ನಟಿ ಹರ್ಷಿಕಾ ಪುಣಚ್ಚ ಉಗಿದಿದ್ದು ಯಾರಿಗೆ..? 

ನಟ, ನಟಿಯರೂ ಸೇರಿದಂತೆ ಎಲ್ಲರೂ ಡಬ್ ಸ್ಮಾಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕೋದು ಕಾಮನ್. ಅದೇ ರೀತಿ ನಟಿ ಹರ್ಷಿಕಾ ಪುಣಚ್ಚ ಕೂಡ ಒಂದು ಡಬ್ ಸ್ಮಾಶ್ ಮಾಡಿ ಟ್ವಿಟ್ಟರ್ ನಲ್ಲಿ ಹಾಕಿದ್ರು. ಜನರು ವಿಡಿಯೋ ನೋಡಿ ಸಾಕಷ್ಟು ಎಂಜಾಯ್ ಮಾಡಿದ್ರು. ಜೊತೆಗೆ ವಿಡಿಯೋಗೆ ಕಾಮೆಂಟ್ ಕೂಡ ಹಾಕಿದ್ರು.
ಆದ್ರೆ ವಿಡಿಯೋ ನೋಡಿದ ಅಭಿಮಾನಿಯೊಬ್ಬ, ಎಂಜಾಯ್ ಮಾಡೋದು ಬಿಟ್ಟು ಕೆಲಸ ಇಲ್ಲದೆ ಕುಳಿತಿದ್ದಾಗ ಈ ಕೆಲಸ ಮಾಡ್ತಿದ್ದೀರಾ..? ಯಾವುದೇ ಕೆಲಸ ಇಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ಈ ಟ್ವಿಟರ್ ನೋಡ್ತಿದ್ದ ಹಾಗೆ ಕೆಂಡಾಮಂಡಲ ಆಗಿರುವ ಪುಣಚ್ಚ, ಥೂ ನಿನ್ನ ಜನ್ಮಕ್ಕೆ, ನಾನು ಮೂರು ಬಿಗ್ ಸಿನಿಮಾಗಳಲ್ಲಿ ಮಾಡ್ತಿದ್ದಿನೋ.. ನೀನು ಕೆಲಸ ಇಲ್ಲದೆ ವೇಸ್ಟ್ ಬಾಡಿ ಹಾಗೆ ಹೀಗೆ ಅಂತಾ ಸಖತ್ ಗರಂ ಆಗಿ ಉಗಿದು ಉಪ್ಪಾಕಿದ್ದಾರೆ.
ಯಾರಾದರೂ ಸರಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ ಅಂದ ಮಾತ್ರಕ್ಕೆ ಕೆಲಸ ಇಲ್ಲ ಅನ್ನೋದು ಮೂರ್ಖತನ. ಅಭಿಮಾನಿ ಆದವನು ವಿಡಿಯೋ ಗೆ ಕಾಮೆಂಟ್ ಮಾಡುವಾಗ ನೂರಲ್ಲ ಮೂರು ಬಾರಿಯಾದರೂ ಚಿಂತಿಸಬೇಕು. ಇಲ್ಲದಿದ್ರೆ ಈ ರೀತಿಯ ಎಡವಟ್ಟುಗಳು ಆಗೋದು ಮಾಮೂಲಿ. ಇನ್ನೂ ಯಾರೋ ಒಬ್ಬರು ಈ ರೀತಿ ಕಾಮೆಂಟ್ ಮಾಡಿದ್ರು ಅನ್ನೋ ಕಾರಣಕ್ಕೆ ನಟಿಯಾದವರೂ ಈ ರೀತಿ ಬೈಯ್ಯೋದು ಕೂಡ ಅಷ್ಟೇ ಸಮಂಜಸ ಅಲ್ಲ. ಒಬ್ಬ ಅಭಿಮಾನಿಗೆ ಕೋಪದಲ್ಲಿ ಬೈಯ್ದಾಗ ಇನ್ನಷ್ಟು ಅಭಿಮಾನಿಗಳಿಗೂ ಮುಜುಗರ ಆಗುತ್ತೆ ಅನ್ನೋದು ಸೆಲೆಬ್ರಿಟಿಗಳ ಮನದಲ್ಲಿ ಇದ್ದರೆ ಸಾಕು.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments