ಮತ್ತೆ ಜೋಗದ ನೆತ್ತಿಗೆ ಹೋದ ಗಣೇಶ್ ಮತ್ತು ಯೋಗರಾಜ್ ಭಟ್

ಅವತ್ತು
ಅವರಿಬ್ಬರು ಸ್ಟಾರ್‌ಗಳಲ್ಲ. ಒಂದೊಳ್ಳೆ ಕತೆ ಮಾಡಿದ್ದರು. ಅದಕ್ಕೆ ಚೆಂದದ ಡೈಲಾಗ್ ಹೆಣೆದಿದ್ದರು. ಒಂದು ಬ್ಯೂಟಿಫುಲ್ ಸಿನಿಮಾ ಮಾಡಬೇಕು ಅಂತ ಕನಸು ಕಂಡಿದ್ದರು . ಅದಕ್ಕಾಗಿ ಹೊಸತೇನಾದರೂ ಮಾಡಿ ತೋರಿಸಲೇಬೇಕು  ಅನ್ನೋ ಹಂಬಲದಿಂದ ಜೋಗದ ನೆತ್ತಿಗೆ ಹೋಗಿದ್ದರು. ಅಲ್ಲಿ ಕ್ಯಾಮೆರಾ ಇಟ್ಟು ಮೇಲಿಂದ ನೀರು ಧುಮುಕುವುದನ್ನು ತೋರಿಸಿದರು. ಯಾವಾಗ ಸಿನಿಮಾ ಬಿಡುಗಡೆಯಾಯಿತೋ ಜನ ಮುಗಿಬಿದ್ದು ಸಿನಿಮಾ ನೋಡಿದರು. ಜೋಗದ ಸೊಬಗಿಗೆ ಮಾರುಹೋದರು. ಮುಂಗಾರುಮಳೆ ಸೂಪರ್ ಹಿಟ್ ಆಯಿತು.
ಅವರಿಬ್ಬರು ಬೇರೆ ಯಾರೂ ಅಲ್ಲ ಗಣೇಶ್ ಮತ್ತು ಯೋಗರಾಜ್ ಭಟ್!!
ಭಟ್ಟರ ಬರಹ ಮತ್ತು ಗಣೇಶನ ಟೈಮಿಂಗು ಹೇಗೆ ವರ್ಕಾಯಿತು ಅಂದರೆ ಅವರಿಬ್ಬರು ಹಾಟ್ ಫೇವರಿಟ್ ಜೋಡಿಯಾಗಿಬಿಟ್ಟರು. ಬ್ಯಾಕ್ ಟು ಬ್ಯಾಕ್ ಸಿನಿಮಾ ಬಂತು. ಯಶಸ್ಸಿನ ಜೊತೆ ಕಿರಿಕಿರಿಯೂ ಬಳುವಳಿಯಾಗಿ ಬಂತು . ಕೆಲವೇ ಸಮಯದಲ್ಲಿ ಅವರಿಬ್ಬರು ದೂರಾಗಿಬಿಟ್ಟರು.
 ಇವತ್ತು…
ಹತ್ತು ವರ್ಷ ಕಳೆದಿದೆ. ಇಬ್ಬರೂ ಸೋಲು-ಗೆಲುವು ನೋಡಿದ್ದಾರೆ. ಒಬ್ಬರಿಗೊಬ್ಬರು ಜೊತೆಯಾಗಬೇಕು  ಅಂತಂದಾಗ ಮತ್ತೆ ಹತ್ತಿರ ಬಂದಿದ್ದಾರೆ. ಇದಾಗುವಾಗ ಬರೋಬ್ಬರಿ ಹತ್ತು ವರ್ಷ ಕಳೆದು ಹೋಗಿದೆ. ಇಬ್ಬರ ಕಾಂಬಿನೇಷನ್ನಿನ ಹೊಸ ಸಿನಿಮಾ ಮುಗುಳುನಗೆ ರೆಡಿಯಾಗಿದೆ.
ಈಗಾಗಲೇ ಹೊಡಿ ಒಂಭತ್ತು ಎಂಬ ಹಾಡು ರಿಲೀಸಾಗಿದೆ. ಭಟ್ಟರು ಮತ್ತು ಗಣಿ ಪ್ರಮೋಷನ್ ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಈ ಹೊತ್ತಲ್ಲೇ ಅವರಿಬ್ಬರಿಗೆ ತಮ್ಮ ಹಳೆಯ ದಿನಗಳು ನೆನಪಾಗಿದೆ. ಇಬ್ಬರೂ ಎದ್ದು ಸೀದಾ ಜೋಗಕ್ಕೆ ಹೋಗಿದ್ದಾರೆ. ಜೋಗದ ನೆತ್ತಿಯ ಮೇಲೆ ಕೂತು ತಾವು ಪಟ್ಟ ಕಷ್ಟಗಳನ್ನು ನೆನೆಸಿಕೊಂಡಿದ್ದಾರೆ. ಅವತ್ತೂ ಅವರಿಬ್ಬರ ಮುಖದಲ್ಲಿ ನಗುವಿತ್ತು. ಇವತ್ತೂ ಆ ನಗುವಿದೆ. ಮುಗುಳುನಗೆಗೆ ಒಳ್ಳೆಯದಾಗಲಿ.
-Ad-

Leave Your Comments