ಮೋದಿ ಬಾಣಕ್ಕೆ ಚಿತ್ರರಂಗ ಕ್ಲೀನ್ ?

೫೦೦-೧೦೦೦ ನೋಟಿನ ಚಲಾವಣೆ ನಿಂತು ಉಳ್ಳವರ -ಇಲ್ಲದವರ ಬದುಕು ಏರುಪೇರಾದಂತೆ ಕಾಣುತ್ತಿದೆ . ಇಂಥಾ ಹೊತ್ತಿನಲ್ಲಿ ಚಿತ್ರರಂಗದ ಸ್ಥಿತಿ ಹೇಗಿದೆ ? ಮುಂದೇನಾಗಬಹುದು ?  ಅನುಭವಸ್ಥರ ವಿಶ್ಲೇಷಣೆ ಇಲ್ಲಿದೆ.

ಸದ್ಯದ ಸ್ಥಿತಿ

rajendra-sing-baabu
ರಾಜೇಂದ್ರ ಸಿಂಗ್ ಬಾಬು-ಅಧ್ಯಕ್ಷರು ಕರ್ನಾಟಕ ಚಲನಚಿತ್ರ ಅಕಾಡೆಮಿ

ಶೂಟಿಂಗ್ ನಡೀತಿರೋ ಕಡೆಗಳಲ್ಲಿ ಪ್ರತಿದಿನ 5-6 ಲಕ್ಷದವರೆಗೆ ಕ್ಯಾಶ್ ಬೇಕೇಬೇಕು. ಪೆಟ್ರೋಲ್, ಊಟ, ಕಾಸ್ಟ್ಯೂಮ್ಸ್ , ದಿನದ ಸಂಬಳ ಹೀಗೆ ಕೈನಲ್ಲಿ ಹಣವಿಲ್ಲದೆ ಸುತರಾಂ ಕೆಲಸ ನೆಡೆಯುವುದಿಲ್ಲ. ಇಲ್ಲಿ ಯಾರೂ ಚೆಕ್ ತೆಗೆದುಕೊಳ್ಳೋದಿಲ್ಲ . ಹಲವರಿಗೆ ಬ್ಯಾಂಕ್ ಅಕೌಂಟ್ ಇಲ್ಲ. ಈಗಾಗ್ಲೇ ಸೂಟಿಂಗ್ನಲ್ಲಿ ಇರೋವಂಥವರು ಬಹಳ ಕಷ್ಟ ಅನುಭವಿಸುವಂತಾಗಿದೆ. ಒಂದು ಫಿಲಂ ರಿಲೀಸ್ ಕೂಡ ನಿಂತು ಹೋಗಿದೆ. ಮೊದಲಿಂದಾನು ಚಿತ್ರರಂಗದಲ್ಲಿ ವೈಟ್ ಗಿಂತ  ಬ್ಲಾಕ್ ಮನಿ ಚಲಾವಣೆ ಹೆಚ್ಚು.  ಬ್ಯಾಂಕ್ ಗಳು ನಮಗೆ ಸಾಲ ಕೊಡುವುದಿಲ್ಲ. ಲೇವಾದೇವಿಗಾರರ ಬಳಿಯೇ ಹೋಗ್ಬೇಕು . ನಮ್ಮ ಚಿತ್ರದ  ರೈಟ್ಸ್ ಇರೋ ಒಂದೇ ಒಂದು ಲೆಟರ್ ಗೆ ಲಕ್ಷಾಂತರ ರೂಪಾಯಿ ಸಾಲ ಕೊಡ್ತಾರೆ. ಅದೂ ಕೇವಲ ನಂಬಿಕೆಯ ಮೇಲೆ. ಈಗ ಅವರದ್ದೆಲ್ಲ ಏನು ಕಥೆ ? ಫಿಲಂ ರಿಲೀಸ್ ಮಾಡೋದಿಕ್ಕೆ ಮುಂಚೆ ಅವ್ರಿಗೆ ಹಣ ವಾಪಸ್ ಕೊಡ್ಬೇಕಾದ್ರೆ ಕ್ಯಾಶ್ ನಲ್ಲೆ ಕೊಡ್ಬೇಕು . ವೈಟ್ ನಲ್ಲಿ ಅಂದ್ರೆ ಚೆಕ್ ಕೊಡೋಕ್ಕಾಗಲ್ಲ. ಅಂಥಾ ಸಮಯದಲ್ಲಿ ಎಲ್ಲಿಂದ ಬಂತು ಇಷ್ಟು ಹಣ ? ಪ್ರಶ್ನೆಗೆ ಉತ್ತರಿಸು ವವರು ಯಾರು ? ರಿಲೀಸ್ ಗೆ ತೊಂದರೆ ಆಗಬಹುದು. ಪ್ರಚಾರಕ್ಕೆ ಹಣದ ಕೊರತೆ ಆಗುವುದು ಖಂಡಿತ. ಬರ ಮತ್ತೆ ಬಂದಿರೋದ್ರಿಂದ ನಾವೀಗ ಸ್ವಲ್ಪ ಮಟ್ಟಿಗೆ ತಯಾರಾಗಿದ್ದೇವೆ. ಆದ್ರೆ ಈಗ ಈ ನೋಟ್ ಬ್ಯಾನ್ ಯಾವ ಮುನ್ಸೂಚನೆ ಇಲ್ಲದೆ ಬಂದಿದೆ. ದಿಕ್ಕುಗಾಣದೆ ಪರದಾಡುವಂತಾಗಿದೆ.

