ಪ್ರೀತಿಯ ಹುಚ್ಚಿಗೆ ಹುಚ್ಚ ವೆಂಕಟ್ ಬಲಿಯಾಗುತ್ತಿದ್ದಾರಾ ?

ಹುಚ್ಚ ವೆಂಕಟ್ ಪ್ರೀತಿಯ ಸುಳಿಗೆ  ಸಿಕ್ಕು ಸುಕ್ಕು ಮಾಡಿಕೊಂಡಿದ್ದಾರೆ. ಒನ್ ಸೈಡೆಡ್ ಲವ್ ಸ್ಟೋರಿ ಕಥೆ ಯಾವಾಗಲೂ ಇಷ್ಟೇ . ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ಜೊತೆಯಾಗಿದ್ದ ಯುವತಿಯ ಮೇಲೆ ಹುಚ್ಚ ವೆಂಕಟ್ ಗೆ ಪ್ರೇಮವಾಗಿದೆ. ತನಗನ್ನಿಸಿದ್ದೇ ಸರಿ ಅದನ್ನು ಎಲ್ಲರೂ ಒಪ್ಪಬೇಕು ಅಂತ ಹಠಕ್ಕೆ ಬಿದ್ದು ರಿಚ್ಛೆ ಹಿಡಿದಂತಾಡುವ ವೆಂಕಟ್ ಯುವತಿ ತನ್ನ ಪ್ರೀತಿಯನ್ನು ನಿರಾಕರಿಸಿದಾಗ ಹತಾಶೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಾಧ್ಯಮಗಳಿಗೆ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಅರ್ಥದಲ್ಲಿ ಸಂದೇಶ ಕಳುಹಿಸಿದ್ದಾರೆ.

ನಡೆದಿದ್ದೇನು ?

ತನ್ನ ತಂದೆಯ ಜೊತೆಯಲ್ಲಿ ತೋಟದ ಮನೆಗೆ  ಹೋಗಿದ್ದ ಹುಚ್ಚ ವೆಂಕಟ್ ಅಲ್ಲಿಯೇ ಫಿನಾಯಿಲ್ ಸೇವಿಸಿದ್ದಾರೆ. ವಿಷಯ ಗೊತ್ತಾದ ತಕ್ಷಣ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.ತದನಂತರ ಆಸ್ಪತ್ರೆಯಿಂದ ಹೊರಬಂದ ಹುಚ್ಚ ವೆಂಕಟ್  ಡಾಕ್ಟರ್  ನನ್ನನ್ನ ಏನೇನೋ ಪ್ರಶ್ನೆ ಕೇಳ್ತಿದಾರೆ  ಎಷ್ಟು ಕುಡಿದೆ ಅಂತೆಲ್ಲ ವೀಪರೀತ ಪ್ರಶ್ನೆಗಳನ್ನ ಒಬ್ಬ ಪೇಷಂಟ್ ಹತ್ತಿರ ಕೇಳಬಹುದಾ .ನನಗೆ ಹೊಟ್ಟೆ ತುಂಬಾ ಉರಿತಾ ಇದೆ. ಫಿನಾಯಿಲ್ ಕುಡಿದು ಬಿಟ್ಟಿದೀನಿ ಕಣೋ ಅಂತ ಮಾಧ್ಯಮದವರ ಬಳಿ ಅಳಲು ತೋಡಿಕೊಂಡಿದ್ದಾರೆ.

ಪೊರಕಿ ಹುಚ್ಚ ವೆಂಕಟ್ ಸಿನಿಮಾ ತೆರೆಕಂಡ ಸಂದರ್ಭದಲ್ಲಿ  ತನ್ನ ಸಿನಿಮಾ ನೋಡಲು ಬಾರದ ಕನ್ನಡಿಗರನ್ನು ಎಗ್ಗಾಮುಗ್ಗ ಉಗಿದಿದ್ದ ಹುಚ್ಚ ವೆಂಕಟ್ ciniadda.com  ಜೊತೆ ಲೈವ್ ನಲ್ಲಿ ಮಾತಾಡುತ್ತಾ ಕನ್ನಡಿಗರ ಕ್ಷಮೆ ಯಾಚಿಸಿದ್ದರು. ಘಂಟೆಗಟ್ಟಲೆ ಕಣ್ಣೀರ ಕೋಡಿ ಹರಿಸಿದ್ದರು.

ಅದು ಎಲ್ಲಾ ಕಡೆ ವೈರಲ್ ಕೂಡ ಆಗಿತ್ತು. ಈಗ ಮತ್ತೆ ಅತಿ ಭಾವುಕತೆಗೆ ಒಳಗಾಗಿರುವಂತೆ ಕಾಣುತ್ತಿದೆ. ಎಲ್ಲಾ ಚೆನ್ನಾಗಿರುವಂಥವರಿಗೇ  ಪ್ರೀತಿ ದಕ್ಕದಿದ್ದಾಗ ಆಗುವ ಆಘಾತ ಅಷ್ಟಿಷ್ಟಲ್ಲ. ಅಂಥದ್ದರಲ್ಲಿ ಭಾವನೆಗಳ ಬ್ಯಾಲೆನ್ಸ್ ಗೊತ್ತಿಲ್ಲದ ಹುಚ್ಚ ವೆಂಕಟ್ ಮನಃಸ್ಥಿತಿ ಇನ್ನೂ ಹದಗೆಟ್ಟಿರುವ ಸಾಧ್ಯತೆ ಇದೆ.

-Ad-

Leave Your Comments