ಇರು ಮುಗನ್ .. ಬರುವನು

‘The way it’s never been done’ – ಹಿಂದೆ ಮಾಡಿರಬಾರದು ಮುಂದೆಯೂ ಮಾಡಲಾಗದು .. ಎನ್ನುವ ಮಾತನ್ನೇ ಧ್ಯೇಯವಾಗಿಟ್ಟುಕೊಂಡು ಬಣ್ಣ ಹಚ್ಚಿಕೊಳ್ಳುವ ಅಪರೂಪದ ನಟ ಚಿಯಾನ್ ವಿಕ್ರಮ್.

ತನ್ನ 35ನೆ ವಯಸ್ಸಿನಲ್ಲಿ ಮೊದಲ ಬಾರಿಗೆ ‘ಸೇತು’ ಚಿತ್ರದ ಮೂಲಕ ಭಾರತದ ಚಿತ್ರರಸಿಕರನ್ನು ಬೆಚ್ಚಿ ಬೀಳಿಸಿದ ಈ ಮಹಾನ ನಟ, ನಂತರದ ದಿನಗಳಲ್ಲಿ ದೈವ ತಿರುಮಗಳ್, ಪಿತಾಮಗನ್, ಅನಿಯನ್ .. ಹೀಗೆ ಸಿಂಹ ನಡಿಗೆಯಂತೆ ಒಂದೊಂದೇ ಹೆಜ್ಜೆಯನ್ನು ಗಂಭಿರವಾಗಿ ಇಡುತ್ತಾ .. ಕಮಲ್, ರಜನಿ ಅವರಂಥಾ ಮೇರು ನಟರಿಗೆ ಪರ್ಯಾಯವಾಗಿ ಬೆಳೆಯುತ್ತಾ ಬಂದಿದ್ದಾರೆ.

13380966_282928942055940_1625902552_n

ಇತ್ತೀಚಿಗೆ 50ನೇ ವರ್ಷ ಕಂಡ ಈ ಚಿರಯುವಕ, ಚಿತ್ರರಂಗಕ್ಕೆ ತನ್ನ ಮತ್ತೆರಡು ಮುಖಗಳನ್ನು ತೋರಿಸಲು ಬರುತ್ತಿದ್ದಾನೆ.

ಚಿಯಾನ್ ‘ವಿಕ್ರಂ’ರ ಲೇಟೆಸ್ಟ್ ಅವತಾರ ‘ಇರು ಮುಗನ್‘(ಎರಡು ಮುಖ). ‘ಅರಿಮಾ ನಂಬಿ’ ಚಿತ್ರ ಖ್ಯಾತಿಯ ಯುವ ನಿರ್ದೇಶಕ ಆನಂದ್ ಶಂಕರ್ ನಿರ್ದೇಶನದ ಈ ತಮಿಳು ಚಿತ್ರವು ಫಸ್ಟ್ ಲುಕ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಇರು ಮಗನ್ ‘ವಿಕ್ರಂ’ರ ಮತ್ತೊಂದು ಅನ್ನಿಯನ್ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

11

ಮಿಸ್ಟರಿ ಥ್ರಿಲ್ಲರ್ ಕಥೆಯ ಇರು ಮುಗನ್ ಚಿತ್ರದ ಟ್ರೈಲರ್’ನ್ನು ಈಗಾಗಲೇ 30ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಚಿತ್ರದ ಕಥೆಯು ಭಾರತದ ರಾ ಎಜೆನ್ಸಿ ಮತ್ತು ಮಲೇಷ್ಯಾ ಅಂಡರ್ವಲ್ಡ್’ನ ಸುತ್ತ ನಡೆಯುವ ಘಟನಾವಳಿಯನ್ನು ಒಳಗೊಂಡಿದೆ ಎಂಬುದು ಮೇಲ್ನೊಟಕ್ಕೆ ತಿಳಿದು ಬಂದಿದೆ.

10ಎಂಡ್ರುತುಕ್ಕುಲ್ಲೇ ಚಿತ್ರದ ಸಾಧಾರಣ ಯಶಸ್ಸಿನ ಬಳಿಕ ಚಿಯಾನ್ ನಟಿಸುತ್ತಿರುವ ಇರು ಮುಗನ್ ಮೇಲೆ ಕಾಲಿವುಡ್ ಬಾಕ್ಸಾಫೀಸ್’ನಲ್ಲಿ ಬೊಂಬಾಟ್ ಮಾತುಗಳು ಕೇಳಿ ಬರುತ್ತಿದೆ. ಈ ಬಹುನಿರೀಕ್ಷೆಯ ವಿಕ್ರಂ ಚಿತ್ರದಲ್ಲಿ ಸೌತ್ ಕ್ವೀನ್ ನಯನತಾರ ನಾಯಕಿಯಾಗಿ ನಟಿಸಿದ್ದಾರೆ. ಮತ್ತೊಂದು ಪ್ರಧಾನ ವೇಷದಲ್ಲಿ ಮೈನಾ ಕ್ಯೂಟಿ ನಿತ್ಯಾ ಮೆನನ್ ಬಣ್ಣ ಹಚ್ಚಿದ್ದಾರೆ. ಕನ್ನಡಿಗ ರವಿವರ್ಮಾ ಸಾಹಸ ನಿರ್ದೇಶನದ ಈ ಆ್ಯಕ್ಷನ್ ಪ್ಯಾಕ್ಡ್ ಚಿತ್ರಕ್ಕೆ ಖ್ಯಾತ ಸೌತ್ ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಚಿತ್ರದ ಸ್ಯಾಟ್’ಲೈಟ್ ರೈಟ್ಸ್ ಈಗಾಗಲೇ ಭರ್ಜರಿ ಬೆಲೆಗೆ ಜಯ ಟಿವಿಯವರು ಖರೀದಿಸಿದ್ದಾರೆ. ಶಂಕರ್ ನಿರ್ದೇಶನದ ‘ಐ’ ಚಿತ್ರದ ಬಳಿಕ ಮತ್ತೊಮ್ಮೆ ವಿಕ್ರಂ ಈ ಚಿತ್ರದಲ್ಲಿ ವಿಭಿನ್ನ ಗೆಟಪ್’ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಒಂದು ಪಾತ್ರವು ರಾ ಆಫೀಸರ್ ‘ಅಖಿಲನ್’ ಆಗಿದ್ದರೆ ಇನ್ನೊಂದು ಸೈಕೊ ‘ಲವ್’ ಹೆಸರಿನ ರೋಲನ್ನು ವಿಕ್ರಂ ನಿಭಾಯಿಸಿದ್ದಾರೆ. ಶಿಬು ತಮೀನ್ಸ್ ನಿರ್ಮಿಸಿರುವ ಈ ಚಿತ್ರವು ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವದಾದ್ಯಂತ ತೆರೆಗೆ ಬರಲಿದೆ.

ಬೈ ದಿ ವೇ , ಟ್ರೈಲರ್ ಇಲ್ಲೇ ಇದೆ ನೋಡಿ !

★ ಕಪ್ಪು ಮೂಗುತ್ತಿ

-Ad-

Leave Your Comments