ನಟಿಯ ಜೊತೆ ಶಾಸಕನ ಪ್ರೇಮಾಯಣ !

  ಈತ ಪ್ರಭಾವಿ ಶಾಸಕ. ಅಂದಮೇಲೆ ಶೋಕಿಗೆ ಬರ ಬೀಳೋದು ಸಾಧ್ಯವೇ ? ಮೂವತ್ತು ಮೀರಿದ ಬಾರುಗಳು, ವೈನ್ ಶಾಪ್ ಜೊತೆಗೆ ಅಪ್ಪನ ಆಸ್ತಿಯೂ ಸೇರಿದ ಮೇಲೆ ಶ್ರೀಮಂತಿಕೆಯ ಹಾರಾಟ ಕೇಳಬೇಕೆ.  ಸುಪ್ಪತ್ತಿಗೆಯಲ್ಲಿ ಹೊರಳಾಡಲು ಒಬ್ಬಳೇ ಹೆಂಡತಿ ಸಾಲದೇ ಊರಿಗೆ ಬಂದ ನಟೀ ಮಣಿಯನ್ನು ಪಟಾಯಿಸಿಕೊಂಡು ಎರಡು ಮಕ್ಕಳನ್ನೂ ಕರುಣಿಸಿದ್ದಾರೆ. ಇಷ್ಟೇ ಆಗಿದ್ದರೆ ಅವರ ಹಣೆಬರಹ ಅಂತ ಸುಮ್ಮನಿರಬಹುದಿತ್ತು. ಆದ್ರೆ ತಮ್ಮಂದಿರಿಗೆ ಸೇರಬೇಕಾದ ಆಸ್ತಿಯನ್ನು ನಟೀ ಮಣಿಯ ಹೆಸರಿಗೆ ಬರೆದು ಸಹೋದರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಅನ್ನೋದು ಈಗ ಸುದ್ದಿ.
ಇವರ್ಯಾರು ಗೊತ್ತೇ ?
ಕೊಪ್ಪಳದ  ಗಂಗಾವತಿಯ  ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ತಮ್ಮೂರಿಗೆ ಹೊಟ್ಟೆಯ ಪಾಡಿಗಾಗಿ ನಾಟಕ ಆಡಲು ಬಂದ ನಟಿ ಪಂಚಮಿಯನ್ನು ಪಟಾಯ್ಸಿ ಸಂಸಾರ ಹೂಡೇಬಿಟ್ಟಿದ್ದಾರೆ. ಕಳೆದ ಬಾರಿಯ ಚುನಾವಣೆ ವೇಳೆಯಲ್ಲೇ ಗಂಡನ ಚೆಲ್ಲಾಟ ಗೊತ್ತಾಗಿ  ಪ್ರಚಾರಕ್ಕೆ ಬಂದಿದ್ದ ನಟಿ ಪಂಚಮಿಗೆ ಮನೆಯಲ್ಲೇ ಗೂಸಾ ಕೊಟ್ಟಿದ್ದಾರೆ ಅನ್ಸಾರಿ ಪತ್ನಿ ತಬಸುಮಾ. ಯಾವುದಕ್ಕೂ ಜಗ್ಗದ ಅನ್ಸಾರಿ ಪಂಚಮಿ ಜೊತೆ ಪಲ್ಲಂಗ ಏರಿದ್ದಾರೆ.
ಅಂದಹಾಗೆ ಪಂಚಮಿ ಗುಬ್ಬಿ ವೀರಣ್ಣ ಕುಟುಂಬಕ್ಕೆ ಸೇರಿದವರು. ಸಿನಿಮಾ ಧಾರಾವಾಹಿಗಳಲ್ಲಿ ಮಿಂಚಿದವರು. ಇಂಥ ಚೆಲುವೆ ಸಿಕ್ಕಿದ ಮೇಲೆ ಸಹೋದರರು ನೆನಪಿಗೆ ಹೇಗೆ ತಾನೇ ಬಂದಾರು?  ಬಳ್ಳಾರಿಯಲ್ಲಿ ಪಂಚಮಿಗೆ ಮನೆ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ತಮ್ಮಂದಿರಿಗೆ ದಕ್ಕಬೇಕಾದ ಆಸ್ತಿಯನ್ನು ಅನಾಮತ್ತು ಪಂಚಮಿ ಹೆಸರಿಗೆ ಧಾರೆ ಎರೆದುಕೊಟ್ಟಿದ್ದಾರೆ.
ಯಾವಾಗ ತಮಗೆ ಸೇರಬೇಕಾದ ಆಸ್ತಿಯನ್ನು ಎರಡನೇ ಹೆಂಡತಿಗೆ ಅನ್ಸಾರಿ ಬರೆದು ಬೆಚ್ಚಗಾಗೋಕೆ ನೋಡಿದ್ರೋ ಅಲ್ಲಿಗೆ ಸಹೋದರರ ಸಿಟ್ಟು ತಾರಕಕ್ಕೆ ಏರಿದೆ. ಸಿಡಿದೆದ್ದಿರುವ ಸಹೋದರರಿಂದ ನಟೀಮಣಿಯ ಜೊತೆಗಿನ  ಅನ್ಸಾರಿಯ ಕಾಮಕಾಂಡವೂ ಬಯಲಾಗಿದೆ. ಮುಂದೇನಾಗುತ್ತೋ ಕಾದು ನೋಡಬೇಕು.
-Ad-

Leave Your Comments