ಚಿತ್ರ ನಟಿಗೆ ಪೋಷಕ ನಟನಿಂದ ಕಿರುಕುಳ

ಇತ್ತೀಚಿನ ದಿನಗಳಲ್ಲಿ ನಟಿಗೆ ಕಿರುಕುಳ ನೀಡುತ್ತಿರುವ ಆರೋಪ ಹೆಚ್ಚಾಗಿ ಕೇಳಿಬರುತ್ತಿದ್ದು, ಸ್ಯಾಂಡಲ್ ವುಡ್ಡಿನ ಘನತೆ ಹಾಳಾಗುತ್ತಿದೆ. ಬೆಂಗಳೂರಿನಲ್ಲಿ ಮತ್ತೊಂದು ಸಿನಿಮಾ ನಟಿಗೆ ಕಿರುಕುಳ ಆರೋಪ ಕೇಳಿ ಬಂದಿದ್ದು, ಐಸ್ ಮಹಲ್ ಚಿತ್ರದ ನಟಿಗೆ ಪೋಷಕ ನಟ ರಾಜ ಶೇಖರ್ ಅವರಿಂದ ಅಸಭ್ಯ ಮೆಸೇಜ್ ಕಳುಹಿಸುತ್ತಿರುವ ಆರೋಪ ಕೇಳಿಬರುತ್ತಿದೆ.

ರಾಜಶೇಖರ್ ತನ್ನ ಮೊಬೈಲಿಗೆ ಅವಾಚ್ಯ ಶಬ್ಧಗಳ ಸಂದೇಶ ಕಳುಹಿಸಿದ್ದು, ಆಕೆಯ ಚಾರಿತ್ರ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾನೆ ಎಂದು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಅಲ್ಲದೆ ಐಪಿಸಿ ಸೆಕ್ಷನ್ 354ಡಿ, ಜ504, 506, 509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

-Ad-

Leave Your Comments