ನಗುಮೊಗದರಸಿ “ತಾರಾ” ನೀವಿರಿ ನೂರ್ಕಾಲ .ಇದೇ ನಮ್ಮ ಆಶಯ ಹುಟ್ಟುಹಬ್ಬದ ಶುಭಾಶಯ

ರಾಷ್ಟ್ರ ಪ್ರಶಸ್ತಿ ವಿಜೇತ ಅಪ್ಪಟ ಕನ್ನಡದ ಕಲಾವಿದೆ ತಾರಾಗೆ ಹುಟ್ಟುಹಬ್ಬದ ಸುದಿನ. ciniaddda.com ಬಳಗದಿಂದ ಪ್ರೀತಿಯ ಶುಭಾಶಯ.

tara-01_660_121912093436

ತಾರಾ ಅಂದ್ರೆ ಲವಲವಿಕೆ . ದಶಕಗಳು ಉರುಳಿದರು ಜನರ ಮನಸ್ಸಿನಲ್ಲಿ ಮನೆಮಗಳಷ್ಟೇ ಆಪ್ತತೆ ಗಳಿಸಿಕೊಂಡಿರುವ ತಾರಾ ಇವತ್ತಿಗೂ ಬತ್ತದ ಚಿಲುಮೆ. ಚಿತ್ರರಂಗಕ್ಕೆ ಅಚಾನಕ್ ಪ್ರವೇಶ ಪಡೆದರೂ ಈಕೆ ಅಪರೂಪದ  ಕಲಾವಿದೆಯಪ್ಪಾ. ಹೇಳಿದ್ದನ್ನ ಚಕಚಕಾಂತ  ಕಲಿತು ನಿರ್ದೇಶಕರ ನಟಿ ಎನ್ನಿಸಿಕೊಂಡವರು.

tara-kannada-actress_13394096700

ನಂಗೆ ಇಂಥಾ ಪಾತ್ರವೇ ಬೇಕು . ಹೀಗಿದ್ದರೆ ಮಾತ್ರ ನಾನು ಅಭಿನಯಿಸುವುದು ಅನ್ನುವ ಯಾವ ಷರತ್ತುಗಳನ್ನೂ ಒಡ್ಡದೆ ಪಾತ್ರಕ್ಕೆ ತನ್ನನ್ನು ತಾನು ಒಗ್ಗಿಸಿಕೊಂಡು ರಾಷ್ಟ್ರ ಪ್ರಶಸ್ತಿಗೂ ಅರ್ಹತೆ ಪಡೆದುಕೊಂಡವರು. ಅಣ್ಣಾವ್ರ ಆದಿಯಾಗಿ ವಿಷ್ಣುವರ್ಧನ್ ,ಅಂಬರೀಷ್, ಅನಂತ್ ನಾಗ್ ,ಶಂಕರ್ ನಾಗ್ ಹೀಗೆ  ಎಲ್ಲ ಘಟಾನುಘಟಿಗಳ ಜೊತೆಗೆ ಅಭಿನಯಿಸಿ ಎನ್ನಿಸಿಕೊಂಡು ಮನೆಮನೆಯ ಮಾತಾದವರು ತಾರಾ.

ತನಗೆ ಸಿಕ್ಕ ತಾರಾ ವರ್ಚಸ್ಸು , ಕೀರ್ತಿ ಯಾವುದನ್ನೂ ತಲೆಗೇರಿಸಿಕೊಳ್ಳದೆ ಎಲ್ಲರೊಡನೆ ಬೆರೆಯುತ್ತಾ ಬೆಳೆದಾಕೆ. ಕಲಾವಿದೆಯಾಗಿ ಮಾತ್ರವಲ್ಲದೆ ಕರ್ನಾಟಕ ಚಲಚಿತ್ರ ಅಕಾಡೆಮಿಯ ಅಧ್ಯಕ್ಷೆಯಾಗಿ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸ್ವವನ್ನು ಅದೂ ತುಂಬು ಗರ್ಭಿಣಿಯಾದ ಹೊತ್ತಿನಲ್ಲೂ ಸಮರ್ಥವಾಗಿ ಮುನ್ನಡೆಸಿದ ಸಾಧಕಿ.

16999237_1655392858099497_9098763876296851513_n

ಸಿನಿಮಾ ನಟರಾ ? ಬಿಡ್ರಿ .ಅದರಲ್ಲೂ ಹೆಣ್ಣುಮಕ್ಕಳು ಅಂದ್ರೆ ಅಂದ ಚೆಂದ ..ಟಸ್ಸುಪುಸ್ಸು ಅಂತ ಹೇಳಿಕೊಟ್ಟ ಡೈಲಾಗ್ ಹೊಡಿತಾವೆ ಅಷ್ಟೇ ಅನ್ನುವವರೇ ಬಾಯಿ ಮುಚ್ಚಿ ಕೂತು , ಕಿವಿ ತೆರೆದು ಕೇಳುವಂತೆ ವಿಧಾನ ಪರಿಷತ್ ಸದಸ್ಯೆಯಾಗಿ ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ಮಾತಾಡಿದವರು ತಾರಾ.

tara ಇವತ್ತಿಗೂ ವಿಧಾನಪರಿಷತ್ತಿಗೆ ಹೊರಡುವಾಗ ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳುವ ಬದ್ಧತೆಯ ಹೆಣ್ಣುಮಗಳು, ಕನ್ನಡದ ಮನೆಮಗಳು, ಚಿರಯವ್ವನೆ, ಅಭಿಜಾತ ಕಲಾವಿದೆ ತಾರಾ ಗೆಲುವಿನ ಹಾದಿ ಬೆಳೆಯಲಿ. ಹುಟ್ಟುಹಬ್ಬ ಹೊಸ ಸಾಧನೆಗೆ ನಾಂದಿ ಹಾಡಲಿ.

-Ad-

Leave Your Comments