ತಮಿಳು ಚಿತ್ರದ ಶೂಟಿಂಗಲ್ಲಿ ಬ್ಯುಸಿಯಾದ್ರು ಹರ್ಷಿಕಾ

ಕನ್ನಡದ ಕ್ಯೂಟ್ ಬೆಡಗಿ ಹರ್ಷಿಕಾ ಪೂಣಚ್ಚ ಎಲ್ಲಿ ಎಂದು ಅವರ ಅಭಿಮಾನಿಗಳು ಹುಡುಕುತ್ತಿದ್ದಾರೆ. ಕಾರಣ, ಸ್ಯಾಂಡಲ್‌ವುಡ್‌ನಲ್ಲಿ ಅವರು ಕಾಣಿಸಿಕೊಂಡು ಬಹಳ ಸಮಯವೇ ಆಯಿತು. 2016ರಲ್ಲಿ ಕಾಣಿಸಿಕೊಂಡ ‘ಬೀಟ್’ ಸಿನಿಮಾ ಬಳಿಕ ಅವರ ಯಾವುದೇ ಚಿತ್ರಗಳು ತೆರೆ ಕಂಡಿಲ್ಲ. ಅವರು ಅಭಿನಯಿಸುತ್ತಿರುವ ಹಲವಾರು ಸಿನಿಮಗಳು ಇನ್ನೂ ನಿರ್ಮಾಣ ಹಂತದಲ್ಲಿವೆ.

ಈ ಗ್ಯಾಪಲ್ಲಿ ಅವರು ತಮಿಳು ಚಿತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ಹರ್ಷಿಕಾ ತಮಿಳಿನ ‘ಉನ್ ಕಾದಲ್ ಇರುಂಥಾಲ್’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದು ಅವರ ಚೊಚ್ಚಲ ಕಾಲಿವುಡ್ ಸಿನಿಮಾ. ಈ ಚಿತ್ರದ ಶೂಟಿಂಗ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಶಾರ್ಟ್ ಜೀನ್ಸ್‌ನಲ್ಲಿ ಕಾಣಿಸಿಕೊಂಡಿರುವ ಹರ್ಷಿಕಾ ಅಭಿಮಾನಿಗಳ ಗಮನಸೆಳೆದಿದ್ದಾರೆ. ಹರ್ಷಿಕಾರ ಈ ಹೊಸ ಗೆಟಪ್‌ಗೆ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. ತೆಲುಗಿನ ಒಂದು ಚಿತ್ರದಲ್ಲೂ ಹರ್ಷಿಕಾ ಅಭಿನಯಿಸುತ್ತಿದ್ದು, ಕನ್ನಡದ ಮೀಟ್ರು, ಕ್ರೇಜಿಕೃಷ್ಣ, ಅದಿತಿ ಮುಂತಾದ ಸಿನಿಮಾಗಳು ಇನ್ನೂ ನಿರ್ಮಾಣ ಹಂತದಲ್ಲಿವೆ.

-Ad-

Leave Your Comments