ಗಿರೀಶ್ ಕಾರ್ನಾಡ್ ಈಸ್ ಸೇಫ್ !

ನಟ,ನಿರ್ದೇಶಕ , ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಗೋವಾದ ಏರ್ ಪೋರ್ಟ್ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿ ಗಂಭೀರ ಗಾಯಗಳಾಗಿವೆ. ಇಂಥದೊಂದು ಸುದ್ದಿ ಫೋಟೋ ಸಮೇತ ಫೇಸ್ಬುಕ್, whats app ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ. ಫೋಟೋ ನೋಡಿದವರಲ್ಲಿ ಒಂದಷ್ಟು ಮಂದಿ ಹೌದಾ ? ನಿಜಾನಾ ? ಅಂತಿದ್ರೆ ಮತ್ತೊಂದಷ್ಟು ಜನ ಅಯ್ಯಾ ಆಗಲಿ ಬಿಡ್ರಿ ಅನ್ನೋ ರೀತಿ ಪ್ರತಿಕ್ರಿಯೆ ಕೊಡ್ತಿದ್ದಾರೆ . ಇನ್ನೊಂದು ಕಡೆ ಸರಿಯಾಗಿ ಚೆಕ್ ಮಾಡಿ ಅವ್ರಲ್ಲ ಅನ್ನಿಸತ್ತೆ ಅಂದ್ರೆ ಹೇ ಬುದ್ಹಿಜೇವಿಗೆ ಇಷ್ಟ್ ಬೇಗ ಏನು ಆಗಲ್ಲ ಬಿಡ್ರಿ ಅನ್ನೋ ವ್ಯಂಗ್ಯದ ಮಾತುಗಳು ,ಸಂದೇಶಗಳು ಓಡಾಡುತ್ತಿವೆ.

img-20161125-wa0183-1

ಅದೇನೇ ಇರಲಿ ವಿಷಯದ ಸತ್ಯಾಸತ್ಯತೆ ಏನು ನಿಮಗೆ ಹೇಳೋಣ ಅಂತ ವಿಚಾರಿಸಿದಾಗ ಅವರ ಆತ್ಮೀಯ ವಲಯದಿಂದ ಗೊತ್ತಾಗಿದ್ದು

ಗಿರೀಶ್ ಕಾರ್ನಾಡ್ ಬೆಂಗಳೂರಿನ ಅವರ ಜೆಪಿ ನಗರದ ಮನೆಯಲ್ಲಿ ಬೆಚ್ಚಗಿದ್ದಾರೆ . ಅಪಘಾತನು ಇಲ್ಲ ಎಂಥಾದ್ದು ಇಲ್ಲ . ಇಂಥಾ ಸುದ್ಧಿ ಹರಿದಾಡ್ತಿದೆ ಅಂತ ಗೊತ್ತಾದ ಮೇಲೆ ಅಲ್ಲೇ ಇದ್ದ ಸ್ನೇಹಿತರಿಗೆ “ನೋಡಿ ಈ ಜನರ ಕುಚೇಷ್ಟೆ ! ನಾನಿಲ್ಲೇ ಇದ್ದೇನೆ .ಯಾವ ಫಿಲಂ ಫೆಸ್ಟಿವಲ್ ಗು ಹೋಗಿಲ್ಲ . ಈ ಜನ ಯಾಕ್ ಹೀಗೆ ಸುಳ್ಳು ಸುದ್ದಿ ಹಬ್ಬಿಸಿ ಸಂತೋಷ ಪಡ್ತಾರೋ . ಫೇಸ್ ಬುಕ್ ನಲ್ಲಿ ಯಾರ್ ಹೀಗೆ ಹಾಕಿದ್ದು ಅಂತ ಚೆಕ್ ಮಾಡ್ಸಬೇಕು . ಕಂಪ್ಲೇಂಟ್ ಕೊಡ್ಬೇಕು ” ಅಂದರಂತೆ .

ಎರಡೆರಡು ಬಾರಿ ವಿಚಾರಿಸಿಕೊಂಡ ಮೇಲೆ ಗಿರೀಶ್ ಕಾರ್ನಾಡ್ ನಮ್ಮ ನಡುವೆಯೇ ಇದ್ದಾರೆ . ಆತಂಕ ಬೇಡ ಎಂಬ ಸುದ್ದಿ ತಲುಪಿಸುತ್ತಿದ್ದೇವೆ.
ಆನಂದ ಭೈರವಿಯಲ್ಲಿ ಗಿರೀಶ್ ಕಾರ್ನಾಡರ ಅಭಿನಯ ನೋಡಿದವರು, ತುಘಲಕ್ ಓದಿದವರು, ಅವರ ತುಂಬು ಕಂಠದ ಸವಿ ಅನುಭವಿಸಿದವರಿಗೆ ಅವರ ಸಾವನ್ನು ಬಯಸಲಾದೀತೇ ?

-Ad-

Leave Your Comments