ದ್ವಾರಕೀಶ್ 74 – ಬಗ್ಗೆ ನಿಮಗೆಷ್ಟು ಗೊತ್ತು..??

ಜನುಮ ದಿನದ ಶುಭಾಶಯಗಳು

ದ್ವಾರಕೀಶ್ ಯಾರಿಗೆ ತಾನೆ ಪರಿಚಯವಿಲ್ಲ. ಈ ಪ್ರಚಂಡ ಕುಳ್ಳ ಹೆಸರಿಗೆ ತಕ್ಕ ಹಾಗೆ ಪ್ರಚಂಡ. ಹತ್ತಾರು ಪ್ರಥಮಗಳನ್ನು ಸೃಷ್ಠಿಸಿದ ಆಟಗಾರ. ಪೆದ್ದಮಗ ಎನ್ನಿಸಿಕೊಂಡೇ ಕನ್ನಡ ಚಿತ್ರರಸಿಕರ ಮನಸ್ಸನ್ನು ಗೆದ್ದ ಮಗ. ಮೇಲ್ನೋಟಕ್ಕೆ ಕುಳ್ಳ ಏಜೆಂಟ್ 000 ಆಗಿದ್ದರೂ ನಮ್ಮ ಜೈಕರ್ನಾಟಕದ ಚಿತ್ರರಂಗದಲ್ಲಿ ಈತ ಸೃಷ್ಟಿಸಿದ ದಾಖಲೆಗಳು ಮಾತ್ರ ಲೆಕ್ಕಕ್ಕಿಲ್ಲ. ಒಟ್ಟಾರೆ ದ್ವಾರಕೇಶ್ ಜೀವನವೇ ಸೋಲು-ಗೆಲುವು ಹಾಗು ಸೃಷ್ಟಿ-ಸಾವುಗಳ ನೀ ಬರೆದ ಕಾದಂಬರಿ. ದ್ವಾರಕೀಶ್ ಅವರ ವಿಶೇಷಗಳು ಇಲ್ಲಿವೆ..

maxresdefault

1] ದ್ವಾರಕೀಶ್ ಅವರ ಮೂಲ ಹೆಸರು ಬಂಗಲ್ ಶ್ಯಾಮರಾವ್ ದ್ವಾರಕಾನಾಥ್. ಕನ್ನಡ ಚಲನಚಿತ್ರ ರಂಗಕ್ಕಾಗಿ ಅವರ ಹೆಸರು ಬದಲಾಯಿತು.

2] ದ್ವಾರಕೀಶ್ ಅವರು ಓದು ಮುಗಿದ ನಂತರ ಭಾರತ್ ಆಟೋ ಸ್ಪೇರ್ಸ್ ಎನ್ನುವ ಅಂಗಡಿ ತೆರೆದಿದ್ದರು. ಈಗಲೂ ಮೈಸೂರಿನ ಪ್ರಭಾ ಟಾಕೀಸ್ ಹತ್ತಿರ ಈ ಅಂಗಡಿ ಇದೆ.

3] ದ್ವಾರಕೀಶ್ ಮೊದಲ ಬಾರಿಗೆ ನಿರ್ಮಾಪಕರಾಗಿದ್ದು 1969ರಲ್ಲಿ, ಡಾ.ರಾಜ್ ಅವರ ಸಹಕಾರದಿಂದ ಮೇಯರ್ ಮುತ್ತಣ್ಣ ಚಿತ್ರದ ಮೂಲಕ. ಅವರ ಬ್ಯಾನರ್ ಹೆಸರು ದ್ವಾರಕಾ ಫಿಲಂಸ್. ಮೇಯರ್ ಮುತ್ತಣ್ಣ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ ನಿರ್ದೇಶನದ ಮೊದಲ ಚಿತ್ರ ಕೂಡ ಹೌದು.

4] ದ್ವಾರಕೀಶ್ ಮೊದಲ ಬಾರಿಗೆ ನಿರ್ದೇಶಕರಾಗಿದ್ದು 1985ರಲ್ಲಿ, ಡಾ.ವಿಷ್ಣು ಅವರ ಸಹಕಾರದಿಂದ ನೀ ಬರೆದ ಕಾದಂಬರಿ ಚಿತ್ರದ ಮೂಲಕ. ಇದು ಹಿಂದಿಯ ಪ್ಯಾರ್ ಜುಕ್ತಾ ನಹೀ ಚಿತ್ರದ ರಿಮೇಕ್ ಆಗಿತ್ತು.

5] ದ್ವಾರಕೀಶ್ ಭಾರತ ಚಿತ್ರರಂಗದಲ್ಲಿ ಮೊದಲ ಬಾರಿಗೆ ಒಬ್ಬ ಡಿಟೆಕ್ಟಿವ್ ಹಿರೋನನ್ನು ಹಾಸ್ಯನಾಯಕನನ್ನಾಗಿ ತೋರಿಸಿದರು. ಆ ಚಿತ್ರವೇ ಕುಳ್ಳ ಏಜೆಂಟ್ 000. ಇದೇ ಚಿತ್ರಕ್ಕಾಗಿ ಕಿಶೋರ್ ಕುಮಾರ್ ಅವರು ಕನ್ನಡದಲ್ಲಿ ಮೊದಲ ಬಾರಿಗೆ ಹಾಡಿದರು. ಆ ಹಾಡು ಆಡು ಆಟಾ ಆಡು.

