ಗೊಂಬೆಯ ಬಹುದಿನದ ಸಂಶಯಕ್ಕೆ ಇಂದು ಸಿಗಲಿದೆಯಾ ಪರಿಹಾರ ?

ಕನ್ನಡದ ನಂ. 1 ಮನರಂಜನಾ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಂದು, ಗೊಂಬೆ, ಲಚ್ಚಿ ಹೆಸರುಗಳು ಈಗಾಗಲೇ ಮನೆಮಾತಾಗಿವೆ. ಈ ಧಾರಾವಾಹಿಯ ಇಂದಿನ  ಸಂಚಿಕೆಯಲ್ಲಿ ಸಂಜೆ 7:30ಕ್ಕೆ ಸರಿಯಾಗಿ ಇಲ್ಲಿಯವರೆಗೂ ಗೊಂಬೆಗೆ ಮುಚ್ಚಿಟ್ಟ ವಿಷಯ ತೆರೆದುಕೊಳ್ಳಲಿದೆ.

ಗೊಂಬೆಯ ಗಂಡ ಚಂದು ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ ಎಂಬ ಸಂಶಯ ಈಗಾಗಲೇ ಗೊಂಬೆಯನ್ನು ಕಾಡುತ್ತಿದೆ. ಅದರ ಸುಳಿವನ್ನು ಕಂಡು ಹಿಡಿಯಲು ಹೊರಟ ಗೊಂಬೆಗೆ ಆತ್ಮಲಿಂಗೇಶ್ವರನ ದೇವಸ್ಥಾನದಲ್ಲಿಯೇ ಸತ್ಯ ಗೊತ್ತಾಗುತ್ತದೆ. ಅಚ್ಚರಿ ಎಂದರೆ ಇದೇ ಆತ್ಮಲಿಂಗೇಶ್ವರನ ದೇವಸ್ಥಾನದಲ್ಲಿ ಚಂದು ಲಚ್ಚಿ ಮದುವೆ ನಡೆದಿತ್ತು!. ಅದೇ ದೇವಸ್ಥಾನದಲ್ಲಿ ಮುಂದೆ ಹುಟ್ಟುವ ಮಗುವಿಗೆ ಕಂಟಕಗಳು ಬಾರದಿರಲೆಂದು ಚಂದು, ಲಚ್ಚಿ ಮಾಡುವ ಪೂಜೆಯ ಸಂದರ್ಭವೇ ಗೊಂಬೆಯ ಸಂಶಯಕ್ಕೆ ಉತ್ತರ ನೀಡುತ್ತದೆ.

ಜೀವನದ ಸತ್ಯ ತಿಳಿದ ಗೊಂಬೆಯ ಪ್ರತಿಕ್ರಿಯೆ  ಹೇಗಿರುತ್ತದೆ? ಅವಳ  ದಾಂಪತ್ಯ ಜೀವನ ಹೇಗೆ ಸಾಗುತ್ತದೆ? ಗೊಂಬೆ ಮತ್ತು ಮನೆಯ ವಾತಾವರಣ ಹೇಗಿರಬಹುದು? ಮುಂತಾದ ಕುತೂಹಲಕ್ಕೆ ಕೆರಳಿಸುತ್ತಾ ಕತೆ ಮತ್ತೆ ತೆರೆದುಕೊಳ್ಳುತ್ತಿದೆ. 

-Ad-

Leave Your Comments