ಇದು ಸುಳ್ಳಿನ ಸಂತೆ

cinima-imageಚಿತ್ರರಂಗದಲ್ಲಿ ಸುಳ್ಳಿಗರೇ ತುಂಬಿ ಹೋಗಿದ್ದಾರೆ. ಸತ್ಯವಂತರ ಸಂಖ್ಯೆ  ಕಡಿಮೆ.ನಮ್ಮ ನಿರ್ಮಾಪಕರು, ಡಿಸ್ಟ್ರಿಬ್ಯುಟರ್ಗಳು ಸುಳ್ಳಿ ಹೇಳಿ.. ಹೇಳಿ.. ಇಂಡಸ್ಟ್ರಿ ಹಾಳಾಗಿದೆ. ಒಂದು ಕೋಟಿ ಖಚಾಗಿದ್ರೆ 5 ಕೋಟಿ ಆಗಿದೆ ಅಂತ ಕಥೆ ಹಬ್ಬಿಸಿ ಬಿಡ್ತಾರೆ. ಇನ್ನು ದೊಡ್ಡ ದೊಡ್ಡ ಪತ್ರಿಕೆಗಳು (ಹೆಸರು ಬೇಡ ಜನರಿಗೆ ಗೊತ್ತಿದೆ ) ವಾಹಿನಿಗಳು 2 ಲಕ್ಷ ಕೊಡಿ ನಿಮ್ಮ ಸಿನಿಮಾ ಪ್ರಮೋಟ್ ಮಾಡ್ತೀವಿ ಅಂತಾರೆ. ಸಿನಿಮಾ ಸುದ್ದಿಗಳು ಪೈಡ್ ನ್ಯೂಸ್ಗಳಾಗಿವೆ. ದುಡ್ಡು ತೆಗೆದುಕೊಂಡು ಚೆನ್ನಾಗಿಲ್ಲದ್ದನ್ನು ಚೆನ್ನಾಗಿದೆ ಅಂತ ಸುದ್ದಿ ಮಾಡ್ತಾ ಇದ್ದಾರೆ. ಜನರಿಗೆ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಟೀವಿಯವರಂತು ೩-೪ ಲಕ್ಷ ಕೊಟ್ಟರೆ ಕೆಟ್ಟ ಸಿನಿಮಾವನ್ನೂ ಸಕ್ಕತ್ ಸಿನಿಮಾ ಅಂತ ಬಿಂಬಿಸಿ ೧೦೦ ದಿನ ಗ್ಯಾರಂಟಿ  ಜನ ಹೇಳ್ತಿದ್ದಾರೆ ಅಂತ  ಕ್ಲಿಪಿಂಗ್ ಹಾಕಿ ಬಿಡ್ತಾರೆ . ಆಮೇಲೆ ನೋಡಿದರೆ ಸಿನಿಮಾ ಒಂದು ದಿನವೂ ಓಡಿರಲ್ಲ.ಯಾಕೆ ಓಡಿಲ್ಲ ಅನ್ನೋ ರಿವ್ಯೂ ಇಲ್ಲವೇ ಇಲ್ಲ. ಮೊದಲ ದಿನವೇ 8 ಕೋಟಿ ಕಲೆಕ್ಷನ್ ಕೂಗಿ ತೋರಿಸಿಬಿಟ್ಟರೆ ಮುಗೀತು. ಇದನ್ನು ನಂಬಿದ ಎಷ್ಟೋ ಅಮಾಯಕರು  ಒಂದೇ ದಿನದಲ್ಲಿ ಅಷ್ಟು ಹಣ ಬರುತ್ತೆ ಅನ್ನೋ ಆಸೆಯಲ್ಲಿ ಸಿನಿಮಾಕ್ಕೆ ಬಂದು ಕೈ ಸುಟ್ಟುಕೊಂಡಿದ್ದಾರೆ. ಇರುವ 150 ಚಿತ್ರಮಂದಿರದಲ್ಲಿ ಒಂದು ದಿನಕ್ಕೆ ೪ ಕೋಟಿ ಸಂಪಾದನೆ ಹೇಗೆ ಸಾಧ್ಯ? ಯಾವ ಥಿಯೇಟರ್ ನಲ್ಲೂ ಹಂಡ್ರೆಡ್ ಪರ್ಸೆಂಟ್ ಕಲೆಕ್ಷನ್ ಬರುವುದಿಲ್ಲ. ಬರ್ತಿರೋದು 60 ರಷ್ಟು ಮಾತ್ತ್ರ. ಇಂಥಾ ಸುಳ್ಳುಗಳಿಗೆ ಕಡಿವಾಣ ಬೀಳಬಹುದು . ಅಥವಾ ಈಗಿರುವುದನ್ನು ಮೀರಿಸುವ ದಾರಿ ಕಂಡುಹಿಡಿದರೂ ಆಶ್ಚರ್ಯವಿಲ್ಲ.

