ಸನ್ನಿ ಅಭಿಮಾನಿಗಳಿಗೆ ಸಿಹಿ ಸುದ್ದಿ, ಸರ್ಕಾರಕ್ಕೆ ಚಾಟಿ..

ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆ ಮಾಡಲು ಸನ್ನಿ ನೈಟ್ಸ್ ಕಾರ್ಯಕ್ರಮ ಅಯೋಜಿಸಲಾಗಿತ್ತು. ಟೈಮ್ಸ್ ಕ್ರಿಯೇಷನ್ ಅನ್ನೋ ಸಂಸ್ಥೆ ಈ ಕಾರ್ಯಕ್ರಮ ಆಯೋಜನೆ ಮಾಡಿದ ಬಳಿಕ ಒಂದೇ ಒಂದು ಸಂಘಟನೆ ವಿರೋಧ ಮಾಡಿದೆ ಅನ್ನೋ ಕಾರಣಕ್ಕೆ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಅನ್ನೋ ತೀರ್ಮಾನ ಪ್ರಕಟಿಸಿತ್ತು. ಆದ್ರೆ ಸಾವಿರಾರು ಸನ್ನಿ ಅಭಿಮಾನಿಗಳು ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ದುಬಾರಿ ಬೆಲೆಯ ಟಿಕೆಟ್ ಖರೀದಿ ಮಾಡಿದ್ದಾರೆ. ಜೊತೆಗೆ ಇಷ್ಟೆಲ್ಲಾ ರಾದ್ದಾಂತ ಆಗ್ತಿದ್ದ ಹಾಗೆ ಸನ್ನಿ ಲಿಯೋನ್ ನಾನು ಕರ್ನಾಟಕಕ್ಕೆ ಬರೋದಿಲ್ಲ. ಜನರ ನೆಮ್ಮದಿಯೇ ನನಗೂ ಮುಖ್ಯವಾಗಿದ್ದು, ಕಾರ್ಯಕ್ರಮಕ್ಕೆ ಪೊಲೀಸರು ಭದ್ರತೆ ಕೊಡದಿದ್ದರೆ, ನಾನು ಬರಲ್ಲ ಎಂದಿದ್ದರು..

ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ ಆಯೋಜಕರು..!
ನಿರಾಕರಣೆಗೆ ಕಾರಣ ಕೇಳಿದ ಹೈಕೋರ್ಟ್..!

ಸರ್ಕಾರ ಸ್ವ ಇಚ್ಛೆಯಿಂದಲೇ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದ ಮೇಲೆ ಪೊಲೀಸ್ ಇಲಾಖೆ ಅನುಮತಿ ಕೊಡಲು ಸಾಧ್ಯವೇ..? ಎನ್ನುವಂತೆ ಪೊಲೀಸ್ ಆಯುಕ್ತರೂ ಕೂಡ ಅನುಮತಿ ಕೊಡಲ್ಲ ಎಂದು ಗೃಹ ಸಚಿವರ ಮಾತನ್ನೇ ಪುನರುಚ್ಚರಿಸಿದರು. ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಆಯೋಜಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕಾರ್ಯಕ್ರಮ ಆಯೋಜನೆಗೆ ಅಡ್ಡಿ ಮಾಡುತ್ತಿರೋದ್ಯಾಕೆ ಎಂದು ಪ್ರಶ್ನೆ ಮಾಡಿರುವ ಹೈಕೋರ್ಟ್, ಕಾರ್ಯಕ್ರಮದ ರೂಪುರೇಷೆಗಳ ಜೊತೆ ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಕೆ ಮಾಡಲು ಸೂಚನೆ ಕೊಟ್ಟಿದೆ. ಡಿಸೆಂಬರ್ 25ರ ಒಳಗಾಗಿ ಅನುಮತಿ ನೀಡದಿದ್ದರೆ ಮತ್ತೆ ಅರ್ಜಿ ಹಾಕಲು ಟೈಮ್ಸ್ ಕ್ರಿಯೇಷನ್ ಗೆ ಸೂಚನೆ ಕೊಡಲಾಗಿದೆ..

ಹೈಕೋರ್ಟ್ ನಲ್ಲಿ ಏನಾಯ್ತು ಗೊತ್ತಾ..?

ಕಾರ್ಯಕ್ರಮಕ್ಕೆ ಈಗಾಗಲೇ ಎರಡು ಕೋಟಿ ವೆಚ್ಚ ಮಾಡಲಾಗಿದೆ, ಸಾವಿರಾರು ಟಿಕೇಟ್ ಗಳು ಮಾರಾಟವಾಗಿವೆ ಎಂದು ಅರ್ಜಿದಾರರ ಪರ ವಕೀಲರು ಕೋರ್ಟ್ ಗೆ ತಿಳಿಸಿದ್ರು..

