ಹಾಲಿವುಡ್ ನಟನನ್ನೇ ದಂಗು ಬಡಿಸಿದ್ದ ಡಾ. ರಾಜ್ ಕುಮಾರ್ ?!

Arnold schwarzenegger !! ಹಾಲಿವುಡ್ ಸಿನಿಮಾದ ದಂತಕಥೆ . ಅಪ್ರತಿಮ ನಟ . ಒಮ್ಮೆಯಾದರೂ ಆತನನ್ನು ನೋಡಬೇಕು. ಆತನ ಹಾಗೆ ಅಭಿನಯಿಸಬೇಕು ಅಂತ ಆಸೆಪಟ್ಟ ಕಲಾವಿದರೆಷ್ಟೋ ಮಂದಿ ಜಗತ್ತಿನಲ್ಲಿದ್ದಾರೆ. ಆದರೆ ಅಂಥಾ ಜಗತ್ಪ್ರಸಿದ್ಧ ನಟನಿಗೇ ವಿಸ್ಮಯ ಎನಿಸಿದ್ದು ಡಾ.ರಾಜ್ ಕುಮಾರ್ ಅವರ ಚಿತ್ರಗಳು !!

ಶ್ರೇಷ್ಠ ನಟರನ್ನು ಭೇಟಿ ಮಾಡುವುದು, ವಿಚಾರ ವಿನಿಮ ಮಾಡಿಕೊಳ್ಳುವುದು ಪುನೀತ್ ರ ಅಭ್ಯಾಸ. ಹಿಂದೊಮ್ಮೆ ಭಾರತಕ್ಕೆ ಬಂದಿದ್ದ  Arnold schwarzenegger ನ ಭೇಟಿಗೆ ತೆರಳಿದ್ದ ಪುನೀತ್ ರಾಜ್ ಕುಮಾರ್ ತಮ್ಮ ಪರಿಚಯ ಹೇಳಿಕೊಂಡಿದ್ದಾರೆ . ತಾವು ರಾಜ್ ಕುಮಾರ್ ಅವರ ಪುತ್ರ ಎಂಬುದನ್ನೂ ಹೇಳಿದ್ದಾರೆ. ಹಾಗೇ ಮಾತಿನ ಮಧ್ಯೆ ರಾಜ್ ಕುಮಾರ್ ಅವರ ಫೋಟೋ ತೋರಿಸುತ್ತಾ, ಅವರ ಚಿತ್ರಗಳ ಬಗ್ಗೆ ಹೇಳ್ತಾ ೨೦೮ ಸಿನಿಮಾಗಳಲ್ಲಿ ಅಭಿನಯಿಸಿದ್ದನ್ನೂ ಹೇಳಿದ್ದಾರೆ.

ರಾಜ್ ಅಭಿನಯಿಸಿದ ಪೌರಾಣಿಕ, ಸಾಮಾಜಿಕ, ಬಾಂಡ್ ಚಿತ್ರಗಳು , ಬಂಗಾರದ ಪಂಜರದಂಥ  ಹಾಸ್ಯ ಚಿತ್ರಗಳು ಒಟ್ಟಾರೆ ಬಹುದೊಡ್ಡ ವಿಸ್ತಾರವನ್ನು ಚರ್ಚಿಸುತ್ತಾ Arnold schwarzenegger  ಆಶ್ಚರ್ಯ  ವ್ಯಕ್ತಪಡಿಸುತ್ತಿದ್ದರಂತೆ. ಅಷ್ಟೇ ಅಲ್ಲ ನಾವು ಹಾಲಿವುಡ್ ನಲ್ಲಿ ವರುಷಕ್ಕೆ ಒಂದು ಸಿನಿಮಾ ಮಾಡುವವರು. ಈ ಮನುಷ್ಯ ಇನ್ನೂರ ಎಂಟು ಸಿನಿಮಾ ಮಾಡಿದ್ದಾದರೂ ಹೇಗೆ ? ವಿಶ್ರಾಂತಿಯನ್ನೇ ಪಡೆಯದೇ ಎಂತೆಂಥಾ   ಪಾತ್ರಗಳನ್ನೂ ಇಷ್ಟು ದೊಡ್ಡ ಸಂಖ್ಯೆಯ ಚಿತ್ರಗಳನ್ನು ಮಾಡಿರಬೇಕಾದರೆ ಇದು ದೈತ್ಯ ಪ್ರತಿಭೆ! ಇದು ಸಾಧ್ಯವಾದದ್ದಾದರೂ ಹೇಗೆ ? ಇದು ನನಗೆ ಉತ್ತರ ತಿಳಿಯದ ಬೆರಗು ಅಂದಿದ್ದಾರೆ.

ಬಾಲಿವುಡ್ ಮೇರು ಶಿಖರಗಳ ಮನಸ್ಸುಗಳನ್ನು ಗೆದ್ದ ರಾಜಣ್ಣನ ಪ್ರತಿಭೆ, ಅನ್ಯದೈವವನೊಲ್ಲೆ ಎಂದು ಕನ್ನಡಾಂಬೆಯನ್ನೇ ಪೂಜಿಸಿದರೂ Arnold schwarzenegger ನಂಥ ಹಾಲಿವುಡ್ ನ  ಮೇರು ಪರ್ವತವೇ ಬಾಗಿ ನಮಿಸುವಂತೆ ಮಾಡಿದೆ.

ಒಂದೇ ವರುಷದಲ್ಲಿ 14 ಚಿತ್ರಗಳಲ್ಲಿ ಅಭಿನಯಿಸಿದ ವಿಶ್ವದ ಏಕೈಕ ನಟ ರಾಜ್ ಕುಮಾರ್ ಇವತ್ತಿಗೂ ಎಲ್ಲ ಎಲ್ಲೆ ಮೀರಿ ಕಲಾವಿದರ ಪಾಲಿಗೆ ಅಚ್ಚರಿಯೇ .

-Ad-

Leave Your Comments