ಎರಡು ಕನಸು ನಿರ್ದೇಶಕ ಪೋಲೀಸರ ಅತಿಥಿಯಾಗಿದ್ದು ಯಾಕೆ ?

ಎರಡು ಕನಸು ಚಿತ್ರತಂಡದ ನಿರ್ದೇಶಕ ಮದನ್ ,ರವಿ ಅಕ್ಷಯ ಅಡ್ವರ್ ಟೈಸಿಂಗ್ ಮಾಲೀಕ ಪರಮೇಶ್ ನನ್ನ ಕಿಡ್ನ್ಯಾಪ್ ಮಾಡಿಸಿದ್ದರು . ಮೂವಿ ಸರಿಯಾಗಿ ಪ್ರಮೋಷನ್ ಮಾಡದ್ದಕ್ಕೆ ಕಿಡ್ನ್ಯಾಪ್ ಮಾಡಿಸಲಾಗಿತ್ತು. ಇದೀಗ ಆರೋಪಿಗಳ ಬಂಧನವಾಗಿದೆ.

ನಡೆದಿದ್ದೇನು ?

ಚಿತ್ರದ ಪರ್ಮೋಷನ್ ಗಾಗಿ ನಿರ್ದೇಶಕ ಮದನ್, ಪರಮೇಶ್ ಗೆ ೧೬.೩ ಲಕ್ಷ ಹಣ ಕೊಟ್ಟಿದ್ದರು. ಪರ್ಮೋಷನ್ ಸರಿಯಾಗಿ ಮಾಡದ ಹಿನ್ನೆಲೆ ೮ ಲಕ್ಷ ಹಣ ವಾಪಸ್ ನೀಡುವಂತೆ ಮದನ್ ಕೇಳಿದ್ದರು. ಹಣ ಕೊಡದೆ ಅಂತರ ಕಾಯ್ದುಕೊಂಡಿದ್ದ ಪರಮೇಶ್ ನನ್ನ  ಕಿಡ್ನ್ಯಾಪ್ ಮಾಡುವ ಪ್ಲಾನ್ ಮಾಡಿ ತನ್ನ ಸಹಚರರಾದ ಚಲಪತಿ, ಕಿರಣ್, ಮೂರ್ತಿ, ಮತ್ತು ಮೋಹನ್ ನಿಂದ ಕಿಡ್ನ್ಯಾಪ್ ಮಾಡಿಸಿದ್ದರು.
ಬಸವೇಶ್ವರ ನಗರದ ಮನೆಯಿಂದ ಮೂರು ದಿನಗಳ ಹಿಂದೆ ಪರಮೇಶ್ ನನ್ನ ಕಿಡ್ನ್ಯಾಪ್ ಮಾಡಿದ ಆರೋಪಿಗಳು ಬ್ಯಾಟ್ ಮತ್ತು ಬೆಲ್ಟ್ ನಿಂದ ಪರಮೇಶ್ ಮೇಲೆ  ಹಲ್ಲೆ ನಡೆಸಿದ್ದರು.

ಸಿಕ್ಕಿಬಿದ್ದಿದ್ದು ಎಲ್ಲಿ ?

ಪಶ್ಚಿಮ ವಿಭಾಗ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ನಿನ್ನೆ ರಾತ್ರಿ ದೇವನಹಳ್ಳಿ ಬಳಿ  ಮಾಗಡಿ ರೋಡ್ ಪೊಲೀಸ್ರು  ಡೈರೆಕ್ಟರ್ ಮದನ್ ಸೇರಿದಂತೆ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.

 

-Ad-

Leave Your Comments