ಹೃತಿಕ್ ರೋಷನ್ ಗೆ ಕಂಗನಾ ಹಾಕುತ್ತಿರೋ ಪ್ರಶ್ನೆಗಳೇನು?

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಕಂಗನಾ ರನೌತ್ ನಡುವಿನ ಕಿತ್ತಾಟ ಮೇಘಾ ಧಾರಾವಾಯಿಯಂತೆ ಮುಂದುವರಿಯುತ್ತಲೇ ಇದ್ದು, ಸದ್ಯಕ್ಕೆ ನಿಲ್ಲುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ತಮ್ಮಿಬ್ಬರ ವಿವಾದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಿನಗಳಿಂದ ಮೌನವಾಗಿದ್ದ ಹೃತಿಕ್ ಈಗ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಅದಕ್ಕೆ ಈಗ ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ ಹೃತಿಕ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಹಲವು ಸಮಯಗಳಿಂದ ಕಂಗನಾ ಅವರು ಹೃತಿಕ್ ಅವಗೆ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತಿದ್ದಾರೆ. ಆದರೆ ಹೃತಿಕ್ ಅದಕ್ಕೆ ಉತ್ತರ ನೀಡದೇ ಪಲಾಯನ ಮಾಡುತ್ತಿದ್ದಾರೆ ಎಂದಿರುವ ರಿಜ್ವಾನ್, ಹೃತಿಕ್ ಅವರಿಗೆ ಕೇಳಿದ ಪ್ರಶ್ನೆಗಳು ಹೀಗಿವೆ…
  • 2014ರಿಂದ ಕಂಗನಾರ ಖಾಸಗಿ ಇ ಮೇಲ್ ಹ್ಯಾಕ್ ಆಗಿರುವುದು ಗೊತ್ತಿದ್ದರೂ ಹೃತಿಕ್ ಆ ಖಾತೆಯಿಂದ ಬಂದ ಮೇಲ್ ಗಳನ್ನು ತಮ್ಮ ಖಾಸಗಿ ಮೇಲ್ ಐಡಿಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದು ಏಕೆ ಮತ್ತು ಈ ವಿಷಯ ಕುರಿತು ಪೊಲೀಸರಿಗೆ ದೂರು ನೀಡಲಿಲ್ಲ ಏಕೆ?
  • ವಿವಾಹಿತ ಹಾಗೂ ಇಬ್ಬರು ಮಕ್ಕಳ ತಂದೆಯಾಗಿರುವ ಹೃತಿಕ್ ತಮಗೆ ಬಂದ ಇಮೇಲ್ ಗಳನ್ನು ನೋಡಿದ ಮೇಲೆ ಕಂಗನಾ ಅವರಿಗೆ ವಿಷಯ ತಿಳಿಸಲಿಲ್ಲ ಏಕೆ?
  • ದೂರು ನೀಡುವುದಕ್ಕೆ ಕಂಗನಾ ಸಂಪೂರ್ಣ ಸಹಕಾರ ನೀಡಿದ್ದರೂ ಹೃತಿಕ್ ರೋಷನ್ ಎಫ್ಐ ಆರ್ ದಾಖಲಿಸಲು ವಿಳಂಬ ಮಾಡಿದ್ದು ಏಕೆ? ಕೇವಲ ಅನೌಪಚಾರಿಕವಾಗಿ ಏಕೆ ದೂರು ನೀಡಿದರು? ಇಲ್ಲಿ ಯಾರ ಹಿತಾಸಕ್ತಿ ಅಡಗಿದೆ?
  • ಹ್ಯಾಕ್ ಆದ ಖಾತೆಯಿಂದ ಬಂದ ಸಾವಿರಾರು ಇಮೇಲ್ ಗಳನ್ನು ಸಂಗ್ರಹಿಸಿ ದೂರು ನೀಡಲು ಹೃತಿಕ್ ರೋಷನ್ 7 ತಿಂಗಳು ಸಮಯ ತೆಗೆದುಕೊಂಡಿದ್ದು ಏಕೆ? ಇದರ ಹಿಂದಿನ ಉದ್ದೇಶವೇನು?
  • ತಮಗೆ ನೊಟೀಸ್ ಬಂದ ಮೇಲಷ್ಟೇ ಹೃತಿಕ್ ಏಕೆ ಎಫ್ಐಆರ್ ದಾಖಲಿಸಿದರು? ಅದು ಕೂಡ ಎರಡು ವರ್ಷಗಳು ಕಳೆದ ನಂತರ?
  • ಕಂಗನಾ ಯಾವುದೇ ಮಾನಸಿಕ ಕಾಯಿಲೆಯಿಂದ ಬಳಲುತ್ತಿಲ್ಲ ಎಂಬುದು ಗೊತ್ತಿದ್ದರೂ, ಮಾಧ್ಯಮಗಳ ಮುಂದೆ ತಿರುಚಲಾದ ಇಮೇಲ್ ಬಿಡುಗಡೆ ಮಾಡಿದ್ದು ಏಕೆ?
  • ಕಂಗನಾ ಮತ್ತು ಹೃತಿಕ್ ನಡುವಿನ ಸಂಬಂಧವನ್ನು ಪುಷ್ಟೀಕರಿಸುವ ಫೋಟೋಗಳನ್ನು ಯಾರಿಗೂ ತೋರಿಸಬಾರದು ಎಂದು ಹೇಳಿದ್ದರೂ ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ಏಕೆ?
-Ad-

Leave Your Comments