ಹುಚ್ಚ ವೆಂಕಟ್ ಸಿನಿ ಪ್ರೇಕ್ಷಕರಿಗೆ ಬೈಯ್ತಿರೋದು ಯಾಕೆ..?

 ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಜನರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದವರಲ್ಲಿ ಹುಚ್ಚ ವೆಂಕಟ್ ಕೂಡ ಒಬ್ರು. ಇವರು ಯಾವುದೋ ಸಾಧನೆ ಮಾಡಿ ಗಮನಸೆಳೆಯುವ ಗೋಜಿಗೆ ಹೋಗಲಿಲ್ಲ.. ಬದಲಿಗೆ ಕಂಡಕಂಡವರಿಗೆ ನನ್ ಎಕ್ಕಡಾ ,ನನ್ ಮಗಂದ್ ಅಂತ  ಯರ್ರಾಬಿರ್ರಿ ಬಯ್ಯುವ ಮೂಲಕ ತನ್ನದೇ ಆದ ಪ್ರೇಕ್ಷಕ ವಲಯನ್ನು ಸೃಷ್ಟಿ ಮಾಡ್ಕೊಂಡ್ರು.. ಅವ್ರ ಈ ಎರಡು ಡೈಲಾಗ್ ಗಳು ಭಾರೀ ಫೇಮಸ್ ಆಗಿ ಸಿನಿಮಾಗಳಲ್ಲೂ ಬಳಕೆ ಆದ್ವು.
ಕಳೆದ ಮೂರು ವರ್ಷಗಳ ಹಿಂದೆ ಹುಚ್ಚ ವೆಂಕಟ್ ಅದೇ ಹೆಸರಿನ ಸಿನಿಮಾ ರಿಲೀಸ್ ಮಾಡಿದ್ರು, ಆದ್ರೆ ಸಿನಿಮಾ ನೋಡಲು ಬರೀ ಮುವತ್ತು ಜನ ಬಂದಿದ್ರು. ಇದ್ರಿಂದ ರೊಚ್ಚಿಗೆದ್ದ ಹುಚ್ಚ ವೆಂಕಟ್ ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡುತ್ತ ಬಾಯಿಗೆ ಬಂದ ಹಾಗೆ ಬೈಯ್ಯುವ ಮೂಲಕ ದೊಡ್ಡ ಹಾಗೆ ಬೈದು ದೊಡ್ಡ ಸುದ್ದಿಯಾಗಿದ್ರು, ಜೊತೆಗೆ ಯೂಟ್ಯೂಬಲ್ಲಿ ಅತಿ ಹೆಚ್ಚು ಪ್ರೇಕ್ಷಕರ ಗಮನ ಸೆಳೆದ ಸ್ಟಾರ್ ಆದ್ರು.
ಆ ಬಳಿಕ ಹುಚ್ಚ ವೆಂಕಟ್ ಬಿಗ್ ಬಾಸ್ ಗೆ ಹೋಗಿದ್ದು, ಅಲ್ಲಿ ಗಲಾಟೆ ಮಾಡಿಕೊಂಡು ಮಧ್ಯದಲ್ಲೇ ಹೊರಬಂದಿದ್ದು, ಅಲ್ಲಿ ತನ್ನ ವಿಭಿನ್ನ ಮ್ಯಾನರಿಸಮ್ , ಭಾರೀ ಬೈಗುಳದಿಂದಲೇ ಕೇಂದ್ರ ಬಿಂದುವಾಗಿದ್ದು ಎಲ್ಲವೂ ಗೊತ್ತಿರೋ ವಿಚಾರ. ಕೊನೆಗೆ ಕಾರಣಾಂತರಗಳಿಂದ ಜೈಲಿಗೂ ಹೋಗಿ ಬಂದ್ರು . ಈ ಮದ್ಯೆ ಯೋಗರಾಜ್ ಭಟ್ರ ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ ಹಾಡಿಗೆ ದನಿಯಾಗಿ ಅನೇಕರ ಮೆಚ್ಚುಗೆಗೂ ಪಾತ್ರರಾದ್ರು. ಇದೀಗ ಹುಚ್ಚ ವೆಂಕಟ್ ಮತ್ತೆ ಸುದ್ದಿಯಾಗಿದ್ದಾರೆ.
