ದುನಿಯಾ ವಿಜಯ್ ದಾರಿಯಲ್ಲೇ ಹೋಗ್ತಿದ್ದಾರಾ ಪತ್ನಿ ನಾಗರತ್ನ ?

ದುನಿಯಾ ವಿಜಯ್ ಪತ್ನಿ ನಾಗರತ್ನ ಸೇರಿದಂತೆ 11 ಜನರ ವಿರುದ್ಧ ಆನೇಕಲ್ ಪೋಲಿಸರು ಎಫ್. ಐ.ಆರ್ ದಾಖಲಿಸಿದ್ದಾರೆ.

ಕಾರಣ –

ನಾಗರತ್ನ ಮತ್ತು ಕುಟುಂಬದವರಿಂದ ವರದಕ್ಷಿಣೆ ಕಿರುಕುಳ ಆರೋಪ . ಮೀನಾಕ್ಷಿ ಪೋಷಕರಿಂದ ಆನೇಕಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಹಿನ್ನೆಲೆ –

ದುನಿಯಾ ವಿಜಯ್ ಪತ್ನಿ ನಾಗರತ್ನ ಸಹೋದರ ಕೃಷ್ಣಮೂರ್ತಿಗೆ ಮೀನಾಕ್ಷಿ ಜೊತೆ ಮದುವೆಯಾಗಿತ್ತು. ಮೀನಾಕ್ಷಿ ಅವರಿಗೆ ನಾಗರತ್ನ ಮತ್ತು ಕುಟುಂಬದವರು ವರದಕ್ಷಿಣೆಗಾಗಿ ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ ಮೀನಾಕ್ಷಿ ಕುಟುಂಬದ್ದು.

ಸದ್ಯದ ಪರಿಸ್ಥಿತಿ

ತೀವ್ರ ಅಸ್ವಸ್ಥರಾಗಿರುವ ಮೀನಾಕ್ಷಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಾಗರತ್ನ ಅವರ ತಂದೆ,ತಾಯಿ,ಮತ್ತು ಸಹೋದರಿ ಜೊತೆಗೂಡಿ ಮೀನಾಕ್ಷಿಗೆ ವಿಷ ಉಣಿಸಿ, ಚಿತ್ರಹಿಂಸೆ ನೀಡಿದ್ದಾರೆ ಎನ್ನುವ ಸುದ್ದಿ ಖಾಸಗಿ ವಾಹಿನಿಗಳಲ್ಲೂ ಬಿತ್ತರವಾಗಿದೆ.

ದುನಿಯಾ ವಿಜಯ್ ನಟನೆಯ ಜೊತೆಗೆ ಹೊಡೆದಾಟದ ವಿಷಯದಲ್ಲೂ ಎತ್ತಿದ ಕೈ. ಅನಿಲ್ -ಉದಯ್ ಸಾವಿನ ವಿಚಾರದಲ್ಲಿ ವಿಚಾರಣೆ ಎದುರಿಸಿದ್ದರು ವಿಜಯ್ .ಮಾಸ್ತಿ ಗುಡಿ ನಿರ್ಮಾಪಕರ ಅಣ್ಣನ ಕುಟುಂಬದಲ್ಲಿ ಮುಗುತೂರಿಸಿ ಗೂಂಡಾಗಿರಿ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು .

ದುನಿಯಾ ವಿಜಯ್ ಗೆ ಬೀಳ್ತಿದ್ದ ಅಥವಾ ಬೀಳಿಸಿಕೊಳ್ಳುತ್ತಿದ್ದ ಆರೋಪದ ಸರ ಈಗ  ಪತ್ನಿ ನಾಗರತ್ನ ಕೊರಳಿಗೂ ಬಿದ್ದಿದೆ. ಕಂಟಕವಾಗಿ ಕಾಡುತ್ತೋ ? ಏನಾಗುತ್ತೋ ಕಾದುನೋಡಬೇಕು .

 

 

 

-Ad-

Leave Your Comments