ಪ್ರಶಸ್ತಿ ಕಮಿಟಿಯನ್ನು ಜಾಡಿಸಿದ ಹರಿಪ್ರಿಯಾ

 ಹರಿಪ್ರಿಯಾ ಕೋಪಗೊಂಡಿದ್ದೇಕೆ?
ರಾಜ್ಯಪ್ರಶಸ್ತಿ ಪ್ರಕಟವಾದ ಮೇಲೆ ಅಸಮಾಧಾನ ವ್ಯಕ್ತ ಪಡಿಸುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಆ ಲಿಸ್ಟಿಗೆ ಹೊಸ ಸೇರ್ಪಡೆ ನೀರುದೋಸೆ ಸಿನಿಮಾದ ಕುಮುದಾ ಪಾತ್ರಧಾರಿ ಹರಿಪ್ರಿಯಾ.
ಫೇಸ್ ಬುಕ್ಕಿನಲ್ಲಿ ಸ್ಟೇಟಸ್ ಹಾಕಿರುವ ಹರಿಪ್ರಿಯಾ ಪ್ರಶಸ್ತಿ ಆಯ್ಕೆ ಸಮಿತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಪಟ್ಟಿ ಬಿಡುಗಡೆಯಾದಾಗಲೇ ನೀರುದೋಸೆ ಸಿನಿಮಾದ ನಿರ್ದೇಶಕ ವಿಜಯಪ್ರಸಾದ್ ಬೇಸರ ತೋಡಿಕೊಂಡಿದ್ದರು. ಈಗ ಹರಿಪ್ರಿಯಾ ಸರದಿ.
ಇಲ್ಲಿ ಪ್ರತಿಯೊಂದಕ್ಕೂ “ಬೆಲೆ” ನಿಗದಿಯಾಗಿರುತ್ತದೆ. . ಆ ದಾರಿಗಳು ನಂಗೆ ಬೇಕಾಗಿಲ್ಲ .ಪ್ರಶಸ್ತಿಗಳ ಬಗ್ಗೆ ನಾನು ಕೇರ್ ಮಾಡಲ್ಲ . ಪ್ರಶಸ್ತಿಗೆ ಆಯ್ಕೆ ಆಗುವುದಕ್ಕೆ ಮತ್ತು ಪ್ರಶಸ್ತಿ ಪಡೆಯುವುದಕ್ಕೆ ಬೇರೆ ರೀತಿ ನೀತಿಗಳೆ  ಇವೆ.  ನಾನು ಯಾವ ಜ್ಯೂರಿಗಳಿಗೆ ಫೋನ್ ಮಾಡುವುದಿಲ್ಲ, ಕಾಂಟಾಕ್ಟಲ್ಲಿಲ್ಲ. ಯಾವಾಗ ಉಗ್ರಂ ಮತ್ತು ಕಳ್ಳರ ಸಂತೆ ಸಿನಿಮಾದ ನಟನೆಗಾಗಿ ಪ್ರಶಸ್ತಿ ಲಿಸ್ಟಲ್ಲಿ ನನ್ನ ಹೆಸರು ಕಾಣಿಸಿತೋ ಅವತ್ತೇ ಇದೆಲ್ಲಾ ಅರ್ಥವಾಯಿತು. ಪ್ರಶಸ್ತಿ ಬರದಿರುವುದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ.ಆದ್ರೆ ಪ್ರತಿಭೆ ಗುರುತಿಸಲಾಗದ ಮೇಲೆ ಅವಾರ್ಡ್ ಗಳು ಯಾಕೆ ಬೇಕು ? ಪ್ರೋತ್ಸಾಹ ತುಂಬಬೇಕಿರುವ ವೇದಿಕೆ ನಿರುತ್ಸಾಹ ,ನಿರಾಶೆ ತುಂಬಬಾರದು. ಎಲ್ಲಾ ಪ್ರಶಸ್ತಿಗಳು ಫೇಕ್ ಅಲ್ಲ ಹಾಗೆ ಎಲ್ಲವು ಶ್ರೇಷ್ಠ ಅಲ್ಲ. ಎಲ್ಲಕ್ಕಿಂತ  ಪ್ರೇಕ್ಷಕರಿಗೆ ಸತ್ಯ ಗೊತ್ತಿದೆ . ನನಗಂತೂ ಇದರ ಬಗ್ಗೆ ರೋಸಿ ಹೋಗಿದೆ .
ನನ್ನ ಪಾಡಿಗೆ  ನಾನು ಕಷ್ಟಪಟ್ಟು  ಕೆಲಸ ಮಾಡಿಕೊಂಡು ಹೋಗುತ್ತೇನೆ ನೋಡುಗರ ಮೆಚ್ಚುಗೆ ಸಿಗುವುದೇ ಸಾಕು  ಎಂದು ತಮ್ಮ ಫೇಸ್ ಬುಕ್ ಪೋಸ್ಟಲ್ಲಿ ಹರಿಪ್ರಿಯಾ  ಬರೆದುಕೊಂಡಿದ್ದಾರೆ.
ಈ ಪೋಸ್ಟಿಗೆ ಸಿಕ್ಕಾಪಟ್ಟೆ ಜನ ಪ್ರತಿಕ್ರಿಯಿಸಿದ್ದು, ನೀವು ಬೇಸರ ಮಾಡಿಕೊಳ್ಳಬೇಡಿ ಎಂದು ಸಮಾಧಾನ ಮಾಡಿದ್ದಾರೆ. ಒಂದಿಬ್ಬರು ನಿಮಗೆ ರಿಕ್ಕಿ ಸಿನಿಮಾದ ನಟನೆಗೆ ಪ್ರಶಸ್ತಿ ಬಂದರೆ ಖುಷಿಯಾಗುತ್ತಿತ್ತು, ನೀರ್ ದೋಸೆ ಸಿನಿಮಾದಲ್ಲಿ ನಟಿಸಿದ್ದು ಸರಿ ಕಾಣಲಿಲ್ಲ ಎಂದು ಕಮೆಂಟ್ ಹಾಕಿದ್ದಾರೆ.
ಒಟ್ಟಾರೆಯಾಗಿ ನೋಡುವುದಾದರೆ ಹರಿಪ್ರಿಯಾ ಅವರ ಈ ಪೋಸ್ಟು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವುದು  ಸುಳ್ಳಲ್ಲ. ಈಗಾಗಲೇ ಪ್ರಶಸ್ತಿಗಾಗಿ ಲಾಬಿ ಮಾಡುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿರುವುದರಿಂದ ಹರಿಪ್ರಿಯಾ ಮಾತುಗಳು ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಮುಂದೆ  ಏನೇನಾಗುತ್ತದೋ ಸಂಬಂಧ ಪಟ್ಟವರು ಏನು  ಹೇಳುತ್ತಾರೋ ಕಾದು ನೋಡಬೇಕು.
-Ad-

