ದುನಿಯಾ ವಿಜಿ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ ಅಭಿಮಾನಿಗಳು!

ಸ್ಯಾಂಡಲ್​ವುಡ್​ನ ಕರಿ ಚಿರತೆ ಎಂದೇ ಫೇಮಸ್ ಆಗಿರೋ ನಟ ದುನಿಯಾ ವಿಜಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 43ನೇ ವಸಂತ ಪೂರೈಸಿ, 44ನೇ ವಸಂತಕ್ಕೆ ಕಾಲಿರಿಸಿದ ನಟ ದುನಿಯಾ ವಿಜಯ್​ಗೆ ಎಲ್ಲರೂ ಶುಭಾಶಯ ಕೋರಿದ್ದಾರೆ.

ಮಧ್ಯ ರಾತ್ರಿಯೇ ಹೊಸಕೆರೆ ಹಳ್ಳಿಯಲ್ಲಿ ಇರೋ ದುನಿಯಾ ವಿಜಿ ಮನೆ ಮುಂದೆ ಜಮಾಯಿಸಿದ ನೂರಾರು ಅಭಿಮಾನಿಗಳು ಜಯಘೋಷ ಕೂಗಿ ನೆಚ್ಚಿನ ನಟನಿಗೆ ಬರ್ತ್ ಡೇ ವಿಶ್ ತಿಳಿಸಿದ್ರು. ಅಭಿಮಾನಿಗಳ ಸಮ್ಮುಖದಲ್ಲೇ ವಿಜಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡ್ರು. ಇನ್ನು ದುನಿಯಾ ವಿಜಿ ದಾವಣಗೆರೆಯ ಐವರು ಅಭಿಮಾನಿಗಳು ಸೈಕಲ್ ಜಾಥಾ ಮೂಲಕ ಆಗಮಿಸಿದ್ದು ವಿಶೇಷವಾಗಿತ್ತು. ಇದೇ ತಿಂಗಳ 26 ಕ್ಕೆ ರಿಲೀಸ್ ಆಗ್ತಿರೋ ಕನಕ ಚಿತ್ರದ ಪ್ರಚಾರ ಹಾಗೂ ವಿಜಿಯವರಿಗೆ ವಿಶ್ ಮಾಡಲು ಬಂದಿರುವುದಾಗಿ ಅಭಿಮಾನಿಗಳು ತಿಳಿಸಿದ್ರು.

ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದಕ್ಕೆ ವಿಜಿ ಸಂತಸ ವ್ಯಕ್ತಪಡಿಸಿದ್ರು. ಇನ್ನೂ ಗದಗದ ಅಡವಿ ಸೋಮನಹಳ್ಳಿಯಲ್ಲಿ ಜಯಮ್ಮನ ಮಗ ವಿಜಯ್​ ಅಭಿಮಾನಿಗಳು ಮಧ್ಯರಾತ್ರಿ ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಿಸಿದ್ರು. ಬ್ಲಾಕ್​ ಕೋಬ್ರಾ ಭಾವಚಿತ್ರದ ಎದುರು ಹೋಮ ಹವನ ಮಾಡಿದ್ರು.

-Ad-

Leave Your Comments