ದೇವ್ರಾಣೆ ಗೋಲ್ಡನ್ ಸ್ಟಾರ್ ಗಣೇಶ್ ಬದಲಾಗಿದ್ದಾರೆ

ಮುಗುಳುನಗೆ ಫಸ್ಟ್ ಲುಕ್
ಎಲ್ಲಾ ಚಿತ್ರರಂಗದಲ್ಲೂ ಸೂಪರ್ ಜೋಡಿಗಳಿರುತ್ತವೆ. ಆ ಜೋಡಿ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ. ಕನ್ನಡ ಚಿತ್ರರಂಗದ ಅಂಥಾ ಒಂದು ಜೋಡಿ ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್.
ಅವರಿಬ್ಬರ ಕಾಂಬಿನೇಷನ್ ನ ಮುಂಗಾರು ಮಳೆ ಸೂಪರ್ ಡ್ಯೂಪರ್ ಹಿಟ್. ಗಾಳಿಪಟ ಕೂಡ ಜನಪ್ರಿಯವಾಗಿತ್ತು. ಈಗ ಅದೇ ಜೋಡಿಯ ಮತ್ತೊಂದು ಸಿನಿಮಾ ಮುಗುಳುನಗೆ.
ganesh1
ಇದು ಮುಗುಳುನಗೆಯ ಫಸ್ಟ್ ಲುಕ್.
ಗಣೇಶ್ ಈ ಸಿನಿಮಾಗಾಗಿ ಬೇರೆ ಥರದ ಹೇರ್ ಕಟ್ ಮಾಡಿಸಿಕೊಂಡು ಬಿಳಿಬಿಳಿಯಾಗಿ ಮಿರಮಿರ ಮಿಂಚುತ್ತಿದ್ದಾರೆ. ಅಲ್ಲಿಗೆ ಅವರು ಮುಗುಳುನಗೆಗಾಗಿ ಬದಲಾಗಿದ್ದು ಖಾತ್ರಿಯಾಗಿದೆ. ಒಂದ್ಸಲ ಅವರ ಈ ಹೊಸ ಅವತಾರವನ್ನು ನೋಡಿ. ಚೆನ್ನಾಗಿದ್ಯಾ ಇಲ್ವೋ ಅಂತ ಹೇಳಿ.
-Ad-

Leave Your Comments