ಹುಚ್ಚ ವೆಂಕಟ್ ಹೀಗೆಕಾದ್ರು ಗೊತ್ತಾ?

ಹುಚ್ಚ ವೆಂಕಟ್ ಅನ್ನೋ ಹೆಸರು ಕೇಳ್ತಿದ್ದ ಹಾಗೆ ಕೆಲವು ಜನ ಆತ ಒಳ್ಳೆಯವನು. ಹೆಣ್ಣು ಮಕ್ಕಳಿಗೆ ತುಂಬಾ ಗೌರವ ಕೊಡ್ತಾನೆ. ಆತ ನಿರ್ಮಾಣ ಮಾಡಿ ಆಕ್ಟ್ ಮಾಡುವ ಸಿನಿಮಾಗಳಲ್ಲೂ ಐಟಂ ಸಾಂಗ್‌ಗಳು. ಅಶ್ಲೀಲ ಮಾತುಗಳಿಗೆ ಅವಕಾಶ ಕೊಡುವುದಿಲ್ಲ ಅಂತಾ ಹೇಳ್ತಾರೆ. ಇದೇ ರೀತಿ ಹುಚ್ಚ ವೆಂಕಟ್ ಸಿನಿಮಾ ತೆಗೆದಿದ್ದ ವೆಂಕಟ್, ಸಿನಿಮಾ ಬಿಡುಗಡೆಯಾದ ದಿನ ಯಾರೂ ಸಿನಿಮಾ ನೋಡಲು ಬಂದಿಲ್ಲ ಅಂತಾ ನ್ಯೂಸ್ ಚಾನೆಲ್ ಒಂದರ ಮುಂದೆ ಬಾಯಿಗೆ ಬಂದ ಹಾಗೆ ಮಾತನಾಡಿ, ಜನರ ಗಮನ ಸೆಳೆದಿದ್ರು. ಜನರು ಈತನ ಮಾತುಗಳಲ್ಲಿ ಸತ್ಯವಿದೆ ಅನ್ಕೊಳ್ಳಕ್ಕೆ ಶುರು ಮಾಡಿದ್ರು. ಆತ ಬೈದು ಮಾತನಾಡಿದ್ರು. ಆತನ ಹುಚ್ಚಾಟಗಳಿಗೆ ಜನರು ಎಂಜಾಯ್ ಮಾಡುತ್ತಾ ಸಾಗಿದ್ರು. ಇದನ್ನೇ ಬಂಡವಾಳ ಮಾಡಿಕೊಂಡ ರಿಯಾಲಿಟಿ ಶೋಗಳು ಈತನ ಹುಚ್ಚಾಟ ಬಳಸಿಕೊಳ್ಳಲು ಮುಂದಾದ್ರು. ಅದರಲ್ಲಿ ಮೊದಲನೆಯದು ಅಂದ್ರೆ ಬಿಗ್ ಬಾಸ್. ಆ ಬಳಿಕ ಸೂಪರ್ ಜೋಡಿ..
