ಸ್ಯಾಂಡಲ್ ವುಡ್ ಡೈರೆಕ್ಟರ್ ವಿರುದ್ಧ ಐಟಮ್ ಗರ್ಲ್ ಗರಂ

ಬೆಂಗಳೂರಿನಲ್ಲಿ  ಐಟೆಮ್ ಡ್ಯಾನ್ಸ್  ಗರ್ಲ್ ನಿಂದ ಸ್ಯಾಂಡಲ್ ವುಡ್ ಡೈರೆಕ್ಟರ್ ಮೇಲೆ ಅವಹೇಳನಕಾರಿಯಾಗಿ ಫೇಸ್ಬುಕ್ ಪೋಸ್ಟ್ ಹಾಕಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹುತ್ತದ ಸುತ್ತ ಚಿತ್ರದ ಡೈರೆಕ್ಟರ್  ಮೆಲ್ವಿನ್ ವಿರುದ್ಧ ಐಟಮ್ ಡ್ಯಾನ್ಸ್ ಗರ್ಲ್ ಶರಣ್ಯಾ ತಮ್ಮ ಫೇಸ್ ಬುಕ್ ಪೋಸ್ಟ್‌ ನಲ್ಲಿ ಟೀಕಿಸಿದ್ದಾರೆ.

ಡೈರೆಕ್ಟರ್ ಫಿಲ್ಮಂ ಬಗ್ಗೆ ಮಾತನಾಡುವುದಾಗಿ ಕರೆದು ಅಸಹ್ಯವಾಗಿ ವರ್ತಿಸುತ್ತಾರೆ. ಇದೀಗ ತನಗೆ ಹಣ ನೀಡದೇ ವಂಚಿಸಿದ್ದ ಎಂದು ಆರೋಪಿಸಿ ಜಯನಗರ ಪೊಲೀಸ್ ಠಾಣೆಯಲ್ಲಿ ಡೈರೆಕ್ಟರ್ ವಿರುದ್ದ ದೂರು ದಾಖಲಿಸಿದ್ದಾರೆ. ಇದೀಗ ಶರಣ್ಯಾ ವಿರುದ್ದ ದೂರು ನೀಡಲು ಡೈರೆಕ್ಟರ್ ಮೆಲ್ವಿನ್ ಸಿದ್ಧರಾಗಿದ್ದಾರೆ.

ಶರಣ್ಯಾ ವಿರುದ್ದ ಮಾನನಷ್ಟ ಮೊಕದ್ದಮೆಯ ಅಡಿಯಲ್ಲಿ ದೂರು ನೀಡಲಿರುವ ಡೈರೆಕ್ಟರ್ ಮೆಲ್ವಿನ್, ತಮ್ಮ ಮೇಲೆ ಮಾಡಿರುವ ಆರೋಪವನ್ನ ತಳ್ಳಿ ಹಾಕಿದ್ದಾರೆ. ಮೆಲ್ವಿನ್ ತನ್ನ ಚಿತ್ರದ ಒಂದು ಸಾಂಗ್ ಶೂಟ್ ಗಾಗಿ ಒಂದು ಐಟಮ್ ಗರ್ಲ್ ಅವಶ್ಯಕತೆ ಇತ್ತು. ಹೀಗಾಗಿ ಬಾಲಿವುಡ್ ಡೈರೆಕ್ಟರ್ ಸಂದೀಪ್ ಮಲಾನಿ ಅವರನ್ನು ಸಂಪರ್ಕಿಸಿದ್ದೆ. ಅವರು ನನಗೆ ಮುಂಬೈನ ಐಟಮ್ ಗರ್ಲ್ ಶರಣ್ಯಾ ಅವರನ್ನ ರೆಫರ್ ಮಾಡಿದ್ದರು. ನಂತರ ಅವರ ಜೊತೆ ಮಾತುಕತೆ ನಡೆಸಿ 1ದಿನಕ್ಕೆ 15000ರೂ ಮಾತುಕತೆ ನಡೆದಿತ್ತು.

ಶರಣ್ಯಾ ಬೆಂಗಳೂರಿಗೆ ಬಂದಾಗ ಅವರಿಗೆ ವಾಸಿಸಲು ಲಾಡ್ಜ್‌ ನೀಡದೇ ಹೆಣ್ಣುಮಕ್ಕಳು ವಾಸಿಸುವ ಮನೆಯೊಂದರಲ್ಲಿ ವಾಸ್ತವ್ಯ ನೀಡಲಾಗಿತ್ತು. ಅವರ ಎಲ್ಲಾ ಖರ್ಚುಗಳನ್ನ ನಾವೆ ನೋಡಿಕೊಂಡಿದ್ದೇವೆ. ಆದರೆ ಶೂಟಿಂಗ್ ವೇಳೆ ಅವರು ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ನಾವು ಬೇರೆ ಐಟಮ್ ಗರ್ಲ್ ಹಾಕಿಕೊಂಡು ಶೂಟ್ ಮಾಡಿದ್ದೆವು. ಈ ವೇಳೆ ಮುಂಬೈಯಿಂದ ಬಂದಿದ್ದಕ್ಕಾಗಿ 3000 ಖರ್ಚು ವೆಚ್ಚವನ್ನ ಕೊಟ್ಟು ಕಳಿಸಿದ್ದೆವು. ಆದರೆ ಶರಣ್ಯಾ ಪೂರ್ತಿ 15ಸಾವಿರ ಹಣ ನೀಡುವಂತೆ ಪೀಡಿಸುತ್ತಿದ್ದಳು. ಆದರೆ‌ ನಾವು ಡ್ಯಾನ್ಸ್ ಮಾಡದೇ ಹೇಗೆ ಹಣ ನೀಡುವುದು ಎಂದು ಕೇಳಿದ್ದೆವು. ಇದಕ್ಕೆ ಸಿಟ್ಟಿಗೆದ್ದು ಆಕೆ ಫೇಸ್ ಬುಕ್ ನಲ್ಲಿ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ ಎಂದು ಆರೋಪ ಮಾಡಿದ್ದಾರೆ ಮೆಲ್ವಿನ್.

-Ad-

Leave Your Comments