ಹೀರೋಗಳ ಸಂಭಾವನೆ

yash-2890sudeeppuneethdarshanಎಲ್ಲ ವೈಟ್ ನಲ್ಲೆ ತೆಗೆದುಕೊಳ್ಳಬೇಕಾಗುತ್ತೆ. ಬಾಂಬೆಯ ಗೆಳೆಯರು ರೆವಿನ್ಯೂ ಶೇರಿಂಗ್ ಗೆ ಹೋಗೋ ಯೋಚನೆಯಲ್ಲಿದ್ದಾರೆ. ಸೋಲಲಿ ಗೆಲ್ಲಲಿ ನಮ್ಮ ಸಂಭಾವನೆ ನಮಗೆ ಕೊಡಿ ಇತ್ತಲ್ಲ ಅದು ಹೋಗಿ ಸೋಲು ಗೆಲುವು ಎರಡನ್ನು ಹಂಚಿಕೊಳ್ಳುವ  ವ್ಯವಸ್ಥೆ ಬರಬಹುದು. ನಿರ್ಮಾಪಕ ಇದ್ದರೇನೇ ಉಳಿದವರಿಗೆ ಕೆಲಸ ತಾನೇ?  ಎಷ್ಟೇ ಪ್ರತಿಭಾವಂತರಾಗಿದ್ದರು ಹಣ ಹೂಡುವವರು ಬೇಕಲ್ಲ . ಅಂಥವರ ಕೈಕಟ್ಟಿದಾಗ ಹೀರೋಗಳು ರೆವೆನ್ಯೂ ಶೇರಿಂಗ್ ಮಾಡಲೇ ಬೇಕಾಗುತ್ತದೆ.

ಟೋಟಲ್ ಇಂಪ್ಯಾಕ್ಟ್

ಹಣಕಾಸಿನ ವ್ಯವಹಾರದಲ್ಲಿ ಶಿಸ್ತು ಬರುವ ಸಾಧ್ಯತೆ ಇದೆ. ಸಿನಿಮಾ ಬಗ್ಗೆ ಏನೇನು ಗೊತ್ತಿಲ್ಲದ ವಿಶೇಷವಾಗಿ ರಾಜಕಾರಣಿಗಳ ಸಂಖ್ಯೆ ಕಡಿಮೆಯಾಗಬಹುದು. ವೃತ್ತಿಪರ ನಿರ್ಮಾಪಕರು ಉಳಿಯುವ ಸಾಧ್ಯತೆ ಹೆಚ್ಚು.

