ನಟಿ ಸಿಂಧು ಮೆನನ್ ಸಹೋದರ ಅರೆಸ್ಟ್..!! ನಟಿಗೂ ಬಂಧನ ಭೀತಿ..

ಸ್ಯಾಂಡಲ್ ವುಡ್ ನಲ್ಲಿ ಖುಷಿ , ನಂದಿ , ಸೇರಿದಂತೆ  ಮಲಯಾಳಂ , ತಮಿಳು ಭಾಷೆಗಳಲ್ಲಿ ನಟಿ‌ಸಿ ಸೈ ಎನಿಸಿಕೊಂಡಿರುವ ನಟಿ ಸಿಂಧು ಮೆನನ್ ಸಹೋದರ ಅರೆಸ್ಟ್ ಆಗಿದ್ದಾರೆ.‌ ಜೊತೆಗೆ ನಟಿ ಸಿಂಧು ಮೆನನ್ ಗೂ ಬಂಧನ ಭೀತಿ ಕಾಡುತ್ತಿದೆ. ಕನ್ನಡದ ಖ್ಯಾತ ನಾಯಕ ನಟಿಯಾದ ಸಿಂಧು ಮೆನನ್ ವಿರುದ್ಧ ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ಠಾಣೆಯಲ್ಲಿ  ಎಫ್ಐಆರ್ ದಾಖಲು ಆಗಿದ್ದು ಬಂಧನ ಭೀತಿ ಎದುರಿಸುತ್ತಿದ್ದಾರೆ. ಬ್ಯಾಂಕ್ ಆಫ್ ಬರೋಡಗೆ ನಕಲಿ ದಾಖಲೆ ಕೊಟ್ಟು ಹಣ ಪಡೆದ ಆರೋಪದಲ್ಲಿ ನಟಿ ಸಿಂಧು ಮೆನನ್, ಸಹೋದರ ಮನೋಜ್ ಕಾರ್ತಿಕೆಯನ್ ವರ್ಮ, ನಾಗಶ್ರೀ ಶಿವಣ್ಣ , ಸುಧಾ ರಾಜಶೇಖರ್  ಮೇಲೆ ಎಫ್ಐಆರ್ ದಾಖಲಾಗಿತ್ತು.. ಇದೀಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮನೋಜ್ ಅರೆಸ್ಟ್ ಆಗಿದ್ದು ನಟಿ ಸಿಂಧು ಮೆನನ್ ಗೂ ಬಂಧನ ಭೀತಿ ಕಾಡ್ತಿದೆ..
ಕಾರ್ ಖರೀದಿಗೆ ಬರೋಡಾ ಬ್ಯಾಂಕ್ ಗೆ ನಕಲಿ ದಾಖಲೆ ಕೊಟ್ಟು 36 ಲಕ್ಷ ಹಣ ಪಡೆದು ನಟಿ ಸಿಂಧು ಮೆನನ್ ಹಾಗೂ ಸಹೋದರ ವಂಚಿಸಿದ್ದಾರೆ ಅಂತಾ ಆರೋಪಿಸಿ ಬರೋಡಾ ಬ್ಯಾಂಕ್ ಮ್ಯಾನೇಜರ್ ರಮೇಶ್ ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರ ವಿಚಾರಣೆ ವೇಳೆ ನಕಲಿ ದಾಖಲೆ ನೀಡಿರುವುದು ಸಾಬೀತು ಆದ ಹಿನ್ನೆಲೆಯಲ್ಲಿ ಆರೋಪಿ ಸಿಂಧು ಮೆನನ್ ಸಹೋದರ ಮನೋಜ್ ಕೆ.ವರ್ಮ ಹಾಗೂ ನಾಗಶ್ರೀ ಎಂಬುವರನ್ನು ಬಂಧನ ಮಾಡಲಾಗಿದೆ. ಸದ್ಯ ಆರ್.ಎಂ.ಸಿ ಯಾರ್ಡ್ ಪೊಲೀಸರು ನಟಿ ಸಿಂಧು ಮೆನನ್ ಸಹೋದರ ಮನೋಜ್ ಹಾಗೂ ನಾಗಶ್ರೀ ಅವರ ವಿಚಾರಣೆ ಮಾಡ್ತಿದ್ದಾರೆ. ಜೊತೆಗೆ ಉಳಿದ ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿದ್ದಾರೆ.
ಪ್ರಕರಣ ಮೂರನೇ ಆರೋಪಿಯಾಗಿರುವ ನಟಿ ಸಿಂಧು ಮೆನನ್, ಸದ್ಯ ಅಮೆರಿಕದಲ್ಲಿ ಬೀಡುಬಿಟ್ಟಿದ್ದಾರೆ.. ಬಂಧನ ಭೀತಿ ಎದುರಿಸುತ್ತಿರುವ ಸಿಂಧು ಮೆನನ್ ಭಾರತಕ್ಕೆ ಬರುತ್ತಿದ್ದ ಹಾಗೆ ಬಂಧಿಸುವ ಸಾಧ್ಯತೆ ಇದೆ. ಸಾಲ ಮರು ಪಾವತಿ ಮಾಡದೆ ಇದ್ದರೆ‌ ಬೇರೆ.. ಆದರೆ‌ ಸಾಲ ಪಡೆಯುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಠಿಸಿರುವುದು ದೊಡ್ಡ ಪ್ರಮಾಣದ ಪ್ರಕರಣವಾಗಿದೆ. ಆರ್ ಎಂ ಸಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಅಡಿ ಪ್ರಕರಣ ದಾಖಲಾಗಿದ್ದು, ಮುಂದೆ ಕಾನೂನು ಯಾವ ರೀತಿ ಕ್ರಮ ಕೈಗೊಳ್ಳಲಿದೆ ಕಾದು ನೋಡ್ಬೇಕು..
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments