ಹೆಬ್ಬುಲಿಯ ಅಬ್ಬರ !!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಹೆಬ್ಬುಲಿ ರಾಜ್ಯಾದ್ಯಂತ ತೆರೆ ಕಂಡಿದ್ದು ಮಧ್ಯ ರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿದೆ.
ಈಗಾಗಲೇ ಹೆಬ್ಬುಲಿ ಆರ್ಭಟ ಶುರುವಾಗಿದ್ದು ಮೊದಲ ಶೋ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ವನ್ನು ಬಹಳ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.
ಅಭಿಮಾನಿಗಳು ರಾತ್ರಿಯಿಂದಲೇ ಚಿತ್ರಮಂದಿರದ ಬಳಿ ಕಾಯುತ್ತಿದ್ದರು. ಎಲ್ಲೇ ನೋಡಿದರು ಹೆಬ್ಬುಲಿ ಹೇರ್ ಸ್ಟೈಲ್ ನಲ್ಲಿ ಕಿಚ್ಚನ ಫ್ಯಾನ್ಸ್ ಹುಚ್ಛೆದ್ದು ಕುಣಿಯುತ್ತಿದ್ದಾರೆ.
ಹೆಬ್ಬುಲಿ, ‌ಸುಮಾರು 400 ಕ್ಕೂ ಹೆಚ್ಚು Screen ಗಳಲ್ಲಿ ರಿಲೀಸ್ ಆಗಿದ್ದು ಎಲ್ಲೆಡೆ ಘರ್ಜಿಸುತ್ತಿದೆ.
ಹಾಗೆ ಸುದೀಪ್ ಹಾಗೂ ರವಿಚಂದ್ರನ್ ರ ಒಂದು ಆತ್ಮೀಯ ಅನುಬಂಧ ಇಂದು ನೆನ್ನೆಯದಲ್ಲ ಅದಕ್ಕೆ ಕನ್ನಡಿಯಂತೆ ಹೆಬ್ಬುಲಿ ಸಿನಿಮಾದಲ್ಲೂ ಸುದೀಪ್ ಗಾಗಿ ರವಿಮಾಮ ನಾಯಕನ ಅಣ್ಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

hebbuli 2ಈ ಚಿತ್ರ ದಲ್ಲಿ ಕಿಚ್ಚನ ನಾಯಕಿಯಾಗಿ ನಟಿಸಿರುವ ಮಲಯಾಳಂ ನಟಿ ‘ಅಮಲ ಪೌಲ್’ ಹೆಬ್ಬುಲಿ ಚಿತ್ರದ ಮೂಲಕ Sandalwood ಗೆ ಪಾದಾರ್ಪಣೆ ಮಾಡಿದ್ದಾರೆ, ಕಿಚ್ಚ ರೊಂದಿಗೆ ತೆರೆ ಹಂಚಿಕೊಂಡಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು ಬೆಂಗಳೂರು ನನಗೆ ಲಾಸ್ ವೇಗಾಸ್ ಇದ್ದಂತೆ ಎಂದಿದ್ದಾರೆ.

ಒಟ್ಟಾರೆ ತಮ್ಮ ನೆಚ್ಚಿನ ನಟನ ಚಿತ್ರ ತೆರೆಕಂಡಿರುವುದು ಕಿಚ್ಚನ ಅಭಿಮಾನಿಗಳೀಗೆ ಹಬ್ಬವೇ ಸರಿ…..

 

-Ad-

Leave Your Comments