ಎಲ್ಲಾ ಮೊದಲಿನಂತೆಯೇ..

1483260_10204512873701188_2137668540581119806_n3
ಸತ್ಯಮೂರ್ತಿ ಆನಂದೂರು -ಹಿರಿಯ ಪತ್ರಕರ್ತ

ಎಂಭತ್ತರ ದಶಕದಲ್ಲಿ ಸಿನಿಮಾ ಮಾಡಲಿಕ್ಕೆ ಅಂತಾನೆ ಮೂಟೆಯಲ್ಲಿ ದುಡ್ಡು ತುಂಬಿಕೊಂಡು ಬರ್ತಾ ಇದ್ದರಂತೆ. ನಾವು ಕೇಳಿದ ಹಾಗೆ  ಬಳ್ಳಾರಿ ಕಡೆಯಿಂದ ಬರ್ತಾ ಇದ್ದವರಿಗೆ ದುಡ್ಡು ಹಾಕಿ ದುಡ್ಡು ತೆಗೆಯೋದು ಬೇಕಿತ್ತು ಅಷ್ಟೆ.  ನಾನು ಲಂಕೇಶ್ ಪತ್ರಿಕೆಯಲ್ಲಿ ಇದ್ದಾಗ ಮೂಟೆಯಲ್ಲಿ ಹಣ ತಂದವರ ಬಗ್ಗೆನೂ ಬರೆದಿದ್ವಿ. ಈಗಲೂ ಕಪ್ಪು ಹಣ ಬಿಳಿ ಮಾಡಿಕೊಳ್ಳಲಿಕ್ಕೆ ಅಂತಾನೆ ಸಿನಿಮಾ ಮಾಡುವವರ ಸಂಖ್ಯೆನೇ ಹೆಚ್ಚು. ಈ ಬ್ಯಾನ್ ಹೆಚ್ಚು ಅಂದ್ರೆ ಮೂರ್ನಾಲ್ಕು ತಿಂಗಳ ಕಾಲ ತೊಂದರೆ ಕೊಡಬಹುದು. ನಂತರ ಎಲ್ಲವು ಯಥಾಪ್ರಕಾರ ನಡೆಯಲಿದೆ. ಸಿನಿಮಾದಲ್ಲಿ ಸುಳ್ಳು ಲೆಕ್ಕ ಹೇಳೋದು ಸುಲಭ. ಲೊಕೇಷನ್ನು ,ಊಟ , ಶೂಟಿಂಗ್ ಮಾಡಿದ ದಿನಗಳು ಇನ್ನಿತರ ಖರ್ಚು -ವೆಚ್ಚ ಆರಾಮವಾಗಿ ಒಂದಕ್ಕೆ ಎರಡೇನು ನಾಲ್ಕೇ ಹೇಳಬಹುದು. ಮೊದಲು ಮಾಡಿದ್ದು ಸರಿಯಿಲ್ಲ ಮತ್ತೆ ರೀಶೂಟ್ ಮಾಡಿದ್ವಿ  ಅನ್ನಬಹುದು. ಕೆಲಸಗಾರರ ಸಂಖ್ಯೆಯಲ್ಲಿ ಬೇಕಾದಷ್ಟು ಏರುಪೇರು ಮಾಡಬಹುದು. ಹಾಗಾಗಿ ನನ್ನ ಇಷ್ಟು ವರುಷದ ಅನುಭವದ ಪ್ರಕಾರ ಹೇಳುವುದಾದರೆ ಯಾವ ಮಹತ್ತರ ಬದಲಾವಣೆಯೂ ಆಗುವುದಿಲ್ಲ. ೩-೪ ತಿಂಗಳಲ್ಲಿ ಮತ್ತೆ ಹಣದ ಹರಿವು ಬರುವುದರಲ್ಲಿ ಸಂಶಯವಿಲ್ಲ. ಹಲವು ದಾರಿಗಳಲ್ಲಿ  ಹಣ ಮಾಡಿದವರಿಗೆ ಅದನ್ನು ಉಳಿಸಿಕೊಳ್ಳುವ ಒಳದಾರಿಗಳು ಗೊತ್ತಿರುತ್ತವೆ.

ನಿರೂಪಣೆ-ಭಾನುಮತಿ  ಬಿ ಸಿ

 

-Ad-

Leave Your Comments