CLf52AOUMAATapD

6] ದ್ವಾರಕೀಶ್ ಅವರ ನಿರ್ಮಾಣದ ಸಿಂಗಾಪುರದಲ್ಲಿ ರಾಜಾಕುಳ್ಳ ಹೊರದೇಶದಲ್ಲಿ ಚಿತ್ರೀಕರಣ ಕನ್ನಡದ ಮೊದಲ ಚಲನಚಿತ್ರ. ಸಾಹಸಸಿಂಹ ನಾಯಕನಾಗಿದ್ದ  ಈ ಚಿತ್ರ  ನಿರ್ಮಾಣ ಆಗಿದ್ದು 1978ರಲ್ಲಿ.

7]  1986ರಲ್ಲಿ ದ್ವಾರಕೀಶ್ ನಿರ್ಮಿಸಿ ನಿರ್ದೇಶಿಸಿದ ಆಫ್ರಿಕಾದಲ್ಲಿ ಶೀಲಾ, ಭಾರತದಲ್ಲೇ ಮೊದಲ ಬಾರಿಗೆ ಆಫ್ರಿಕಾ ಕಾಡುಗಳಲ್ಲಿ ಚಿತ್ರೀಕರಣಗೊಂಡ ಚಿತ್ರ. ಮೊದಲ ಬಾರಿಗೆ ಬಪ್ಪಿ ಲಹರಿ ಕನ್ನಡ ಚಿತ್ರವೊಂದಕ್ಕೆ ಸಂಗೀತ ನೀಡಿದ್ದರು. ಅಲ್ಲದೇ, ಈ ಚಿತ್ರದ ಹಾಡುಗಳನ್ನು ಮೊದಲ ಬಾರಿಗೆ ಲಂಡನ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿತ್ತು. ಕನ್ನಡದ ನಂತರ ಈ  ಚಿತ್ರವನ್ನು ದ್ವಾರಕೀಶ್ ತಮಿಳು ಹಾಗು ಹಿಂದಿಯಲ್ಲಿ ನಿರ್ಮಿಸಿದರು.

8] ಮುಂದೆ ದ್ವಾರಕೀಶ್ ನೀಡಿದ ಸೂಪರ್ ಚಿತ್ರಗಳೆಂದರೆ  ಡ್ಯಾನ್ಸ್ ರಾಜಾ ಡ್ಯಾನ್ಸ್, ಜೈ ಕರ್ನಾಟಕ , ಶೃತಿ, ರಾಯರು ಬಂದರು ಮಾವನ ಮನೆಗೆ, ರಸಿಕ , ಆಪ್ತಮಿತ್ರ, ವಿಷ್ಣುವರ್ಧನ ಇನ್ನು ಹಲವಾರು.

9] ದ್ವಾರಕೀಶ್ ನಿರ್ಮಾಣದ ಆಪ್ತಮಿತ್ರ ಚಿತ್ರವು ಬೆಂಗಳೂರಿನ ಸಂತೋಷ್ ಹಾಗು ಮೈಸೂರಿನ ರಂಜಿತ್ ಈ ಎರಡೂ ಚಿತ್ರಮಂದಿರ ಮಂದಿರಗಳಲ್ಲಿ, ನಾಲ್ಕು ಪ್ರದರ್ಶನಗಳನ್ನು ನೀಡಿ ಒಂದು ವರ್ಷ ಪೂರೈಸಿದ ಕನ್ನಡ ಚಿತ್ರರಂಗದ ಏಕೈಕ ಚಿತ್ರ.

10] ದ್ವಾರಕೀಶ್ ಚಿತ್ರ ಬ್ಯಾನರ್ ಅಡಿಯಲ್ಲಿ ಈಗ ಸಿದ್ಧವಾಗಿರುವ ಚೌಕ ಚಿತ್ರ ಮೊದಲ ಬಾರಿಗೆ ನಾಲ್ಕು ಪ್ರಮುಖ ಛಾಯಾಗ್ರಾಹಕರು ನಿರ್ಮಿಸಿರುವ ಚಿತ್ರ. ಹಾಗೆಯೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್, ದಿಗಂತ್, ಪ್ರೇಮ್ ಹಾಗು ವಿಜಯ್ ರಾಘವೇಂದ್ರ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಇದು ದ್ವಾರಕೀಶ್ ಅವರ ನಿರ್ಮಾಣದ 50ನೇ ಚಿತ್ರ.

CHAUKA-1

ಈ ಪ್ರಚಂಡ ಕುಳ್ಳನಿಗೆ ಜನುಮ ದಿನದ ಶುಭಾಶಯಗಳು

-Ad-

Leave Your Comments