ಹುಚ್ಚನಾದ ಡಾರ್ಲಿಂಗ್ ಕೃಷ್ಣ

ಕಿಚ್ಚ ಹುಚ್ಚ ಅಂತಾ ಫೇಮಸ್ ಆಗೋಕು ಮುಂಚೆ ನಟ ಸುದೀಪ್ ಅಷ್ಟೆ.. ಯಾವಾಗ ಹುಚ್ಚ ಸಿನಿಮಾ ರಿಲೀಸ್ ಆಯ್ತೋ‌ ಅಲ್ಲಿಂದ ನಟ ಸುದೀಪ್ ಸ್ಟಾರ್ ವ್ಯಾಲ್ಯೂ ಬದಲಾಗಿ ಹೋಯ್ತು. ಸಿನಿಮಾಗಾಗಿ ತನ್ನ ಕೂದಲನ್ನು ನಿಜವಾಗಿಯೇ ತೆಗೆಸಿಕೊಂಡ ನಟ ಸುದೀಪ್. ಯಾವುದೇ ಹಮ್ಮುಬಿಮ್ಮು ಇಲ್ಲದೆ ಅಭಿನಯಕ್ಕೆ ಬೆಲೆ ಕೊಟ್ಟ ಅಭಿನಯ ಚಕ್ರವರ್ತಿ. ಆದ್ರೆ ಮತ್ತೆ ಹುಚ್ಚ 2 ಸಿನಿಮಾ ನಿಮ್ಮನ್ನು ರಂಜಿಸಲು ಬರುತ್ತಿದೆ. ಆದ್ರೆ‌ ಈ ಬಾರಿ ಸುದೀಪ್ ತೆರೆ ಮೇಲೆ ಬರೋದಿಲ್ಲ ಬದಲಿಗೆ ಡಾರ್ಲಿಂಗ್ ಕೃಷ್ಟ ಹುಚ್ಚನಾಗಿ ಬರುತ್ತಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ಹುಚ್ಚ ಸಿನಿಮಾ ರಿಲೀಸ್ ಆಗಿ 17 ವರ್ಷ ತುಂಬಿದ ಬಳಿಕ ಹುಚ್ಚ 2 ಸಿನಿಮಾ ಬರುತ್ತಿದ್ದು, ಡಾರ್ಲಿಂಗ್ ಕೃಷ್ಣ ಹುಚ್ಚ 2 ನಲ್ಲಿ ಅಮೋಘವಾಗಿ ನಟಿಸಿದ್ದಾರೆ. ಹುಚ್ಚ 2 ಸಿನಿಮಾದ ಹಾಡುಗಳನ್ನ ಇತ್ತೀಚಿಗೆ ಕಿಚ್ಚ ಸುದೀಪ್ ರಿಲೀಸ್ ಕೂಡ ಮಾಡಿದ್ದಾರೆ.. ಅನೂಪ್ ಸೀಳಿನ್ ಚಿತ್ರದ ಹಾಡುಗಳಿಗೆ ಟ್ಯೂನ್ ಕಂಪೋಸ್ ಮಾಡಿದ್ದು ಸುದೀಪ್ ಹಾಗೂ ರಾಜ್ಯದ ಜನ ಹಾಡು ಮತ್ತು ಟ್ರೈಲರ್‌ಗಳ ಬಗ್ಗೆ ಮೆಚ್ಚಿಕೊಂಡಿದ್ದಾರೆ.. ಚಿತ್ರದಲ್ಲಿ ದೊಡ್ಡತಾರಾ ಬಳಗವೇ ಇದ್ದು ಹಿರಿಯ ನಟ ಅವಿನಾಶ್, ಡೈಲಾಗ್ ಕಿಂಗ್ ಸಾಯಿಕುಮಾರ್, ಸಾಧುಕೋಕಿಲಾ, ಶ್ರಾವ್ಯ, ಮಾಳವಿಕಾ ಅವಿನಾಶ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಸಿನಿಮಾ ಬಿಡುಗಡೆಗೆ ಕೆಲವು ದಿನಗಳು ಬೇಕಾಗಿದ್ದು, ಬಿಡುಗಡೆಗೂ ಮುನ್ನವೇ ಸದ್ದು ಮಾಡ್ತಿದೆ..

ಜ್ಯೋತಿ ಗೌಡ, ನಾಗಮಂಗಲ

-Ad-

Leave Your Comments