ಜಿ ಕೆ ವೆಂಕಟೇಶ್ – ಭಾಗ ೨

ಭಾಗ ೧ ಓದಲು ಇಲ್ಲಿ ಕ್ಲಿಕ್ ಮಾಡಿ 

ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಹಾಡಿನ ಮೂಲಕ ಗಾಯಕನ ಪಟ್ಟ ಒದಗಿಸಿದರು. [ಈ ಹಾಡನ್ನು ಹಾಡಲು ಪಿ.ಬಿ.ಶ್ರೀನಿವಾಸ ರವರು ನಿರಾಕರಿಸಿದರು, ಕಾರಣ ಈ ಹಾಡಿನಲ್ಲಿ ನಾಯಕ ನಟ ರಾಜ್ ಕುಮಾರ್ ರವರಿಗೆ ಈ ಹಾಡಿನಿಂದ ಅವಮಾನವಾಗಬಾರದು ಎಂಬುದು]

ಕನ್ನಡ ಚಿತ್ರಗಳಲ್ಲಿ ಹಲವು ಬಗೆಯ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದರು. ಸಂಧ್ಯಾ ರಾಗದಲ್ಲಿ “ಪಂಡಿತ್ ಭೀಮಸೇನ್ ಜೋಷಿ,” “ಗಾನ ಗಾರುಡಿಗ ಬಾಲಮುರಳಿ ಕೃಷ್ಣ”, ಸನಾದಿ ಅಪ್ಪಣ್ಣ ಚಿತ್ರದಲ್ಲಿ ಚಿತ್ರದ ನಾಯಕ ನಟನ ಅಭಿನಯಕ್ಕೆ ಪೂರಕವಾಗಬೇಕೆಂಬ ಕಾರಣದಿಂದ “ಉಸ್ತಾದ್ ಬಿಸ್ಮಿಲ್ಲಾ ಖಾನ್ ” ಕಲಾವತಿ ಚಿತ್ರದಲ್ಲಿ ಪ್ರಸಿದ್ದ ಗಾಯಕರಾದ ” ಮನ್ನಾಡೆ” , ಸುಮನ್ ಕಲ್ಯಾಣ್ಕರ್, ಶಂಕರ್ ಸುಂದರ್ ಚಿತ್ರಕ್ಕೆ ಯೇಸುದಾಸ್ ರಂತಹ ಮಹಾನ್ ಗಾಯಕರಿಂದ ಕನ್ನಡ ಚಿತ್ರಗಳಲ್ಲಿ ಹಾಡಿಸಿದ ಪ್ರಯೋಗಶೀಲ ಸಂಗೀತ ನಿರ್ದೇಶಕ ಇವರಾದರು.

ಬನ್ನಿ, ಇವರ ಕೆಲವು ಹಿಟ್ ಹಾಡುಗಳ ಪರಿಚಯ ಮಾಡಿಕೊಳ್ಳೋಣ.

ಆಹಾ ಮೈಸೂರು ಮಲ್ಲಿಗೆ , [ಬಂಗಾರದ ಮನುಷ್ಯ ]
ಆಡಿಸಿ ನೋಡು , ಬೀಳಿಸಿ ನೋಡು [ಕಸ್ತೂರಿ ನಿವಾಸ]
ಎಲ್ಲಿ ಮರೆಯಾದೆ? ,[ಭಕ್ತ ಕುಂಬಾರ]
ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ ,[ ದೂರದ ಬೆಟ್ಟ- ಈ ಹಾಡಿನಲ್ಲಿ ಕುಲುಮೆಯಲ್ಲಿ ಕಬ್ಬಿಣ ಕುಟ್ಟುವ ಶಬ್ದವನ್ನು ಹಾಡಿಗೆ ಪೂರಕವಾಗಿ ಬಳಸಲಾಗಿದೆ ]
ಕನ್ನಡದಾ ಮಕ್ಕಳೆಲ್ಲ ಒಂದಾಗಿ ಬನ್ನಿ , [ಕಣ್ತೆರೆದು ನೋಡು,]
ಇಳಿದು ಬಾ ತಾಯಿ , [ಅರಿಸಿನ ಕುಂಕುಮ]
ರವಿವರ್ಮನ ಕುಂಚದ ಕಲೆ , [ಸೊಸೆ ತಂದ ಸೌಭಾಗ್ಯ]
If you come today, it’s too early , [ಆಪರೇಷನ್ ಡೈಮಂಡ್ ರಾಕೆಟ್]
ಬಾಳು ಬೆಳಕಾಯಿತು , [ಹಾಲು ಜೇನು]
ನಿನದೆ ನೆನಪು ದಿನವು ಮನದಲ್ಲಿ , [ರಾಜ ನನ್ನ ರಾಜ]
ನಾರಿಯ ಸೀರೆ ಕದ್ದ , ರಾಧೆಯ ಮಾನವ ಗೆದ್ದ , [ದಾರಿ ತಪ್ಪಿದ ಮಗ]

