್ದು. ಇದು ಕನ್ನಡದ ಸೌಭಾಗ್ಯವಲ್ಲದೆ ಮತ್ತೇನು? ನಿಮಗೆ ಗೊತ್ತಿರಲಿ ಈವರೆಗೆ ಯಾವ ನಟನಿಗೂ ದಕ್ಕದ ಗೌರವವಿದು.

ಇಡೀ ಭಾರತೀಯ ಚಿತ್ರರಂಗದಲ್ಲಿ ಮೇರು ನಟನೆನಿಸಿದರೂ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಎಂದ ,ಕೊನೆ ಉಸಿರಿನ ತನಕ ಕನ್ನಡ ನಾಡನ್ನು ಬಿಡದ ಕನ್ನಡಿಗರ ಮಾಣಿಕ್ಯ,ಅಭಿಮಾನಿಗಳ ಅರಾಧ್ಯದೈವ ಎಂದೆಂದೂ ಅಜರಾಮರ !!

ಗೂಗಲ್ ಕೂಡ ಹೇಳುತ್ತಿದೆ ನೀನೆ ರಾಜಕುಮಾರ ..ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ !!

-Ad-

Leave Your Comments