ಮಿಲಿಯನ್ ಮಂದಿಯನ್ನು ಮುಟ್ಟಿದ ಗೋಲ್ ಮಾಲ್ ಎಗೈನ್

ಗೋಲ್‌ಮಾಲ್‌ ಸರಣಿ ಚಿತ್ರಗಳ ಲೇಟೆಸ್ಟ್‌ ವರ್ಷನ್‌ ಗೋಲ್‌ಮಾಲ್‌ ಎಗೇನ್‌ ಸಿನಿಮಾ ಬಿಡುಗಡೆಗೆ ಮುನ್ನವೇ ಹೊಸ ದಾಖಲೆ ಬರೆದಿದೆ. ಇದು ಒಂದು ತಿಂಗಳ ಮೊದಲೇ ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ ಆಗಿರುವ ಭಾರತದ ಮೊದಲ ಸಿನಿಮಾ ಎಂದೆನಿಸಿಕೊಳ್ಳಲಿದೆ.

ಹಾಸ್ಯವೇ ಪ್ರಧಾನವಾಗಿರುವ ಈ ಹಿಂದಿನ ಗೋಲ್‌ಮಾಲ್‌ ಸರಣಿ ಚಿತ್ರಗಳೆಲ್ಲವೂ ಸೂಪರ್‌ ಡೂಪರ್‌ ಹಿಟ್‌ ಆಗಿದ್ದವು. ಇದೀಗ ಗೋಲ್‌ಮಾಲ್‌ ಎಗೇನ್‌ ಚಿತ್ರವನ್ನೂ ನೋಡಿ ನಗೆಗಡಲಿನಲ್ಲಿ ಮಿಂದೇಳಲು ಜನರು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಇದಕ್ಕಾಗಿ ಈಗಲೇ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ. ಈ ದೀಪಾವಳಿ ಹಬ್ಬಕ್ಕೆ ಅಂದರೆ ಅಕ್ಟೋಬರ್‌ 20 ರಂದು ಬಿಡುಗಡೆಯಾಗಲಿರುವ ಈ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದನ್ನು ಒಂದೇ ದಿನದಲ್ಲಿ 2 ಕೋಟಿ ಜನರು ವೀಕ್ಷಿಸಿದ್ದಾರೆ. ಇದುವೇ ಈ ಸಿನಿಮಾದ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಅಜಯ್ ದೇವಗನ್ ಮಸ್ತ್ ಮಸ್ತ್ ಮಜಾ ಕೊಡೊ ಮುನ್ಸೂಚನೆಯನ್ನಂತೂ ಟ್ರೈಲರ್ನಲ್ಲಿ ನೋಡಬಹುದು.

-Ad-

Leave Your Comments