ಈ ಬಗ್ಗೆ ನಾನು ಪತ್ರಿಕೆಗಳಲ್ಲಿ ಓದಿದ್ದೇನೆ, ಆಕೆ ಬರೋದಿಲ್ಲವೆಂದು ಹೇಳಿದ್ದಾರೆ ಅಲ್ವಾ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು ತಿಳಿಸಿದರು. ಕೆಲವು ಸಂಘಟನೆಗಳು ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿವೆ, ನಾವು ಪೊಲೀಸ್ ಇಲಾಖೆಗೆ ಡಿಸೆಂಬರ್ 1 ರಂದೇ ಅರ್ಜಿ ಸಲ್ಲಿಸಿದ್ದೇವೆ ಇನ್ನೂ ಅನುಮತಿ ಸಿಕ್ಕಿಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಯಿತು.

ಆಯೋಜಕರು ಸಲ್ಲಿಸಿದ್ದ ಅರ್ಜಿ ಮೇಲೆ ಏನು ಕ್ರಮಕೈಗೊಂಡಿದ್ದೀರಿ, ಒಂದು ತಿಂಗಳಿನಿಂದ ಯಾಕೆ ಅವರ ಅರ್ಜಿ ವಿಲೇವಾರಿ ಮಾಡದೆ ಸುಮ್ಮನಿದ್ದೀರಿ ಎಂದು ಸರ್ಕಾರಿ ವಕೀಲರಿಗೆ ಕೋರ್ಟ್ ಪ್ರಶ್ನಿಸಿತು. ಇದೇ ರೀತಿಯ ಬೇರೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ, ಆದರೆ ನಮಗೆ ಮಾತ್ರ ಅನುಮತಿ ನೀಡುತ್ತಿಲ್ಲ ಎಂದು ಆಯೋಜಕರು ಸರ್ಕಾರದ ವಿರುದ್ಧ ಆರೋಪ ಮಾಡಿದರು.

ಇತರೆ ಆಯೋಜಕರಿಗೆ ಅನುಮತಿ ನೀಡಿದ ಮೇಲೆ ಇವರಿಗೆ ಯಾಕೆ ಅನುಮತಿ ನೀಡುತ್ತಿಲ್ಲ ಎಂದು ಹೈಕೋರ್ಟ್ ಪ್ರಶ್ನೆ ಮಾಡಿತು. ಇಲ್ಲಿಯವರೆಗೆ ಎಷ್ಟು ಕ್ಲಬ್‌ಗಳಿಗೆ ಅನುಮತಿ ನೀಡಲಾಗಿದೆ..? ಇವರ ಅರ್ಜಿ ಮೇಲೆ ನೀವು ಕೈಗೊಂಡಿರುವ ಕ್ರಮದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ ಎಂದು ಸರ್ಕಾರಿ ವಕೀಲರಿಗೆ ಸೂಚನೆ ನೀಡಿತು.

ಮತ್ತೆ ವಿಚಾರಣೆ ಆರಂಭವಾದಾಗ ನಮ್ಮ ಕಾರ್ಯಕ್ರಮದಿಂದ ಕಾನೂನು ಸಮಸ್ಯೆ ಎದುರಾಗಲ್ಲ ಎಂದು ಅರ್ಜಿದಾರರ ಪರ ವಕೀಲ ಉದಯ್ ಹೊಳ್ಳ ಭರವಸೆ ನೀಡಿದರು. ಹೊಸ ರಾತ್ರಿ ಬೇರೆ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಟೈಮ್ಸ್ ಕ್ರಿಯೇಷನ್ ಗೆ ನಿರಾಕರಿಸುವುದು ಸರಿಯಲ್ಲ ಎಂದ ಹೈಕೋರ್ಟ್, ಡಿಸೆಂಬರ್ 31 ರಂದು ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ ಎಂಬುದರ ಬಗ್ಗೆ ಪ್ರಮಾಣ ಪತ್ರ ನೀಡಿ. ಈ ರಸಮಂಜರಿ ಕಾರ್ಯಕ್ರಮಕ್ಕೆ ಏಕೆ ಅಡ್ಡಿ ಮಾಡುತ್ತಿದ್ದೀರಿ ಎಂದು ಸರ್ಕಾರಕ್ಕೆ ಹೈಕೋರ್ಟ್ ತರಾಟೆ.

ಅರ್ಜಿದಾರರಿಗೆ ಮತ್ತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲು ಹಾಗೂ ಪೊಲೀಸ್ ಆಯುಕ್ತರು 25 ರೊಳಗಾಗಿ ಅನುಮತಿ ಬಗ್ಗೆ ಕ್ರಮ ಕೈಗೊಳ್ಳಬೇಕು. ಅನುಮತಿ ಸಿಗದಿದ್ದರೆ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಕೋರ್ಟ್ ಸೂಚನೆ ನೀಡಿತು.

ಜ್ಯೋತಿ ಗೌಡ, ನಾಗಮಂಗಲ

-Ad-

Leave Your Comments