ಸರ್ಕಾರದ ಆದೇಶಕ್ಕೆ ಕ್ಯಾರೇ ಅನ್ನದ ಮಲ್ಟಿಪ್ಲೆಕ್ಸ್ ಗಳು

ಎಲ್ಲಾ ಮಲ್ಟಿಪ್ಲೆಕ್ಸ್ ನಲ್ಲಿ ಏಕರೂಪ ಅಂದರೆ ಇನ್ನೂರು ರೂಪಾಯಿ ದರ ಆದೇಶ ಜಾರಿ ನಿನ್ನೆಯೇ ಆಗಿದೆ. ಸರ್ಕಾರ ಹೊರಡಿಸಿದ ಆದೇಶ ಜಾರಿಯ ಫಲ ಮಾತ್ರ ಪ್ರೇಕ್ಷಕನನ್ನ ತಲುಪಿಲ್ಲ.

ಮಲ್ಟಿಪ್ಲೆಕ್ಸ್ ನ ಗೋಲ್ಡ್ ಕ್ಲಾಸ್ ಸೇರಿದಂತೆ ಎಲ್ಲಾ ಕಡೆ ಗರಿಷ್ಟ ದರ ಇನ್ನೂರು ಅಂತ ಆದೇಶ ಬಂದಿದ್ದರೂ ಮಲ್ಟಿಪ್ಲೆಕ್ಸ್ ನವರು ಮಾತ್ರ ಮೂತಿ ತಿರುಗಿಸಿ ಕುಳಿತಿದ್ದಾರೆ. ದರದಲ್ಲಿ ಯಾವ ವ್ಯತ್ಯಾಸವನ್ನೂ  ಮಾಡಿಲ್ಲ. ಓರಾಯಿನ್ ಮಾಲ್ ನಲ್ಲಿ ಒಂದು ಟಿಕೆಟ್ ಗೆ  ರೂ .270 ರಿಂದ 890   ಗರುಡ ಮಾಲ್ ನಲ್ಲಿ ರೂ. 320 ರಿಂದ 340 ದರ ಹಾಗೇ ಇದೆ. ಹಳೆಯ ದರವನ್ನೇ ಮುಂದುವರೆಸಿದ್ದಾರೆ.

ಸರ್ಕಾರ ಹೊರಡಿಸಿದ ಆದೇಶದ ಪ್ರತಿ ಬಂದ ಮೇಲೂ ನಾವು ಮಾಡೋದೇ ಹೀಗೆ ಏನೀವಾಗ ಅನ್ನೋ ಧೋರಣೆಯಲ್ಲಿರುವ ಮಲ್ಟಿಪ್ಲೆಕ್ಸ್ ಗಳಿಗೆ ಪಾಠ ಕಲಿಸುತ್ತಾರಾ ಸಿದ್ದರಾಮಯ್ಯ ?

ಸರ್ಕಾರ ಜಾರಿ ಮಾಡಿದ ಆದೇಶವನ್ನೇ ಗಾಳಿಗೆ ತೋರಿ ಲಾಭಕೋರತನ ಮೆರೆಯುತ್ತಿರುವ ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಕ್ರಮ ಜರುಗಿಸುತ್ತಾರಾ ? ಅನ್ನೋದು ಎಲ್ಲರ ಪ್ರಶ್ನೆಯಾಗಿದೆ .

ಇದರ ಜೊತೆಗೆ ಕಡ್ಡಾಯವಾಗಿ ಪ್ರತೀ ಮಧ್ಯಾಹ್ನ ಮತ್ತು ಪ್ರೈಮ್ ಟೈಮ್ ನಲ್ಲಿ  ಕನ್ನಡ ಚಿತ್ರಗಳು ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನ ಕಾಣುತ್ತವಾ? ಅನ್ನುವ ಅನುಮಾನವೂ ಕಾಡುತ್ತಿದೆ.

-Ad-

Leave Your Comments