ಬಾಹುಬಲಿ ಎದುರು ಬಿಡುಗಡೆಯಾಗಲು ಅದೆಷ್ಟೊ ದೊಡ್ಡ ದೊಡ್ಡ ಸಿನಿಮಾಗಳೇ ಹಿಂಜರಿದ್ವು.. ಆದ್ರೆ ಹುಚ್ಚ ವೆಂಕಟ್ ತಾನು ನಟಿಸಿ ,ನಿರ್ಮಿಸಿರುವ ಪೊರ್ಕಿ ಹುಚ್ಚ ವೆಂಕಟ್ ಸಿನಿಮಾವನ್ನು ಬಿಡುಗಡೆ ಮಾಡಿ ಸವಾಲ್ ಹಾಕಿದ್ದಾರೆ. ಮತ್ತದೇ ಹಳೇ ಹುಚ್ಚಿನ ರೀತಿ ಜನ ಥಿಯೇಟರ್ ಗೆ ಬಂದು ಹುಚ್ಚ ವೆಂಕಟ್ ಸಿನಿಮಾವನ್ನು ನೋಡಿಲ್ಲ. ಇದ್ರಿಂದ ಹುಚ್ಚ ವೆಂಕಟ್ ಮತ್ತೆ ಕುಪಿತಗೊಂಡಿದ್ದು ಕನ್ನಡಿಗರನ್ನು ಬೇಜಾನ್ ಬೈದಿದ್ದಾರೆ. ಆ ವೀಡಿಯೋ ಕೂಡ ಯೂಟ್ಯೂಬಲ್ಲಿ ಸಾವಿರಾರು ಜನರು ನೋಡಿ ಎಂಜಾಯ್ ಮಾಡಿದ್ದಾರೆ..
ಬಾಹುಬಲಿ ವಿರೋಧಿಸುವರು ನೋಡಿದ್ದರೂ ಹುಚ್ಚ ದಿಲ್ ಖುಷ್
\
ಹೌದು ಬಾಹುಬಲಿ ಸಿನಿಮಾ ಬಿಡುಗಡೆಯಾದ ಬಳಿಕ ಬಾಹುಬಲಿ ಸಿನಿಮಾವನ್ನು ಕೆಲವೊಂದಿಷ್ಟು ಕನ್ನಡಿಗರು ವಿರೋಧ  ಮಾಡಿದ್ರು.. ಆ ಬಾಹುಬಲಿ ಸಿನಿಮಾ ನೋಡುವವರು ಕನ್ನಡಿಗರೇ ಅಲ್ಲ,ನಾಚಿಕೆ ಆಗ್ಬೇಕು ಅಂತೆಲ್ಲಾ ವೀಡಿಯೋ ಮಾಡಿ, ವಾಟ್ಸಪ್ ಫೇಸ್ ಬುಕ್ ನಲ್ಲಿ ಹಾಕಿಕೊಂಡು ಲೈಕ್ ಕಾಮೆಂಟ್ ಪಡಕೊಂಡ್ರು. ಅವರಾದರೂ ಹುಚ್ಚ ವೆಂಕಟ್ ಅಭಿನಯದ ಪೊರ್ಕಿ ಹುಚ್ಚ ವೆಂಕಟ್ ಸಿನಿಮಾ ನೋಡಿ ಬೆಂಬಲಿಸಿಲ್ಲ.. ಆದ್ರೆ ಹಲವು ಕನ್ನಡಿಗರು ಮಾತಿನಲ್ಲಿ ಮಾತ್ರ ವಿರೋಧ ಮಾಡಿ ಆಮೇಲೆ ಥಿಯೇಟರ್ ಗೆ ಹೋಗಿ ಬಾಹುಬಲಿ  ನೋಡ್ತಿದ್ದಾರೆ.. ಅದಕ್ಕಾಗಿಯೇ ಬಾಹುಬಲಿ ಎದುರು ತಾಕತ್ತು ಪ್ರದರ್ಶನ ಮಾಡಿದ ಹುಚ್ಚವೆಂಕಟ್ ಸಿನಿಮಾಗೆ ಸೋಲಾಗಿದೆ.. ಇದರಿಂದ ಆವೇಶಭರಿತವಾಗಿ ಮಾತನಾಡಿರುವ ವೀಡಿಯೋವನ್ನು ನೋಡಿರುವ ಜನ ಅದರ ಬದಲು  ಸಿನಿಮಾ ನೋಡಿದ್ರೆ ವೆಂಕಟ್ ಗೆ  ಸಮಾಧಾನ ಆಗ್ತಿತ್ತು ಅನ್ಸುತ್ತೆ..
ಇವತ್ತು ciniadda.com  ಜೊತೆ ಅಂದ್ರೆ ನಿಮ್ಮೆಲ್ಲರ ಮಾತನಾಡ್ತೀನಿ ಲೈವ್ ನಲ್ಲಿ ಅಂತ  ಹುಚ್ಚ ವೆಂಕಟ್ ಹೇಳಿದ್ದಾರೆ. ಸಿನಿ ಪ್ರೇಕ್ಷಕರನ್ನ ಹಾಗೆ ಬೈಯ್ಯುವುದು ಎಷ್ಟು ಸರಿ ? ಅವರ ಸಿನಿಮಾ ಯಾಕೆ ನೋಡಬೇಕು ? ಇನ್ನು ಏನೇನು ಪ್ರಶ್ನೆಗಳು ಇವೆಯೋ ನೀವೂ ಕೂಡ ಕೇಳಬಹುದು ಕಾಮೆಂಟ್ ಮೂಲಕ .    ನೀವು ಕೂಡ ಭಾಗಿಯಾಗಬಹುದು.     ಫೇಸ್ ಬುಕ್ ಪೇಜ್  https://www.facebook.com/ciniadda1/ ಫಾಲೋ ಮಾಡ್ತಿರಿ..
-Ad-

Leave Your Comments