ಬಿಗ್‌ಬಾಸ್‌ನಲ್ಲೂ ಹುಚ್ಚಾಟ, ಕಿರುಚಾಟದ ಮೂಲಕವೇ ಗಮನಸೆಳೆದ ಈತ ಸಾಕಷ್ಟು ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಕಾಲಕಳೆದ. ಆ ಬಳಿಕ ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡುವ ಮೂಲಕ ಹೌಸ್‌ನಿಂದ ಹೊರದೂಡಲ್ಪಟ್ಟಿದ್ದು ನಿಮಗೆಲ್ಲಾ ಗೊತ್ತೇ ಇದೆ.. ಮನೆಯಿಂದ ಹೊರಬಂದ ಬಳಿಕ ಸಾಕಷ್ಟು ಹುಚ್ಚಾಟ ಮಾಡಿ ಜೈಲಿಗೂ ಹೋಗಿಬಂದಿದ್ದು, ಆಯ್ತು. ಆ ವೇಳೆ ಈತನಿಗೆ ಯಾವುದೋ ಮಾನಸಿಕ ಸಮಸ್ಯೆಯಿದೆ ಅನ್ನೋದನ್ನ ಪತ್ತೆ ಮಾಡಿದ್ದ ವೈದ್ಯರು, ಚಿಕಿತ್ಸೆಯನ್ನೂ ಕೊಡ್ತಿದ್ರು. ಆದ್ರೆ ಮತ್ತೆ ಫೀಲ್ಡಿಗೆ ಬಂದ ಹುಚ್ಚ ವೆಂಕಟ್ ಮತ್ತೆ ರಿಯಾಲಿಟಿ ಶೋನಲ್ಲಿ ಭಾಗಿಯಾಗುವ ಮೂಲಕ ಜನರ ಮುಂದೆ ಬಂದಿದ್ರು. ಜೈಲಿನಿಂದ ಹೊರಬಂದ ಬಂದ ಬಳಿಕ ನಾನು ಇನ್ಮುಂದೆ ಹೊಲಸು ಪದಬಳಕೆ ಮಾಡಲ್ಲ. ನಾನು ನಿಮ್ಮ ಹಾಗೆ ಇರ್‍ತೀನಿ ಅನ್ನೋ ಭರವಸೆ ಕೊಟ್ಟು, ಆ ಬಳಿಕ ಅಲ್ಲಿ ಇಲ್ಲಿ ಮತ್ತದೇ ಹುಚ್ಚಾಟ ಮಾಡ್ತಿದ್ರು.. ಇದೀಗ ಮತ್ತೊಂದು ಹುಚ್ಚಾಟ ಮಾಡಿ ಸಮಸ್ಯೆ ಮೈಮೇಲೆ ಎಳೆದುಕೊಂಡಿದ್ದಾರೆ.
ಹುಡ್ಗೀರ ಮೇಲೆ ಪ್ರೀತಿನಾ..? ಗೌರವನಾ..?
ಹುಚ್ಚ ವೆಂಕಟ್ ಹುಡ್ಗೀರ ಮೇಲೆ ನನಗೆ ಸಾಕಷ್ಟು ಗೌರವ ಇದೆ. ಅವರಿಗೆ ಗೌರವ ಕೊಟ್ಟು ಮಾತನಾಡಿಸಬೇಕು. ಹೆಣ್ಣು ಅಂದ್ರೆ ತಾಯಿ ಸಮಾನ ಅಂತಾ ಮಾರುದ್ದ ಭಾಷಣ ಬಿಗೀತಾರೆ. ಆದ್ರೆ ಅವರು ವಿವಾದ ಮಾಡಿಕೊಳ್ಳೋದು ಮಾತ್ರ ಅದೇ ಹುಡ್ಗೀರ ವಿಚಾರದಲ್ಲಿ. ಇದಕ್ಕೂ ಮೊದಲು ರಮ್ಯಾರನ್ನು ಮದ್ವೆಯಾಗಿದ್ದೇನೆ ಅಂತಾ ಮಾಧ್ಯಮಗಳಲ್ಲಿ ಬೊಬ್ಬೆ ಹಾಕಿದ್ದ ಹುಚ್ಚ ವೆಂಕಟ್, ಆ ಬಳಿಕ ನಿಜ ಜೀವನದಲ್ಲಿ ಈಗಾಗಲೇ ಮದ್ವೆಯಾಗಿದ್ದಾನೆ ಅನ್ನೋ ಸತ್ಯ ಹೊರಕ್ಕೆ ಬಂದಿತ್ತು. ಇದೀಗ ಸೂಪರ್ ಜೋಡಿಯಲ್ಲಿ ಸಹ ಸ್ಪರ್ಧಿಯಾಗಿದ್ದ ರಚನಾ ನನ್ನನ್ನು ಪ್ರೀತಿಸಲು ನಿರಾಕರಿಸಿದ್ಲು ಅನ್ನೋ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿ ಜನರ ಗಮನ ಸೆಳೆದಿದ್ದಾರೆ. ಮಾಧ್ಯಮಗಳೂ ಕೂಡ ದಿನಪೂರ್ತಿ ಕಾರ್‍ಯಕ್ರಮ ಮಾಡುತ್ತಿವೆ. ಆ ಕಾರ್‍ಯಕ್ರಮದಲ್ಲಿ ಆತನ ಕಾಮುಕ ತನದ ಬಗ್ಗೆ ಒಂದೊಂದೇ ಅಂಶ ಬೆಳಕಿಗೆ ಬರುತ್ತಿದೆ.
