ಡಬ್ಬಿಂಗ್ ಮುಗಿಸಿದ ಪನ್ನಗ ಭರಣನ `ಹ್ಯಾಪಿ ನ್ಯೂ ಇಯರ್’

ಸೌಮ್ಯ ಫಿಲ್ಮ್ಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ವನಜ ಪಾಟೀಲ್ ನಿರ್ಮಾಣದ ಚಿತ್ರ `ಹ್ಯಾಪಿ ನ್ಯೂ ಇಯರ್’ ಇದೀಗ ಇದೀಗ ಡಬ್ಬಿಂಗ್ ಮುಗಿಸಿಕೊಂಡು ರೀರೆಕಾರ್ಡಿಂಗ್ ಹಂತ ತಲುಪಿಕೊಂಡಿದೆ. ಈ ಚಿತ್ರದ ಮೂಲಕ ಸೃಷ್ಟಿ ಪಾಟೀಲ್ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಪನ್ನಗ ಭರಣ ನಿರ್ದೇಶಕರಾಗಿಯೂ ಹೊರ ಹೊಮ್ಮುತ್ತಿದ್ದಾರೆ.

pannaga-bharana
ಪನ್ನಗ ಭರಣ ಪ್ರಕಾರ ಜೀವನ ಎಂಬುದು ಒಂದು ನಿರಂತರ ಪಯಣ. ಬದುಕಿನ ಪ್ರತಿ ಕ್ಷಣವೂ ನಮ್ಮ ಜೀವನದ ಗತಿಯನ್ನು ನಿರ್ಧರಿಸುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮುಖವಾಡ ಧರಿಸಿ ಬದುಕುವುದೇ ಹೆಚ್ಚು. ಈ ಚಿತ್ರ ಅಂತಹ ಐದು ವ್ಯಕ್ತಿಗಳ ಚಿತ್ರಣ.ಇದೊಂದು ಹಾಸ್ಯ ಸನ್ನಿವೇಷಗಳ ಮೂಲಕವೇ ಸಂಪೂರ್ಣ ಮನರಂಜನೆ ನೀಡುವ ಚಿತ್ರ ಜೊತೆಗೆ ಬಹು ತಾರಾಗಣದ ಚಿತ್ರ.

happy new year

ವಿಜಯ ರಾಘವೇಂದ್ರ, ದಿಗಂತ್, ಧನಂಜಯ್, ಬಿ ಸಿ ಪಾಟೀಲ್, ಸಾಯಿಕುಮಾರ್, ಶ್ರುತಿ ಹರಿಹರನ್, ಸೋನು ಗೌಡ, ಸುಧಾರಾಣಿ, ಸೃಷ್ಟಿ ಪಾಟೀಲ್, ಮಾಳವಿಕ ಅವಿನಾಶ್, ರಾಕ್‍ಲೈನ್ ವೆಂಕಟೇಶ್, ಕಡ್ಡಿಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ, ರಾಜಶ್ರೀ, ಮಾರ್ಗರೀಟ ಮುಂತಾದವರ ತಾರಾಗಣವಿದೆ.

vijay-raghavendra-kan-20150324125732-98
ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ರಘು ದೀಕ್ಷಿತ್ ಅವರ ಸಂಗೀತವಿದೆ. ಪನ್ನಗ ಭರಣ ಅವರಿಗೆ ಚಿತ್ರ ಕಥೆಯಲ್ಲಿ ಆದಿ ಶಂಕರ್, ಅವಿನಾಶ್ ಬಲೆಕ್ಕಳ ಸಹಾಯ ಮಾಡಿದ್ದಾರೆ.

 

Chennai, 23/12/2007: Poetry reading session by Pratibha Nandakumar at Chamiers in Chennai on  December 23, 2007. Photo: B. Jothi Ramalingam

ಸಂಭಾಷಣೆ : ಸಿಂಪಲ್ ಸುನಿ, ಪ್ರತಿಭಾ ನಂದಕುಮಾರ್, ಸತ್ಯಪ್ರಕಾಶ್, ಆದಿ ಶಂಕರ್ ಹಾಗೂ ಅವಿನಾಷ್ ಬಲೆಕ್ಕಳ ಬರೆದಿದ್ದಾರೆ. ಸಚಿನ್ ಹೆಗ್ಗಾರ್ ವಸ್ತ್ರ ವಿನ್ಯಾಸ, ಮದನ್ ಹರಿಣಿ ಅವರ ನೃತ್ಯ ಸಂಯೋಜನೆ, ಥ್ರಿಲ್ಲರ್ ಮಂಜು ಸಾಹಸ, ದಿನೇಷ್ ಅವರ ಮೇಕ್ ಅಪ್, ಇಸ್ಮಾಯಿಲ್ ಅವರ ಕಲೆ, ನರಸಿಂಹ ಜಾಲಹಳ್ಳಿ ಅವರ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ.

-Ad-

Leave Your Comments