ಹಾಲಿವುಡ್ ನಲ್ಲೊಬ್ಬ ರಜನಿಕಾಂತ್ !?

ನೀವು ಅಮೆರಿಕಾದಲ್ಲಿ ಅಡ್ಡಾಡುತ್ತಿರುತ್ತೀರಿ. ಒಂದು ಕಡೆ ಆತ ದೂರದಲ್ಲಿ ಕೂತಿರುತ್ತಾನೆ. ನೀವು ಒಂದ್ಸಲ ಅವನ ಕಡೆ ನೋಡಿ ಬೇರೆ ಕಡೆ ತಿರುಗುತ್ತೀರಿ. ನಿಮಗೆ ತಕ್ಷಣ ಅಯ್ಯೋ ನಮ್ ರಜನಿಕಾಂತ್ ಅಲ್ವೇ ಅಂತ ಫ್ಲಾಶ್ ಆಗುತ್ತದೆ. ತಕ್ಷಣ ಅವನ ಕಡೆ ಓಡೋಡಿ ಬರುತ್ತೀರಿ. ತುಂಬಾ ಹತ್ತಿರ ಬಂದು ನೋಡಿ ಗಮನಿಸಿದರೆ ಗೊತ್ತಾಗುತ್ತದೆ. ಆತ ರಜನಿಕಾಂತ್ ಅಲ್ಲ. ಆದರೆ ರಜನಿಕಾಂತ್ ಥರಾನೇ ಕಾಣಿಸುತ್ತಾರೆ. ಆತ ಬೇರಾರೂ ಅಲ್ಲ ಜೆಫ್ರಿ ಬ್ರಿಡ್ಜಸ್.

ಈತ ಹಾಲಿವುಡ್ ನ ಪ್ರಖ್ಯಾತ ನಟ. ಪೂರ್ತಿ ಹೆಸರು ಜೆಫ್ರಿ ಲಿಯಾನ್ ಬ್ರಿಡ್ಜಸ್. 2009ರ ಕ್ರೇಝಿ ಹಾರ್ಟ್ ಸಿನಿಮಾದ ನಟನೆಗೆ ಆಸ್ಕರ್ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಪಡೆದ ನಟನೀತ. ಈತ ಗಿಟಾರ್ ಹಿಡಿದು ಹಾಡುತ್ತಿದ್ದರೆ ರಜನಿಕಾಂತ್ ರನ್ನು ನೋಡಿದಂತೆಯೇ ಅನ್ನಿಸುತ್ತದೆ. ಬಿಳಿ ಗಡ್ಡ ಬಿಟ್ಟು ಕನ್ನಡಕ ಹಾಕಿಕೊಂಡರೆ ಥೇಟ್ ರಜನೀಕಾಂತೇ.

ಈ ಇಬ್ಬರು ನೋಡಲಿಕ್ಕಷ್ಟೇ ಒಂದೇ ಥರ ಅಲ್ಲ. ಇನ್ನೂ ಅನೇಕ ಸಾಮ್ಯತೆಗಳಿವೆ. ಇಬ್ಬರೂ ಕಲಾವಿದರು. ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಮೆರಿಕಾದ ಜೆಫ್ರಿ ಆರಂಭದಲ್ಲಿ ಟೀವಿ ಸೀರೀಸ್ ನಲ್ಲಿ ನಟಿಸುತ್ತಿದ್ದರು. ಅನಂತರ ಸಿನಿಮಾರಂಗಕ್ಕೆ ಬಂದರು.

-Ad-

Leave Your Comments