ಇದು ಹ್ಯಾಕು -ಫೇಕುಗಳ ಕಾಲ ಉಸರಾಗಿರ್ರಪ್ಪೋ

ಈ ಸಾಮಾಜಿಕ ಜಾಲತಾಣಗಳಲ್ಲಂತೂ ಯಾರದೋ ಅಕೌಂಟನ್ನ ಮತ್ಯಾರೋ ಹ್ಯಾಕ್  ಮಾಡಿ ತಮಗೆ ಬೇಕಿದ್ದಂಗೆ ಬಳಸಿಕೊಳ್ಳೋದು, ಸಿಕ್ಕಿಹಾಕಿಕೊಂಡ ಮೇಲೆ ಶಿಕ್ಷೆ ಅನುಭವಿಸೋದು ಸಾಮಾನ್ಯವಾಗಿದೆ. ಈ ರೋಗವೀಗ ಹೆಚ್ಚು ಬೆಂಬಲಿಗರಿರುವ ಜನಪ್ರಿಯ ನಟರ ಅಕೌಂಟ್ಗಳಿಗೂ ತಗಲಿಕೊಂಡಿದೆ. ಇಂಥದ್ದನ್ನೆಲ್ಲ ಗಮನಿಸುವ ಅದರಲ್ಲೂ ಟ್ವಿಟ್ಟರ್ ನಲ್ಲಿ ವಾದ -ವಿವಾದ -ಸಂವಾದ ಎಲ್ಲವನ್ನು ಚಟ್ ಪಟ್ ಅಂತ ಮಾಡುವ ಜಗ್ಗೇಶ್ ಎಚ್ಚರಿಕೆ ಜೊತೆ ಕಿವಿಮಾತು ಹೇಳಿದ್ದಾರೆ .

ಮೊನ್ನೆ ಮೊನ್ನೆ ಟ್ವಿಟ್ಟರ್ನಲ್ಲಿ ಅತಿ ಹೆಚ್ಚು ಫಾಲ್ಲೋರ್ಸ್ ಇರೋ ಕಿಚ್ಚ ಸುದೀಪ್ ಅಕೌಂಟನ್ನ ಹ್ಯಾಕ್ ಮಾಡಿದ್ರು . ರಾಜಕುಮಾರ ಚಿತ್ರ ಬಾಹುಬಲಿ ,ಹೆಬ್ಬುಲಿ ರೆಕಾರ್ಡಗಳನ್ನ ಬ್ರೇಕ್ ಮಾಡಿದೆ. ಶುಭಾಶಯಗಳು ಪುನೀತ್ ಮತ್ತು ರಾಜಕುಮಾರ ಚಿತ್ರತಂಡಕ್ಕೆ ಅಂತ   ಸುದೀಪ್ ಟ್ವೀಟ್ ಹಾಗೆ ಬರೆದು ಪೋಸ್ಟ್ ಮಾಡಲಾಗಿತ್ತು. 

 

ಇದನ್ನ ಗಮನಿಸಿದ ನವರಸನಾಯಕ ಜಗ್ಗೇಶ್ ಟ್ವಿಟರ್ನಲ್ಲೇ ಎಚ್ಚ್ಚರಿಕೆ ಕೊಟ್ರು . ಜೊತೆಗೆ ಈ ಪಿಡುಗಿನ ಸುದ್ದಿ  ಹೋಮ್ ಮಿನಿಸ್ಟರ್ ಹಾಗು ಮುಖ್ಯಮಂತ್ರಿಗಳ ಗಮನಕ್ಕೆ ಬರುವಂತೆ ಆಶ್ ಟ್ಯಾಗ್ ಕೂಡ ಮಾಡಿದ್ದಾರೆ .

ಅದಾದ ಮೇಲೆ ಅವರದೇ ಫೇಸ್ ಬುಕ್ ಅಕೌಂಟ್ ನ್ನ ನಕಲಿ ಮಾಡಿರುವುದು ಜಗ್ಗೇಶ್ ಗಮನಕ್ಕೆ  ಬಂದಿದೆ.ತಕ್ಷಣ ಎಚ್ಛೆತ್ತುಕೊಂಡ ಜಗ್ಗೇಶ್ ತಮ್ಮ fb ಖಾತೆಯ ಸ್ಕ್ರೀನ್ ಶಾಟ್ ತೆಗೆದು ಯಾವುದು ಸುಮಾರು ಒಂದು ಲಕ್ಷಕ್ಕೂ ಮೀರಿ ಫಾಲ್ಲೋವರ್ಸ್  ಇರೋ ಪೇಜ್ ನನ್ನದು ಅಂತ ತೋರಿಸಿದ್ದಾರೆ .

ಜೊತೆಗೆ ನಕಲಿ ಖಾತೆಯ ಚಿತ್ರವನ್ನು ತೆಗೆದು ಇದು ನನ್ನ ಸ್ವಂತ ಪುಟವಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಬ್ಯಾಂಕ್ ನಲ್ಲಿ ಹಣವಿಟ್ಟು ಪಾಸ್ವರ್ಡ್ ನಮ್ ಬಳಿ ಇದೆ ಯಾರೇನು ಮಾಡಿಯಾರು ಅಂತ ಕೊಂಚ ನೆಮ್ಮದಿಯಾಗಿ ಇಲ್ಲಂತೂ ಇರೋ ಹಂಗಿಲ್ಲ.ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರೋ ನಟನಟಿಯರು ತಮ್ಮದಲ್ಲದ ಅಭಿಪ್ರಾಯಗಳು ಹ್ಯಾಕು -ಫೇಕ್ ಗಳಿಂದ ಹೋಗೋದನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಿದೆ .

 

-Ad-

Leave Your Comments