1 COMMENT

  1. ನಾನು ಕೂಡ ಈ ಬಾರಿಯ ರಾಷ್ಟ್ರಪ್ರಶಸ್ತಿ ಪಡೆದ ನನ್ನ ಗುಲ್ವಾಡಿ ಟಾಕೀಸ್ ನಿರ್ಮಾಣದ ಪ್ರಥಮ ಕಲಾತ್ಮಕ ಚಿತ್ರ ” ರಿಸರ್ವೇಶನ್ “ಗೆ ರಾಜ್ಯ ಪ್ರಶಸ್ತಿಯ ನಿರೀಕ್ಷೆಯಲ್ಲಿ ದ್ದೆ ಇಡೀ ಕರ್ನಾಟಕಕ್ಕೆ ಹೆಸರು ತಂದುಕೊಟ್ಟ ನಮ್ಮ ಸಿನಿಮಾವನ್ನು ಯಾವುದೆ ಯುಭಾಗಕ್ಕು ಇಲ್ಲಿ ಗುರುತಿಸದೆ ಇದ್ದದು ಮನಸ್ಸಿಗೆ ಬಹಳ ನೊವಾಗಿದೆ..

    ಯಾಕೂಬ್ ಖಾದರ್ ಗುಲ್ವಾಡಿ

Leave Your Comments