ಯುಗಾದಿ `ಚೌಕ’ಬಾರ ಆಡಿದ ಕುಳ್ಳ ಏನ್ಮಾಡ್ತಿದ್ದಾನೆ ಗೊತ್ತಾ..?

ದ್ವಾರಕೀಶ್ ಕನ್ನಡ ಸಿನಿಮಾ ಕಂಡ ಅದ್ಬುತ ನಟ, ನಿರ್ದೇಶಕ, ನಿರ್ಮಾಪಕ ಅನ್ನೊದ್ರಲ್ಲಿ ಯಾವುದೇ ಸಂಶಯವಿಲ್ಲ.. ಕನ್ನಡ ಸಿನಿಮಾ ರಂಗ ಇನ್ನೂ ಬಾಲ್ಯಾವಸ್ಥೆಯಲ್ಲಿ ಇದ್ದಾಗಲೇ ಅತ್ಯದ್ಬುತ ಚಿತ್ರಗಳನ್ನು ಜನರಿಗೆ ಉಣಬಡಿಸಿದ ಖ್ಯಾತಿ ದ್ವಾರಕೀಶ್ ಅವರಿಗೆ ಸಲ್ಲುತ್ತೆ.. ಅದೇ ರೀತಿ ಪ್ರಯೋಗತ್ಮಕ ಸಿನಿಮಾ ನಿರ್ಮಾಣಕ್ಕೆ ಕೈಹಾಕಿ ಚಿತ್ರರಂಗದಲ್ಲಿ ಕೈಸುಟ್ಟುಕೊಂಡಿರುವ ವ್ಯಕ್ತಿ ಅಂದ್ರೆ ಅದು ಕರುನಾಡಿನ ಕುಳ್ಳ. ಈಗ ಯಾಕಪ್ಪ ದ್ವಾರಕೀಶ್ ಬಗ್ಗೆ ಪೀಠಿಕೆ ಹಾಕ್ತಿದ್ದಾರೆ ಅನ್ಕೊಂಡ್ರಾ..? ವಿಷಯ ಇದೆ.. ಅದೇನಪ್ಪ ಅಂದ್ರೆ ದ್ವಾರಕೀಶ್ ನಿರ್ಮಾಣದ 50ನೇ ಸಿನಿಮಾ ಚೌಕ 100ನೇ ದಿನದತ್ತ ಮುನ್ನುಗ್ಗುತ್ತಿದೆ..

ವಿಭಿನ್ನ ಕಥಾ ಹಂದರ ಹೊಂದಿರುವ ಚೌಕ ಸಿನಿಮಾ ಯಶಸ್ಸಿನತ್ತ ಸಾಗುತ್ತಿದ್ದರೆ ದ್ವಾರಕೀಶ್ ಸಂತೋಷದಲ್ಲಿ ಮೈಮರೆತಿಲ್ಲ.. ಮತ್ತೊಂದು ಸಿನಿಮಾ ಮಾಡುವ ಉಮೇದಿನಲ್ಲಿದ್ದಾರೆ. ಈ ಸಿನಿಮಾ `ಪ್ರಚಂಡ ಕುಳ್ಳ’ನ ಅಡ್ಡದಿಂದ ಬರುತ್ತಿರುವ ಮತ್ತೊಂದು ಕಾಮಿಡಿ ಚಿತ್ರ.
ದ್ವಾರಕೀಶ್ ಬ್ಯಾನರ್‍ನ 51ನೇ ಚಿತ್ರಕ್ಕೆ ನಾಯಕನಾಗಿ ಬರುತ್ತಿರೋದು ನಮ್ಮೂರಿನ ಅಧ್ಯಕ್ಷರು.
ರ್ಯಾಂಬೋ ಸ್ಟಾರ್ ಆಗಿರುವ ಶರಣ್.. ಜೊತೆಗೆ ತನ್ನ ವಿಶೇಷ ಅಭಿನಯದ ಮೂಲಕ ಜ ರನ್ನು ನಗಿಸುವ ಸಾಮಥ್ರ್ಯವಿರುವ ದ್ವಾರಕೀಶ್ ಕೂಡ ಬಣ್ಣ ಹಚ್ಚಿದ್ರೆ ನಗೆಹಬ್ಬ ಆಗೋದ್ರಲ್ಲಿ ಅನುಮಾನವಿಲ್ಲ.. ಆದ್ರೆ ಈ ನಗೆ ಜಾತ್ರೆಗೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ನಿರ್ದೇಶಕರು ಯಾರು ಅನ್ನೋದು ಕೂಡ ಇನ್ನೂ ನಿಕ್ಕಿಯಾಗಿಲ್ಲ..

  • ಜೋಮ, ಮಂಡ್ಯ
-Ad-

Leave Your Comments