“ಹಾಯ್” ಅಂತ ಓದ್ಕಳಿ “ವೈರ” “ಪಾದರಸ” ದ ಸುದ್ದಿ

“ವೈರ” ಚಿತ್ರೀಕರಣ ಮುಕ್ತಾಯ
ಧರ್ಮಶ್ರೀ ಎಂಟರ್‍ಪ್ರೈಸಸ್ – ಗೀತಾ ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ, ರಥಾವರ ಚಿತ್ರದ ನಿರ್ಮಾಪಕ, ಧರ್ಮಶ್ರೀ ಮಂಜುನಾಥ್ ನಿರ್ಮಿಸುತ್ತಿರುವ ‘ವೈರ’ ಚಿತ್ರಕ್ಕೆ ಪ್ರಮುಖ ಕಲಾವಿದರುಗಳು ಪಾಲ್ಗೊಂಡಿದ್ದ ದೃಶ್ಯಗಳೊಂದಿಗೆ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ನವರಸನ್, ಛಾಯಾಗ್ರಹಣ – ನಿತಿನ್, ಸಂಗೀತ – ರವಿಬಸ್ಸೂರ್, ಸಾಹಸ – ಅಲ್ಟಿಮೆಟ್ ಶಿವು, ಕಲೆ- ರವಿ ಪೂಜಾರಿ, ನಿರ್ವಹಣೆ – ಚಿತ್ತರಂಜನ್, ಹಾರರ್ -ಕಾಮಿಡಿ -ಕ್ರೈಂ- ಥ್ರಿಲ್ಲರ್- ಲವ್-ರಿವೇಂಜ್ -ಪ್ರೆಂಡ್‍ಷಿಪ್- ಗ್ಲಾಮರ್-ಆಕ್ಷನ್ -ನವರಸಭರಿತ ಈ ಚಿತ್ರದಲ್ಲಿ ನವರಸನ್, ಪ್ರಿಯಾಂಕ ಬಲ್ಲಾಳ್, ಶರಣ್, ಅಜಯ್, ತಬಲಾನಾಣಿ, ಭರತ್ ಸಿಂಗ್, ಹ್ಯಾರಿ, ಕೃಷ್ಣಶ್ರೀ, ಮಾ||ಸುಜಿತ್, ಮುಂತಾದವರಿದ್ದಾರೆ.

ತಮ್ಮಗೊಂಡನಹಳ್ಳಿಯಲ್ಲಿ “ಪಾದರಸ”

padarasa stillsಆರ್ಟ್ ಎನ್ ಸೋಲ್ ಮೀಡಿಯಾ ಸರ್ವೀಸಸ್ ಲಾಂಛನದಲ್ಲಿ ನಿರ್ಮಾಣ ವಾಗುತ್ತಿರುವ “ಪಾದರಸ” ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಹೃಷಿಕೇಶ್ ಜಂಬಗಿ, ಈ ಚಿತ್ರದ ಚಿತ್ರೀಕರಣ ತಮ್ಮಗೊಂಡನಹಳ್ಳಿಯಲ್ಲಿ ಸಂಚಾರಿ ವಿಜಯ್, ವೈಷ್ಣವಿ, ಮನಸ್ವಿನಿ, ವಿಜಯ್ ಚೆಂಡೂರ್, ರವಿ ಕಲ್ಯಾಣ್ ಮುಂತಾದವರು ಅಭಿನಯಿಸಿದ ದೃಶ್ಯಗಳ ಚಿತ್ರೀಕರಣವಾಯಿತು. ಕೋ-ಡೈರೆಕ್ಟರ್–ಕುಬೇರ್ ಕೆ.ಮಂಡ್ಯ, ಛಾಯಾಗ್ರಹಣ – ಎಂ.ಬಿ. ಅಳ್ಳಿಕಟ್ಟಿ, ಸಂಗೀತ – ಎ.ಟಿ. ರವೀಶ್, ಸಂಕಲನ- ಕೆ.ಎಂ.ಪ್ರಕಾಶ್, ಕಲೆ – ಬಾಬು ಖಾನ್, ನೃತ್ಯ –ರಾಮು, ಜಗನ್, ನಿರ್ಮಾಣ ನಿರ್ವಹಣೆ ಪ್ರಕಾಶ್ ಮಧುಗಿರಿ. ತಾರಾಗಣದಲ್ಲಿ – ಸಂಚಾರಿ ವಿಜಯ್, ನಿರಂಜನ್ ದೇಶಪಾಂಡೆ, ವೈಷ್ಣವಿ ಮೆನನ್, ಮನಸ್ವಿನಿ, ಶೋಭರಾಜ್, ಅರವಿಂದರಾವ್, ರಮೇಶ್ ಬಾಬು, ರವಿಕಲ್ಯಾಣ್, ಮುಂತಾದವರಿದ್ದಾರೆ.
“ಹಾಯ್” ಚಿತ್ರ ಈ ವಾರ ಬಿಡುಗಡೆ

hai stills (2)ಸೆವೆನ್ ಕ್ರೋರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಘವೇಂದ್ರ ಕಠಾರೆ, ಸಿ.ರಾಜೇಶ್, ಕೂಡಿ ನಿರ್ಮಿಸಿರುವ ‘ಹಾಯ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಕಳೆದ ವಾರ ವೀಕ್ಷಿಸಿ ‘ಯು’ ಸರ್ಟಿಫಿಕೇಟ್ ನೀಡಿದೆ. ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಕಥೆ, ಚಿತ್ರಕಥೆ ನಿರ್ದೇಶನದ ಜಿ.ಎನ್.ರುದ್ರೇಶ್, ಸಂಗೀತ ಜೆ.ಸಿ.ಗಿಫ್ಟ್, ಛಾಯಾಗ್ರಹಣ ಸತೀಶ್ ರಾಕ್‍ಲೈನ್, ಸಾಹಿತ್ಯ ನಾಗೇಂದ್ರ ಪ್ರಸಾದ್, ಸಂಭಾಷಣೆ – ಮಳವಳ್ಳಿ ಸಾಯಿಕೃಷ್ಣ, ಸಂಕಲನ ಕೆ.ಎನ್.ಪ್ರಕಾಶ್, ನೃತ್ಯ : ರಾಮು, ಸಾಹಸ : ಮಾಸ್‍ಮಾದ, ಸಹ ನಿರ್ದೇಶನ : ಜಿ.ಸುರೇಶ್, ನಿರ್ವಹಣೆ : ರಾಜು ಸೋಮಶೇಖರ್. ತಾರಾಗಣದಲ್ಲಿ ಯಶ್‍ರಾಜ್, ಸಾನಿಯಾ, ಜೈಜಗದೀಶ್, ವಿಜಯಕಾಶಿ, ಸಂಗೀತ, ಸಾಧುಕೋಕಿಲ, ಕಿಲ್ಲರ್ ವೆಂಕಟೇಶ್, ದಡಿಯಾ ಗಿರಿ, ಮಿತ್ರ, ಹರ್ಷವರ್ಧನ್, ತನಿಶಾ, ರಂಗತೇಜ, ಶ್ರೀಕಾಂತ್ ಹೊನ್ನಳ್ಳಿ, ಶ್ರೀಗೌರಿ ಮುಂತಾದವರು ಅಭಿನಯಿಸುತ್ತಿದ್ದಾರೆ.

-Ad-

Leave Your Comments