ವೀಕೆಂಡ್ ನಲ್ಲಿ ಬರಲಿದ್ದಾರೆ ದೇವೇಗೌಡ್ರು !

ವೀಕೆಂಡ್ ವಿಥ್ ರಮೇಶ್ ಭಾರೀ ಜನಮನ್ನಣೆ ಗಳಿಸಿರುವ ಝೀ ಕನ್ನಡ ವಾಹಿನಿಯ ಕಾರ್ಯಕ್ರಮ. ಪ್ರತೀ  ವಾರ ಇವತ್ತು ಯಾರ ಬದುಕನ್ನು ನೋಡಬಹುದು ಎನ್ನುವ ಕುತೂಹಲ ಹುಟ್ಟಿಸಿರುವ ವಿಶಿಷ್ಟ ಕಾರ್ಯಕ್ರಮ. ಸಾಧಕರ ಬದುಕಿನ ಸಂತಸ, ಸಂಕಟದ ಕ್ಷಣಗಳನ್ನು ಕೇಳಿ  ಸ್ಪೂರ್ತಿ ಪಡೆವುದಕ್ಕೆ , ಅವರ ಪರಮಾಪ್ತರನ್ನು ಕಾಣುವುದಿಕ್ಕೆ ಜನ ಕಾತರದಿಂದ ಕಾಯುತ್ತಾರೆ. ಈ ವಾರ ಕರ್ನಾಟಕದ ಹೆಮ್ಮೆಯ ಮುತ್ಸದ್ಧಿ ರಾಜಕಾರಣಿ, ಫೀನಿಕ್ಸ್ ಎನಿಸಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡರ ಸರದಿ.

ಕಳೆದ  ಭಾಗಗಳಲ್ಲಿ ಸಿನಿಮಾ ಕ್ಷೇತ್ರದವನ್ನೇ ಸಾಧಕರೆಂದು ಪರಿಗಣಿಸಿದ್ದರಿಂದ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆದ್ರೆ ಈ ಬಾರಿಯಸಂಚಿಕೆಗಳಲ್ಲಿ ಸಿನಿಮಾ ಹೊರತಾದ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಬರಹಗಾರರನ್ನು ಸಾಧಕರ ಸೀಟ್ ನಲ್ಲಿ ಕೂರಿಸುವ ಪ್ರಯತ್ನ ಪ್ರಶಂಸೆಗೆ ಪಾತ್ರವಾಗಿದೆ.

ತಮ್ಮ ವಯಸ್ಸಿನ ಮಿತಿ, ಅನಾರೋಗ್ಯವನ್ನೂ  ಬದಿಗೊತ್ತಿ ಕಾವೇರಿ ವಿಚಾರದಲ್ಲಿ ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಒತ್ತಡ ತರಲು ಉಪವಾಸ ಕುಳಿತದ್ದು ಜನರ ಮನಸ್ಸಿನಲ್ಲಿ ಇನ್ನು ಹಸಿಯಾಗಿದೆ. ದೇವೇಗೌಡರ ಮನಸಿನಲ್ಲಿ ಏನಿರಬಹುದು ? ಸಾಧಕರ  ಮನಸ್ಸಿನ ತಂತುಗಳನ್ನು ಸೂಕ್ಷ್ಮವಾಗಿ ಮೀಟಿ ಅವರೊಳಗಿನ ಭಾವನೆಗಳನ್ನು ತೆರೆದು ತೋರುವ ರಮೇಶ್ ಅರವಿಂದ್ ದೇವೇಗೌಡರಿಂದ ಎಂಥೆಂಥ ವಿಚಾರವನ್ನು ಬಿಡಿಸಿಯಾರು ಎಂಬ ಕಾತುರ ನೋಡುಗರಿಗಂತೂ ಇದ್ದೇ ಇದೆ. ಶನಿವಾರದವರೆಗೂ ಕಾಯಬೇಕಷ್ಟೇ.

-Ad-

Leave Your Comments