ರಾಧಿಕೆ ನಿನ್ನ ಸರಸ ಇದೇನೇ [ತಂದೆ ಮಕ್ಕಳು – ಈ ಹಾಡು ಮೂಲತಃ ಹಿಂದಿಯ ಚಿತ್ರದದ್ದಾದರೂ ಅಲ್ಲಿನ ಹಾಡು ರಾಧೀಕೆ ತೆರೆ ಬಾನ್ಸುರಿ ಹಾಡನ್ನು ಮಹಮದ್ ರಫಿ ಹಾಡಿದ್ದರು, ಅದರಿಂದ ಸ್ಪೂರ್ತಿಗೊಂಡು ಅದೇ ಶೈಲಿಯಲ್ಲಿ ಎ.ಪಿ.ಬಾಲಸುಬ್ರಮಣ್ಯಂ ರವರಿಂದ ಹಾಡಿಸಿ ಆ ಹಾಡು ಕೂಡ ಕನ್ನಡದಲ್ಲಿ ಹಿಟ್ ಆಯಿತು.]

ನೀ ಬಂದು ನಿಂತಾಗ [ ಕಸ್ತೂರಿ ನಿವಾಸ – ಆ ಕಾಲದಲ್ಲಿಯೇ ಈ ಹಾಡಿನಲ್ಲಿ ಸ್ಟೀರಿಯೋ ರೆಕಾರ್ಡಿಂಗ್ ಮಾಡಲಾಗಿದೆ. ಇದರಲ್ಲಿನ ಗಿಟಾರ್ ವಾದನ, ಪಿ.ಬಿ.ಶ್ರೀನಿವಾಸ್, ಎಸ.ಜಾನಕಿ ಅವರುಗಳ ಹಾಡಿಗೆ ಪೂರಕವಾಗಿ ನುಡಿಸಲಾಗಿದ್ದು, ಅದು ಈ ಗೀತೆಯ ಹೈಲೈಟ್ ಆಗಿ ಅಂದಿನ ಕಾಲಕ್ಕೆ ಕನ್ನಡ ಚಿತ್ರಗಳಲ್ಲಿ ಪ್ರಥಮ ಸ್ಟೀರಿಯೋ ರೆಕಾರ್ಡಿಂಗ್ ಹಾಡಾಗಿ ಈ ಹಾಡು ಉತ್ತಮ ಸ್ಟೀರಿಯೋ ಸಂಗೀತದ ಸ್ಪಷ್ಟ ಅನುಭವ ನೀಡಿ ಹಿಟ್ ಆಯಿತು.]

ಮೇಲೆ ಹೇಳಿದ್ದು ಕೆಲವು ಹಾಡುಗಳು ಮಾತ್ರ, ಬಹಳಷ್ಟು ಹಾಡುಗಳು ಬಾಕಿ ಇವೆ. ಈ ಲೇಖನ ಓದಿದ ನಿಮಗೆ ಹಲವು ಹಾಡುಗಳ ನೆನಪು ಖಂಡಿತಾ ಬರುತ್ತದೆ.

ಈ ಸಂಗೀತ ನಿರ್ದೇಶಕ ಕನ್ನಡದ ಹಲವು ಗಾಯಕರನ್ನೂ ಅಂದು ಪರಿಚಯಿಸಿದ್ದು, ಅವರಲ್ಲಿ ಬಿ.ಕೆ.ಸುಮಿತ್ರ, ಬೆಂಗಳೂರು ಲತಾ, ಸಿ.ಅಶ್ವಥ್,ಸುಲೋಚನ ಪ್ರಮುಖರು.

ಕನ್ನಡ ಚಿತ್ರ ರಂಗಕ್ಕೆ ಕನ್ನಡ ಕವಿಗಳ ಅದ್ಭುತ ಕವಿತೆಗಳನ್ನು ಚಿತ್ರಕ್ಕೆ ಪೂರಕವಾಗಿ ಬಳಸಿಕೊಂಡ ಕನ್ನಡದ ಮೊದಲ ಸಂಗೀತ ನಿರ್ದೇಶಕ ಇವರು. ೧೯೬೩ ರಲ್ಲಿಯೇ ತಮ್ಮ ಚಿತ್ರಗಳಲ್ಲಿ ಕು.ವೆಂ.ಪು.ರವರ “ಯಾವ ಜನ್ಮದ ಮೈತ್ರಿ”, ಹಾಗು ಕೆ.ಎಸ.ನರಸಿಂಹಸ್ವಾಮಿಯವರ “ಇವಳು ಯಾರು ಬಲ್ಲೆ ಏನೂ” ಎಂಬ ಹಾಡುಗಳನ್ನು ಬಳಸಿಕೊಂಡು ಜನಪ್ರಿಯರಾದರು .

ಈ ಸಾಧಕನ ಸಹಾಯಕರಾಗಿ ಇಂದಿನ ಬಹಳಷ್ಟು ಪ್ರಖ್ಯಾತ ಸಂಗೀತ ನಿರ್ದೇಶಕರು ಕಾರ್ಯನಿರ್ವಹಿಸಿದ್ದರು. ಎಲ್.ವೈಧ್ಯನಾಥನ್,ಶಂಕರ್ ಗಣೇಶ್ ಮುಂತಾದವರು, ಅವರಲ್ಲಿ ತಮಿಳಿನ ಅದ್ಭುತ ಸಂಗೀತ ನಿರ್ದೇಶಕ ಇಳಯರಾಜ ಸಹ ಒಬ್ಬರು. ಜಿ.ಕೆ.ವೆಂಕಟೇಶ್ ೧೯೮೫ ರ ನಂತರ ಸಂಗೀತ ನಿರ್ದೇಶನ ಮಾಡಲಾಗದೆ ತಾವು ನಿರ್ಮಿಸಿದ ಕೆಲವು ತಮಿಳು ಚಿತ್ರಗಳ ಸೋಲಿನಿಂದ ಕಂಗೆಟ್ಟರು. ಇತ್ತೀಚಿನ ಕೆಲವು ವರ್ಷಗಳಿಂದ ಇಳಯರಾಜಾ ರವರು ಇವರ ಸ್ಥಿತಿಯನ್ನು ಅರಿತು, ಇವರನ್ನು ತನ್ನ ಸಂಗೀತ ನಿರ್ಮಾಣದ ಚಿತ್ರಗಳ ಮ್ಯೂಸಿಕ್ ಅರೆಂಜರ್ ಆಗಿ ಮಾಡಿ ಸಹಾಯ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಹಲವಾರು ಒಳ್ಳೆಯ ಗೀತೆಗಳ ಸಂಗೀತಗಾರನಾಗಿ, ಕನ್ನಡದಲ್ಲಿ “ರಣಧೀರ ಕಂಟೀರವ” “ಇಮ್ಮಡಿ ಪುಲಿಕೇಶೀ” ಚಿತ್ರಗಳ ನಿರ್ಮಾಪಕರ ತಂಡದ ಒಬ್ಬರಾಗಿ, ಕನ್ನಡಕ್ಕೆ ದುಡಿದ ಈ ಪ್ರತಿಭೆ ಇಂದು ಕನ್ನಡಿಗರ ಮನಸ್ಸಿನಿಂದ ನಿಧಾನವಾಗಿ ಮರೆಯಾಗುತ್ತಿರುವುದು ದುರಂತವೇ ಸರಿ.

ಅಂದಹಾಗೆ ನಿಮ್ಮಲ್ಲಿ ಯಾವುದಾದೂರೂ ಇಂಥಹ ಆಸಕ್ತಿಕರ ಕಥಾವಸ್ತುಗಳಿದ್ದರೆ, ನಮಗೆ (ಸಿನಿಅಡ್ದಾ.ಕಾಂ) ಕಳುಹಿಸಿ, ಸೂಕ್ತವಾಗಿದ್ದರೆ ಪ್ರಕಟಿಸುತ್ತೇವೆ.

-Ad-

1 COMMENT

Leave Your Comments