ರಿಷಿ ಕುಮಾರ ಸ್ವಾಮೀಜಿ ಮಗಳ ಜೊತೆ ಅಸಭ್ಯ ವರ್ತನೆ..!
ಖಾಸಗಿ ಸುದ್ದಿ ವಾಹಿನಿಯಲ್ಲಿ ರಚನಾ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದ ರಿಷಿ ಕುಮಾರ ಸ್ವಾಮೀಜಿ, ಈ ಸ್ಫೋಟಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸೂಪರ್ ಜೋಡಿಯಾಗಿದ್ದ ಭಾಗಿಯಾಗಿದ್ದಾಗ, ಇವರ ಮಗಳು ಬರ್ತ್ ಡೇ ಆಚರಣೆ ಮಾಡಲು ಸೆಟ್‌ಗೆ ಬಂದಿದ್ದಾಗ, ಇವರ ಮಗಳಿಗೆ ಗಾಳ ಹಾಕಲು ಹುಚ್ಚ ವೆಂಕಟ್ ಮುಂದಾಗಿದ್ದನಂತೆ.. ನನ್ನ ಮಗಳ ಮುಂದೆ ಬಂದು ಯಾರು ನೀನು ತುಂಬಾ ಚೆನ್ನಾಗಿದ್ದೀಯಾ, ಬೇರೆಯವರೆಲ್ಲಾ ನನಗೆ ಸಿಸ್ಟರ್ ಇದ್ದ ಹಾಗೆ ನೀನು ಮಾತ್ರ ನನಗೆ ಫ್ರೆಂಡ್. ಬಾ ನಿನ್ನ ಜೊತೆ ಮಾತನಾಡಬೇಕು ಅಂತ ಕರೆದಿದ್ದ ಅಂತಾ ಹೇಳಿದ್ದಾರೆ. ಹಾಗಿದ್ರೆ ಈತನಿಗೆ ಯುವತಿಯರು, ಮಹಿಳೆ ಮೇಲೆ ಗೌರವ ಇದೆಯೋ..? ಇಲ್ಲ ಪ್ರೀತಿ ಮಾಡಲು ಅವರನ್ನು ಓಲೈಕೆ ಮಾಡ್ತಾನೋ..? ಇಲ್ಲಾ ಈತನಿಗೆ ಒಂಟಿತನ ಗಾಢವಾಗಿ ಕಾಡುತ್ತಿರುವುದರಿಂದ ಯಾವುದಾದರೂ ಮಾನಸಿಕ ಕಾಯಿಲೆಗೆ ಒಳಗಾಗಿದ್ದಾನೋ.. ಅಥವಾ ಪ್ರಚಾರದ ಹುಚ್ಚಿಗಾಗಿ ಈ ರೀತಿ ಮಾಡುತ್ತಿದ್ದಾನೋ ಅನ್ನೋದನ್ನು ಮುಂದಿನ ದಿನಗಳಲ್ಲಿ ಪೊಲೀಸರು, ವೈದ್ಯರು ಪತ್ತೆ ಮಾಡಬೇಕಿದೆ.
ಜ್ಯೋತಿ ಎಂ ಗೌಡ
-Ad-

Leave Your Comments